ಪ್ರಕಾಶ್ ರೈ ಲೀಗಲ್ ನೋಟಿಸ್ ಗೆ ಉತ್ತರ ಕೊಟ್ಟ ಸಿಂಹ
ಮೈಸೂರು, ನವೆಂಬರ್ 23: ನಟ ಪ್ರಕಾಶ್ ರೈ ಹಾಗೂ ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ಆರೋಪ-ಪ್ರತ್ಯಾರೋಪಗಳು ಮುದುವರೆದಿವೆ.
ಸಾಮಾಜಿಕ ಜಾಲತಾಣಗಳಲ್ಲಿ 'ಖಳನಟ' ಎಂದು ಟೀಕಿಸಿದ್ದ ಪ್ರತಾಪ್ ಸಿಂಹಗೆ ಪ್ರಕಾಶ್ ರೈ ಲೀಗಲ್ ನೋಟಿಸ್ ನೀಡಿದ್ದರು. ಇದೀಗ ಆ ನೋಟಿಸ್ ಗೆ ಪ್ರತಾಪ್ ಸಿಂಹ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು. ಪ್ರಕಾಶ್ ರೈ ನೀಡಿರುವ ನೋಟಿಸ್ ನಲ್ಲಿ ಯಾವ ಕಾಯ್ದೆ?, ಏನು? ಎನ್ನುವುದೇ ಇಲ್ಲ. ಉತ್ತರ ಕೊಡಲು ಈ ನೋಟಿಸ್ ನಲ್ಲಿ ಏನಿದೆ? ಎಂದರು.

ಪ್ರಕಾಶ್ ರೈಗೆ ಬೆದರಿಕೆ ಇದ್ದರೆ ತಕ್ಷಣ ಪೊಲೀಸ್ ಭದ್ರತೆ ಪಡೆದುಕೊಳ್ಳಲಿ. ಎಲ್ಲೋ ಕುಳಿತು ಮನಬಂದಂತೆ ಹೇಳಿಕೆ ನೀಡಿದರೆ ಪ್ರಯೋಜನವಿಲ್ಲ. ಸಿಎಂ, ಗೃಹ ಸಚಿವರ ಗಮನಕ್ಕೆ ತಂದು ಅವರು ಭದ್ರತೆ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಕಾಶ್ ರೈ ಚುನಾವಣೆಗೆ ಬರಲಿ ಯಾರಿಗೆ ಜನ ಬೆಂಬಲವಿದೆ ಎಂದು ಗೊತ್ತಾಗುತ್ತೆ ಎಂದು ಸವಾಲು ಹಾಕಿದರು.












Click it and Unblock the Notifications