Mysuru Dasara 2025: ಮೈಸೂರು ದಸರಾ ಉತ್ಸವಕ್ಕೆ ಭಾನು ಮುಷ್ತಾಕ್ ಚಾಲನೆ
Mysuru Dasara 2025: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ಬುಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಸ್ತಾಕ್ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ವೃಶ್ಚಿಕ ಲಗ್ನದಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.
ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದರು. ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬಾನು ಮುಷ್ತಾಕ್ ಅವರು ವೃಶ್ಚಿಕ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ಬಾರಿಯಂತೆ ಈ ಬಾರಿಯು ದಸರಾಗೆ ಅರಮನೆ ನಗರಿ ಮೈಸೂರು ಜಗಮಗಿಸುತ್ತಿದೆ. ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೀದಿಗಳು, ಕಲೆ, ಸಾಹಿತ್ಯ, ಸಂಸ್ಕೃತಿಗಳ ಅನಾವರಣಗಳು, ತಳಿರು ತೋರಣಗಳಿಂದ ಅಲಂಕೃತಗೊಂಡ ಮೈಸೂರು ಅರಮನೆ ನೋಡುಗರನ್ನು ತನ್ನತ್ತೆ ಸೆಳೆಯುತ್ತಿವೆ.
ಮೈಸೂರು ದಸರಾದ ಆಕರ್ಷಣೆಯ ಕೇಂದ್ರ ಬಿಂದುವಾದ ಅಂಬಾರಿ ಮೆರವಣಿಗೆಗೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ. ಒಂದು ತಿಂಗಳ ಹಿಂದೆಯೇ ಅರಮನೆ ಆವರಣದಲ್ಲಿ ಬೀಡುಬಿಟ್ಟಿದ್ದ ಗಜಪಡೆ ನಿತ್ಯದ ತಾಲೀಮ ಮುಗಿಸಿ, ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಹೊತ್ತು ಸಾಗಲು ಸಜ್ಜಾಗಿದೆ. ಅದರಲ್ಲೂ ಅಭಿಮನ್ಯು-ಭೀಮನ ಜೋಡಿ ಈ ಬಾರಿಯ ಮೈಸೂರು ದಸರಾದ ಮೆರುಗು ಹೆಚ್ಚಿಸುವುದರಲ್ಲಿ ಯಾವುದೇ ಆಶ್ಚರ್ಯವವಿಲ್ಲ.
ಮೈಸೂರು ದಸರಾ ಬಂದತೆಂದರೆ ಸಾಕು ಇಡೀ ನಾಡಿಗೆ ನಾಡೇ ಚಾಮುಂಡಿ ಬೆಟ್ಟದತ್ತ ಮುಖ ಮಾಡಲು ಕಾಯುತ್ತಿರುತ್ತದೆ. ಹಾಗೆಯೇ ಇದೀಗ ಇಂದು 2025ರ ದಸರಾಗೆ ಚಾಲನೆ ಸಿಕ್ಕಿದ್ದು, ಇಂದಿನಿಂದಲೇ ದೇಶ, ವಿದೇಶಗಳಿಂದಲೂ ಮೈಸೂರಿನ ಕಡೆ ಪ್ರಯಾಣ ಮಾಡಲು ಆರಂಭಿಸಿದ್ದಾರೆ. ಇಲ್ಲಿನ ಸುಂದರ ಕ್ಷಣಗಳನ್ನು ಕಣ್ತುಂಬಿಕೊಳ್ಳಲೆಂದೇ ಕುಟುಂಬ ಸಮೇತ ಆಗಮಿಸಲು ಸಜ್ಜಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?: ಈ ಬಗ್ಗೆ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ದಸರಾ ಕಾರ್ಯಕ್ರಮದಲ್ಲಿ ಸಹಿಷ್ಣುತೆ, ಸಹಬಾಳ್ವೆ ಮತ್ತು ಸಾಮರಸ್ಯದ ಮಹತ್ವವನ್ನು ಒತ್ತಿಹೇಳಿದರು. ವಿರೋಧದ ನಡುವೆಯೂ ಬಾನು ಮುಷ್ತಾಕ್ರಿಂದ ದಸರಾ ಉದ್ಘಾಟನೆ ಆಗಿದೆ. ಈ ಆಯ್ಕೆ ಸರಿಯಿದೆ ಎಂದು ಹೇಳಿದರು.
ದೇಶದ ಸಂವಿಧಾನದ ಮೂಲ ತತ್ವಗಳಾದ ಸಮಾನತೆ ಮತ್ತು ಸಮಾನ ಅವಕಾಶಗಳ ಬಗ್ಗೆ ಮಾತನಾಡಿದರು. ಬಾನು ಮುಷ್ತಾಕ್ ಅವರ ಆಯ್ಕೆಯನ್ನು ಬೆಂಬಲಿಸಿ, ಅವರ ಸಾಹಿತ್ಯ ಸಾಧನೆಯನ್ನು ಹೊಗಳಿದರು.
ಈ ಬಾರಿ ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ನಡೆದಿದ್ದು ನಾಡಿಗೆ ಗೌರವ ತಂದಿದೆ. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅವಕಾಶ ಇರಬೇಕು. ಈ ಮೂಲ ತತ್ವವನ್ನು ಅರ್ಥಮಾಡಿಕೊಳ್ಳದೆ ಹೋದರೆ, ಅದು ನಾವು ದೇಶಕ್ಕೆ ಮತ್ತು ಸಂವಿಧಾನಕ್ಕೆ ಮಾಡುವ ಅಪಚಾರ ಎಂದು ಹೇಳಿದರು.












Click it and Unblock the Notifications