ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಬೆಂಗ್ಳೂರು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ

|
Google Oneindia Kannada News

ಮೈಸೂರು, ಜೂ. 04 : ಬೆಂಗಳೂರು-ಮೈಸೂರು ನಡುವಿನ ಜೋಡಿ ರೈಲು ಮಾರ್ಗ ಕಾಮಗಾರಿ ಈ ವರ್ಷ ಪೂರ್ಣಗೊಳ್ಳಲಿದ್ದು, ನಂತರ ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ. 1 ಗಂಟೆ 40 ನಿಮಿಷದಲ್ಲಿ ಬೆಂಗಳೂರು ತಲುಪಬಹುದಾಗಿದೆ.

ಮೈಸೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕರಾದ ರಾಜಕುಮಾರ್ ಲಾಲ್ ಅವರು ಈ ಕುರಿತು ಮಾಹಿತಿ ನೀಡಿದರು. 2015ರ ವರ್ಷಾಂತ್ಯಕ್ಕೆ ಬೆಂಗಳೂರು-ಮೈಸೂರು ನಡುವಿನ ಜೋಡಿ ರೈಲು ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. [2016ರಲ್ಲಿ ಹಾಸನ-ಬೆಂಗಳೂರು ರೈಲು ಸಂಚಾರ]

track doubling

ಎರಡು ನಗರಗಳ ನಡುವಿನ 139 ಕಿ.ಮೀ. ಮಾರ್ಗದಲ್ಲಿ ಸದ್ಯ ಪ್ರಯಾಣಿಸಲು 2 ಗಂಟೆಗಳು ಬೇಕಾಗಿದೆ. ಜೋಡಿ ಮಾರ್ಗ ಪೂರ್ಣಗೊಂಡರೆ 1 ಗಂಟೆ 40 ನಿಮಿಷದಲ್ಲಿ ಪ್ರಯಾಣಿಸಬಹುದಾಗಿದೆ. ಬೆಂಗಳೂರು-ಮೈಸೂರು ನಡುವೆ ತಡೆ ರಹಿತ ರೈಲನ್ನು ಓಡಿಸುವ ಪ್ರಸ್ತಾವನೆ ಇಲಾಖೆ ಮುಂದಿದೆ ಎಂದು ಹೇಳಿದರು. [76 ಕಿ.ಮೀ.ನೂತನ ಮಾರ್ಗದ ಕಾಮಗಾರಿ ಆರಂಭಿಸಲಿದೆ ರೈಲ್ವೆ]

ಶ್ರೀರಂಗಪಟ್ಟಣದಲ್ಲಿನ ಟಿಪ್ಪು ಶಸ್ತ್ರಾಗಾರ ಸ್ಥಳಾಂತರ ಮತ್ತು ಕಾವೇರಿ ಸೇತುವೆ ನಿರ್ಮಾಣದಿಂದಾಗಿ ಜೋಡಿ ಮಾರ್ಗದ ಕಾಮಗಾರಿ ನಿಧಾನವಾಗುತ್ತಿದೆ. ಈ ಕಾಮಗಾರಿಗಳನ್ನುಪೂರ್ಣಗೊಳಿಸಿ 20015ರ ಅಂತ್ಯಕ್ಕೆ ಜೋಡಿ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದರು. [ತುಮಕೂರು-ಅರಸೀಕೆರೆ ಜೋಡಿ ಮಾರ್ಗಕ್ಕೆ ಒಪ್ಪಿಗೆ]

ಎರಡು ನಗರಗಳ ಜೋಡಿ ಹಳಿ ಕಾಮಗಾರಿ ಪೂರ್ಣಗೊಂಡರೆ ಮೈಸೂರಿಗೆ ಆಗಮಿಸುವ ಜನರ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಮಾರ್ಗದಲ್ಲಿನ ಶೇ 90ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಮಂಡ್ಯದಲ್ಲಿ ಯೋಜನೆಗೆ ತೊಡಕಾಗಿದ್ದ ಭೂ ವಿವಾದವನ್ನು ಬಗೆಹರಿಸಲಾಗಿದೆ ಎಂದು ರಾಜಕುಮಾರ್ ಲಾಲ್ ವಿವರಣೆ ನೀಡಿದರು.

English summary
South Western Railway Mysuru division Divisional Manager Rajkumar Lal said, Mysuru-Bengaluru track doubling is expected to be completed by the end of this year 2015, commuting time between the two cities could be reduced to less than 2 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X