ಮೈಸೂರು ಮಹಾನಗರಪಾಲಿಕೆಯ ಜೆಡಿಎಸ್ ಸದಸ್ಯನಿಂದ ಅಧಿಕಾರಿಗೆ ಧಮ್ಕಿ!
ಮೈಸೂರು, ಏಪ್ರಿಲ್ 12 : ಕಾಮಗಾರಿ ವಿಚಾರವಾಗಿ ಮೈಸೂರು ಮಹಾನಗರಪಾಲಿಕೆಯ ಜೆಡಿಎಸ್ ಕಾರ್ಪೋರೇಟರ್ ಪಾಲಿಕೆಯ ಅಭಿವೃದ್ಧಿ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದಾರೆ.
ಮೈಸೂರು ನಗರಪಾಲಿಕೆಯ 57ನೇ ವಾರ್ಡಿನ ಜೆಡಿಎಸ್ ಸದಸ್ಯ ನಟರಾಜ್ ಅವರು ಕಾಮಗಾರಿ ವಿಚಾರವಾಗಿ ಪಾಲಿಕೆಯ ಅಭಿವೃದ್ಧಿ ಅಧಿಕಾರಿ ಸಿದ್ದಶೆಟ್ಟಿ ಅವರಿಗೆ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಬೆದರಿಕೆ ಹಾಕಿದ್ದಾರೆ.

ಅಧಿಕಾರಿಗಳಿಂದ ಅಭಿವೃದ್ದಿ ಕೆಲಸಗಳನ್ನು ಮಾಡಿಸಿಕೊಳ್ಳುವುದು ಸರಿ. ಆದರೆ, ಅವಾಚ್ಯ ಶಬ್ಧಗಳಿಂದ ನಿಂದಿಸೋದು ಎಷ್ಟು ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆ.
ಇನ್ನು ಈ ಬಗ್ಗೆ ಸಿದ್ದಶೆಟ್ಟಿ ಅವರು ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.












Click it and Unblock the Notifications