ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಆಯುಕ್ತರು

|
Google Oneindia Kannada News

ಮೈಸೂರು, ಜುಲೈ 2: ಸಾಂಸ್ಕೃತಿಕ ನಗರಿಯೊಂದಿಗೆ ಅಪರಾಧಗಳ ನಗರಿಯೂ ಆಗುತ್ತಿದೆ ಮೈಸೂರು. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಅಪರಾಧಗಳ ಸಂಖ್ಯೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಪರಾಧಗಳನ್ನು ಹತ್ತಿಕ್ಕಲು ನಗರ ಪೊಲೀಸರು ಮುಂದಾಗಿದ್ದಾರೆ. 2018-2019 ವರ್ಷದೊಳಗಿನ ಅಪರಾಧ ಹಾಗೂ ಕಲೆ ಹಾಕಿದ ಸ್ವತ್ತುಗಳ ಕುರಿತು ಮೈಸೂರು ಖಾಕಿ ಪಡೆ ಮಾಹಿತಿ ನೀಡಿದೆ.

ಮೈಸೂರಿನ ರೇಸ್ ಕೋರ್ಸ್ ಹಿಂಭಾಗದ ಸಿ.ಎಆರ್ ಮೈದಾನದಲ್ಲಿ ನಗರ ಪೊಲೀಸ್ ಘಟಕದ ವತಿಯಿಂದ ವಶಪಡಿಸಿಕೊಂಡ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, 2018 ಮತ್ತು 2019ನೇ ಸಾಲಿನಲ್ಲಿ 511 ವಿವಿಧ ಸ್ವತ್ತು ಕಳುವು ಪ್ರಕರಣಗಳು ಪತ್ತೆಯಾಗಿವೆ. 415 ಆರೋಪಿಗಳನ್ನು ಬಂಧಿಸಲಾಗಿದೆ. ರೂ.5.96.67.763 ಮೌಲ್ಯದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ. 6 ಕೆ.ಜಿ. 321 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ, 211 ದ್ವಿಚಕ್ರ ವಾಹನ, 27 ಕಾರು, ಜೀಪು, 35 ಇತರೆ ವಾಹನಗಳು, 131 ಮೊಬೈಲ್ ಫೋನ್, 12 ಲ್ಯಾಪ್ ಟಾಪ್, 1,12,09,550 ನಗದು, 30 ಜಾನುವಾರುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

 ನಿಯಮ ಉಲ್ಲಂಘಿಸಿದ ಡ್ಯಾನ್ಸ್‌ ಬಾರ್‌ ಮೇಲೆ ದಾಳಿ: 74 ಮಹಿಳೆಯರ ರಕ್ಷಣೆ ನಿಯಮ ಉಲ್ಲಂಘಿಸಿದ ಡ್ಯಾನ್ಸ್‌ ಬಾರ್‌ ಮೇಲೆ ದಾಳಿ: 74 ಮಹಿಳೆಯರ ರಕ್ಷಣೆ

ಲಕ್ಷ್ಮೀಪುರಂ ಠಾಣೆ, ದೇವರಾಜ ಠಾಣೆ, ಕೆ.ಆರ್.ಪೋಲಿಸ್ ಠಾಣೆ, ಜಯಲಕ್ಷ್ಮೀಪುರಂ ಠಾಣೆ, ವಿಜಯನಗರ ಠಾಣೆ, ಆಲನಹಳ್ಳಿ ಠಾಣೆ, ಹೆಬ್ಬಾಳ್ ಠಾಣೆ, ಉದಯಗಿರಿ ಠಾಣೆ, ನಗರ ಅಪರಾಧ ಘಟಕ, ನಗರ ಅಪರಾಧ ವಿಭಾಗ ಸೇರಿದಂತೆ ಇತರೆ ಠಾಣೆಯಲ್ಲಿ ಸ್ವತ್ತುಗಳನ್ನು ವಶಪಡೆಯಲಾಗಿದೆ ಎಂದರು.

Mysuru city police commissioner gave crime details of the year

ಆಪರೇಷನ್ ಸನ್ ರೈಸ್ ಮತ್ತು ಸನ್ಸೆಟ್ - ಬೆಳಿಗ್ಗೆ 6 ರಿಂದ 9ರವರೆಗೆ ಹಾಗೂ ಸಂಜೆ 4 ರಿಂದ 9ವರೆಗೆ ಕಾರ್ಯಾಚರಣೆ, ಆಪರೇಷನ್ ಫಾಸ್ಟ್ ಟ್ರ್ಯಾಕ್- ಸರಗಳ್ಳತನ ಪತ್ತೆ ಕಾರ್ಯಾಚರಣೆ, ಆಪರೇಷನ್ ಡಿಕಾಯ್ -ಸ್ವತ್ತು ಕಳವು ಪ್ರಕರಣ, ಆಪರೇಶನ್ ಖಾಸಗಿ ಸಿಸಿ ಟಿವಿ ಅಳವಡಿಕೆಯಲ್ಲಿ ಪ್ರಮುಖ ಕಟ್ಟಡ, ಮಾಲ್, ಪೆಟ್ರೋಲ್ ಬಂಕ್ ವಸತಿ ಬಡಾವಣೆ ಕಾರ್ಯಕ್ರಮ, ಅಭಯ- ಒಂಟಿಯಾಗಿ ವಾಸವಿರುವ ವಯೋವೃದ್ಧರ ಕಾರ್ಯ ರಕ್ಷಣೆ, ಸುರಕ್ಷಾ -ಬಾಡಿಗೆದಾರರ ಮಾಹಿತಿ ಸಂಗ್ರಹ, ಆಪರೇಷನ್ ಚೀತಾ- ಸಂಚಾರ ಕಾನೂನು ಸುವ್ಯವಸ್ಥೆ ಕಾರ್ಯಾಚರಣೆ, ಚೆಕ್ ಪೋಸ್ಟ್ ವಾಹನ ತಪಾಸಣೆ ಹೀಗೆ ಹತ್ತು ಹಲವು ಯೋಜನೆಯ ಮಾಹಿತಿಯನ್ನು ಈಗಾಗಲೇ ಪೊಲೀಸ್ ವೆಬ್ ಸೈಟ್ ನಲ್ಲಿ ನಮೂದಿಸಲಾಗಿದೆ ಎಂದರು.

 ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಮುಂದಾದ ನೂರಾರು ರೈತರ ಬಂಧನ ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಮುಂದಾದ ನೂರಾರು ರೈತರ ಬಂಧನ

ಅಪರಾಧಗಳ ನಿಯಂತ್ರಣ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದ್ದು, ನ್ಯೂ ಬೀಟ್ ನಲ್ಲಿ ಸಭೆ, ಶಾಲಾ-ಕಾಲೇಜಿಗೆ ಭೇಟಿ, ಕರಪತ್ರ ವಿತರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

English summary
Mysuru city police commissioner K.T. Balakrishna gave information about crime cases which happend in the year 2018-2019. He also spoke about various awareness programmes regarding crime. 2018-2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X