ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿಶ್ವವಿದ್ಯಾಲಯ: ಕರೆಸ್ಪಾಂಡೆನ್ಸ್ ಕೋರ್ಸ್ ಗೆ ಬಂದ ಅರ್ಜಿಗಳೆಷ್ಟು?

|
Google Oneindia Kannada News

ಮೈಸೂರು, ಅಕ್ಟೋಬರ್. 28: ದೂರ ಶಿಕ್ಷಣದ ಮೂಲಕ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಸರಿಸಮನಾಗಿ ವಿದ್ಯಾರ್ಥಿಗಳನ್ನು ಸೆಳೆಯಲು ಮುಂದಾಗಿದ್ದ ಮೈಸೂರು ವಿವಿಗೆ ನಿರೀಕ್ಷಿತ ಯಶಸ್ಸು ದೊರೆತಿಲ್ಲ. ಹೌದು, ಮೈಸೂರು ವಿಶ್ವವಿದ್ಯಾಲಯ ಹೊಸದಾಗಿ ಆರಂಭಿಸಿರುವ 11 ದೂರ ಶಿಕ್ಷಣ ಕೋರ್ಸುಗಳಿಗೆ 33 ಅರ್ಜಿಗಳು ಮಾತ್ರ ಬಂದಿವೆ ಎಂಬುದು ಬೇಸರದ ಸಂಗತಿ.

ರಾಜ್ಯದ ವಿವಿಧ ವಿವಿಗಳ ಪೈಕಿ ಮೈಸೂರು ವಿವಿಯೂ ದೂರ ಶಿಕ್ಷಣ ಕೋರ್ಸುಗಳನ್ನು ನಡೆಸುತ್ತಿದೆ. 1980ರಿಂದಲೇ ಅಂಚೆ ಮತ್ತು ತೆರಪಿನ ಶಿಕ್ಷಣ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದ ಮೈಸೂರು ವಿವಿಯು 1996ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ದೂರ ಶಿಕ್ಷಣ ಕೋರ್ಸ್ ನಡೆಸುವುದನ್ನು ನಿಲ್ಲಿಸಿತ್ತು.

ಭದ್ರತಾ ಕೋರ್ಸ್‌ಗಳಿಗಾಗಿಯೇ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯಭದ್ರತಾ ಕೋರ್ಸ್‌ಗಳಿಗಾಗಿಯೇ ರಾಜ್ಯದಲ್ಲಿ ಹೊಸ ವಿಶ್ವವಿದ್ಯಾಲಯ

ಇದೀಗ ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ)ವು ದೂರ ಶಿಕ್ಷಣ ಕೋರ್ಸುಗಳನ್ನು ನಡೆಸಲು ಅನುಮತಿ ನೀಡಿದ ಕಾರಣ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಿತ್ತು.

Mysore University has only 33 applications for distance courses

ವಿವಿಗೆ ಅ.20ರೊಳಗೆ ಕೋರ್ಸುಗಳಿಗೆ ನೋಂದಣಿ ಮಾಡಿಕೊಳ್ಳುವಂತೆ ಯುಜಿಸಿ ಗಡುವು ನೀಡಿತ್ತು. ಆದರೆ, ಮೈಸೂರು ವಿವಿಗೆ ಸಿಕ್ಕ ಕಾಲಾವಕಾಶ ಮಾತ್ರ ತೀರಾ ಕಡಿಮೆ. ಅ.3ರಂದು ಮಾನ್ಯತೆ ನೀಡಿದ್ದ ಯುಜಿಸಿಯು ಕೇವಲ 17 ದಿನಗಳನ್ನು ನೀಡಿತ್ತು.

ಈ ಅವಧಿಯಲ್ಲಿ ರಜಾದಿನ ಕಳೆದು ಅರ್ಜಿ ಸಲ್ಲಿಸಲು ಕಡಿಮೆ ಕಾಲಾವಕಾಶ ಸಿಕ್ಕಿತ್ತು. ಆದರೆ, ಮೈಸೂರು ವಿವಿಯು ಇಷ್ಟು ಕಡಿಮೆ ಅರ್ಜಿಗಳನ್ನು ನಿರೀಕ್ಷಿಸಿರಲಿಲ್ಲ.

ರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿ

ರಾಜ್ಯದ ಎಲ್ಲ ವಿವಿಗಳಿಗಿಂತ ಭಿನ್ನವಾಗಿ ಮೈಸೂರು ವಿವಿಯಲ್ಲಿ ದೂರಶಿಕ್ಷಣ ಕೋರ್ಸುಗಳನ್ನು ಸೆಮಿಸ್ಟರ್ ಪದ್ಧತಿಯಲ್ಲಿ ಜಾರಿಗೆ ತಂದಿದ್ದರೂ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಸೋತಿದೆ. ಜತೆಗೆ ಆಯ್ಕೆ ಆಧಾರಿತ ಕ್ರೆಡಿಟ್ ಪದ್ಧತಿ (ಸಿಬಿಸಿಎಸ್) ಅಳವಡಿಸಿಕೊಂಡಿರುವುದೂ ವಿಶೇಷವಾಗಿತ್ತು.

ದೂರ ಶಿಕ್ಷಣಕ್ಕಾಗಿ 11 ಕೋರ್ಸು ಗಳಿಗೆ ವಿವಿ ಅರ್ಜಿ ಆಹ್ವಾನಿಸಿತ್ತು. ಆದರೆ, ವಿವಿಯು 25 ಕೋರ್ಸುಗಳಿಗೆ ಮಾನ್ಯತೆ ಪಡೆದಿದೆ.

ಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನಮೈಸೂರು ಮುಕ್ತ ವಿವಿಗೆ ಮರುಜೀವ: ಹೊಸ ಕೋರ್ಸ್ ಗೆ ಅರ್ಜಿ ಆಹ್ವಾನ

ಅರ್ಜಿ ಆಹ್ವಾನಿಸಿದ ಕೋರ್ಸುಗಳೆಲ್ಲವೂ ಬಿ.ಎ. ಕೋರ್ಸುಗಳಾಗಿದ್ದು, ಏಕ ವಿಷಯ ಪದವಿ ಕೋರ್ಸುಗಳನ್ನು ನಡೆಸಲು ರಾಜ್ಯದಲ್ಲಿ ಅವಕಾಶವಿಲ್ಲದ ಕಾರಣ ಯುಜಿಸಿಗೆ ತ್ರಿವಿಷಯ ಪದವಿ ಕೋರ್ಸು ನಡೆಸಲು ಅನುಮತಿ ಕೋರಲು ವಿವಿ ನಿರ್ಧರಿಸಿತ್ತು.

ಅರ್ಜಿಗಳು ಕಡಿಮೆ ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಅರ್ಜಿ ಸ್ವೀಕರಿಸಲು ಹೆಚ್ಚಿನ ಕಾಲಾವಕಾಶ ಕೋರಿ ಯುಜಿಸಿಗೆ ಮೈಸೂರು ವಿಶ್ವವಿದ್ಯಾಲಯ ಅರ್ಜಿ ಸಲ್ಲಿಸಲಿದೆ. ಇನ್ನು ಕರಾಮುವಿಗೆ ಯುಜಿಸಿ ಮಾನ್ಯತೆ ನವೀಕರಣಗೊಳ್ಳದೇ 3 ವರ್ಷಗಳಿಂದ ಉಂಟಾಗಿದ್ದ ಗೊಂದಲವೂ ಶಿಕ್ಷಣಾರ್ಥಿಗಳ ಆಸಕ್ತಿಯನ್ನು ತಗ್ಗಿಸಿದಂತಾಗಿದೆ.

ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?ಯುಜಿಸಿ ಮಾನ್ಯತೆ ಪಡೆದ ಕೆಎಸ್‌ಒಯುನ 17 ಕೋರ್ಸ್‌ಗಳು ಯಾವುವು?

ಇಲ್ಲಿ ಪಡೆಯುವ ಪದವಿಗೆ ಮಾನ್ಯತೆ ಸಿಗುತ್ತದೆಯೋ ಇಲ್ಲವೋ ಎಂಬ ಸಂಶಯ ಶಿಕ್ಷಣಾರ್ಥಿಗಳಲ್ಲಿ ಇನ್ನೂ ದೂರಾಗಿಲ್ಲ. ಇದು ಕೂಡ ಅರ್ಜಿಗಳ ಸಲ್ಲಿಕೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗಿದೆ.

English summary
Mysore University has only 33 applications for newly launched 11 distance courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X