ಮೈಸೂರು ದಸರಾ ಅಂದ್ರೆ ಬರೀ ಜಂಬೂಸವಾರಿಯಲ್ಲ... ಸಾಂಸ್ಕೃತಿಕ ಸಂಗಮ

ಮೈಸೂರು ದಸರಾ ಅಂದರೆ ರಾಜವೈಭವದ ಮೆರವಣಿಗೆ ಮಾತ್ರವಲ್ಲ. ಅದೊಂದು ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ, ಮನರಂಜನೆಯ ಸಂಗಮವಾಗಿತ್ತು ಎನ್ನುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಗೊತ್ತಾಗಿ ಬಿಡುತ್ತದೆ. ಅಷ್ಟೇ ಅಲ್ಲ ಕರ್ನಾಟಕದ ಸಂಸ್ಕೃತಿ ಅನಾವರಣದ ವೇದಿಕೆಯಾಗಿಯೂ ದಸರಾ ನಿಲ್ಲುತ್ತದೆ.

ಆಧುನಿಕತೆಗೆ ತಕ್ಕಂತೆ ದಸರಾ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಬದಲಾವಣೆಯಾಗಿದೆ, ಮತ್ತೊಂದಷ್ಟು ಸೇರ್ಪಡೆಯಾಗಿದೆ. ಮನರಂಜನೆಯೊಂದಿಗೆ ಆರ್ಥಿಕ ವಹಿವಾಟಿಗೊಂದು ಮಾರುಕಟ್ಟೆಯಾಗಿಯೂ ದಸರಾ ಗಮನ ಸೆಳೆಯುತ್ತಿದೆ. ಅದೇನೇ ಇರಲಿ, ನಾಲ್ಕು ಶತಮಾನಗಳ ದೀರ್ಘ ಇತಿಹಾಸದ ಮೈಸೂರು ದಸರಾದ ಕಟ್ಟುಪಾಡು, ಸಂಸ್ಕೃತಿ, ಆಚರಣೆಯ ವಿಧಿವಿಧಾನಗಳನ್ನು ಚಾಚೂ ತಪ್ಪದೆ ನಡೆಸುತ್ತಾ ಬಂದಿದ್ದು, ಅದರ ಹೊರತಾಗಿ ಹೊಸ ಕಾರ್ಯಕ್ರಮಗಳ ಸೇರ್ಪಡೆ ಸೇರಿದಂತೆ ಹಲವು ಅಭಿವೃದ್ಧಿಯನ್ನು ದಸರಾ ಕಂಡಿದೆ.

Mysuru Dasara A Cultural Heritage Of Karnataka

ದಸರಾ, ತಾಯಿ ಚಾಮುಂಡೇಶ್ವರಿಯ ಒಂಬತ್ತು ಅವತಾರಗಳ ಪೂಜಾ ಸಂಭ್ರಮವೂ ಆಗಿದೆ. ಹತ್ತನೇ ದಿನದ "ವಿಜಯದಶಮಿ" ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತದೆ. ಬನ್ನಿಮರಕ್ಕೆ ಪೂಜೆ ಸಲ್ಲಿಸಲು ಸಾಗುವ ಚಿನ್ನದ ಅಂಬಾರಿ ಮೆರವಣಿಗೆ ಪ್ರತಿ ವರ್ಷಕ್ಕೂ ಇತಿಹಾಸದ ಬುತ್ತಿಯಾಗಿದೆ. ಒಂಬತ್ತು ದಿನಗಳ ಕಾಲ, ಸಾಹಿತ್ಯ, ಸಂಸ್ಕೃತಿ, ನಾಗರಿಕತೆ, ವಿಜ್ಞಾನ ತಂತ್ರಜ್ಞಾನಗಳ ಈ ರಸದೂಟವು ಮೈಸೂರು ದಸರಾಕ್ಕೆ ಮೆರಗು ತಂದಿದೆ.

Mysuru Dasara A Cultural Heritage Of Karnataka

ಮೈಸೂರು ದಸರಾದಲ್ಲಿ ವಸ್ತುಪ್ರದರ್ಶನ, ಫಲಪುಷ್ಪಪ್ರದರ್ಶನ, ದಸರಾ ಕ್ರೀಡಾಕೂಟ, ದಸರಾ ಚಿತ್ರೋತ್ಸವ ಹಾಗೂ ಯುವ ದಸರಾ ಪಂಚ ಆಕರ್ಷಣೆಯಾಗಿದೆ. ಇದಲ್ಲದೆ ಜಗಮಗಿಸುವ ಅರಮನೆ, ಚಿನ್ನದ ಸಿಂಹಾಸನ, ಅದರಲ್ಲಿ ಯುವರಾಜ ಆಸೀನರಾಗಿ ನಡೆಸುವ ಖಾಸಗಿ ದರ್ಬಾರ್, ಜತೆಗೆ ಅಲ್ಲಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಇಡೀ ನಗರವನ್ನೇ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ವಿದ್ಯುದ್ದೀಪಗಳು ಹೀಗೆ ಒಂದೇ ಎರಡೇ... ಮನೆ ಮನೆಗಳಲ್ಲಿ ನಡೆಯುವ ನವರಾತ್ರಿ ಪೂಜೆ, ಬೊಂಬೆಗಳ ವೈಭವ ಮನಸ್ಸಿಗೆ ಮುದ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+