ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ "ಬೆಸ್ಟ್ ಡೆಕೊರೇಟೆಡ್" ಗರಿ
ಮೈಸೂರು, ಸೆಪ್ಟೆಂಬರ್ 9: ಸಾಂಸ್ಕೃತಿಕ ನಗರಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ಪ್ರಶಸ್ತಿಯೊಂದು ಲಭಿಸಿದೆ. ದೇಶದ ಅತ್ಯುತ್ತಮ ಸಿಂಗರಿತ ವಿಮಾನ ನಿಲ್ದಾಣಗಳ ಪೈಕಿ ಮೂರನೇ ಸ್ಥಾನವನ್ನು ಈ ನಿಲ್ದಾಣ ಪಡೆದುಕೊಂಡಿದೆ.
ದೇಶದ 3ಎ ವಿಭಾಗದ ವಿಮಾನ ನಿಲ್ದಾಣಗಳಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ "ಬೆಸ್ಟ್ ಡೆಕೊರೇಟೆಡ್ ಏರ್ ಪೋರ್ಟ್" ಎಂಬ ಗೌರವ ಒಲಿದಿದೆ. ಈ ಬಾರಿಯ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭ ಈ ನಿಲ್ದಾಣದ ಟರ್ಮಿನಲ್ ಅನ್ನು ಕೇಸರಿ, ಬಿಳಿ, ಹಸಿರು ಬಣ್ಣದ ವಿದ್ಯುತ್ ಬಲ್ಬುಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಬಣ್ಣದ ರಂಗೋಲಿಯಿಂದ ಸಿಂಗರಿಸಲಾಗಿತ್ತು. ಇದಕ್ಕೆ ಪ್ರಯಾಣಿಕರಿಂದ ಶ್ಲಾಘನೆ ಕೂಡ ವ್ಯಕ್ತವಾಗಿತ್ತು.

ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ಅವರನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಅನುಜ್ ಅಗರವಾಲ್ ಅಭಿನಂದಿಸಿದ್ದಾರೆ. ಸೆಪ್ಟೆಂಬರ್ 3ರಂದು ಪ್ರಶಂಸನಾ ಪತ್ರವನ್ನೂ ಕಳುಹಿಸಲಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಅವರನ್ನು ಕರೆಸಿ ಗೌರವಿಸಿರುವುದು, ನಿಲ್ದಾಣವನ್ನು ಭಿನ್ನ ಪರಿಕಲ್ಪನೆಯಲ್ಲಿ ಸಿಂಗರಿಸಿದ್ದು, ಇತ್ಯಾದಿ ಅಂಶಗಳು ಗಮನ ಸೆಳೆದಿವೆ ಎಂದು ಪ್ರಾಧಿಕಾರದ ಅಧ್ಯಕ್ಷ ಅನೂಜ್ ಅಗರ್ವಾಲ್ ಪ್ರಶಂಸಾ ಪತ್ರದಲ್ಲಿ ಶ್ಲಾಘಿಸಿದ್ದಾರೆ.












Click it and Unblock the Notifications