ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಕಳ್ಳರಿಂದ ರಕ್ಷಿಸಲ್ಪಟ್ಟ ಮಕ್ಕಳಿನ್ನೂ ಅನಾಥ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 25 : ಮೈಸೂರಿನಲ್ಲಿ ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ 18 ಮಕ್ಕಳನ್ನು ರಕ್ಷಿಸಿದ ಪೊಲೀಸರು ಇದೀಗ 18 ಮಕ್ಕಳ ಪೈಕಿ ನಾಲ್ವರು ಮಕ್ಕಳ ಪೋಷಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ರಕ್ಷಿಸಲಾಗಿರುವ 18 ಮಕ್ಕಳ ಪೈಕಿ ಬಹುತೇಕ ಮಕ್ಕಳನ್ನ ಪೋಷಕರಿಗೆ ಅಧಿಕಾರಿಗಳು ಒಪ್ಪಿಸಿದ್ದರು. ಆದರೆ ಲಯ, ಅಖಿಕ್, ಅಂತೋಣಿ, ಆದ್ಯ ಈ ನಾಲ್ವರು ಮಕ್ಕಳ ಪೋಷಕರ ಪತ್ತೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Mysore: Four Children rescued in Children selling mafia still left anonymous

ಇವು ಮಂಡಿ ಮೊಹಲ್ಲಾದ ನಸೀಮಾ ನರ್ಸಿಂಗ್ ಹೋಂನಲ್ಲಿ ಜನಿಸಿರುವ ಮಕ್ಕಳಾಗಿದ್ದು. ಆಸ್ಪತ್ರೆಯಿಂದ ನಾಪತ್ತೆಯಾದ್ದವು ಎನ್ನಲಾಗಿತ್ತು. ಮಕ್ಕಳ ಮಾರಾಟ ಜಾಲ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

ಬಳಿಕ ಎಚ್ಚೆತ್ತುಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ 18 ಮಕ್ಕಳನ್ನ ರಕ್ಷಿಸಿದ್ದರು. ಬಳಿಕ ಬಹುತೇಕ ಮಕ್ಕಳನ್ನು ಅವರ ಪೋಷಕರಿಗೆ ಅಧಿಕಾರಿಗಳು ಒಪ್ಪಿಸಿದ್ದರು.

ಆದರೆ, ನಾಲ್ವರು ಮಕ್ಕಳ ಪೋಷಕರು ಇನ್ನು ಪೋಷಕರು ಪತ್ತೆಯಾಗಿಲ್ಲ. ಹೀಗಾಗಿ ಪೋಷಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಂದ ಮನವಿ ಮಾಡಿದ್ದು, ಮಕ್ಕಳ ಪೋಷಕರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

English summary
Four Children who were rescued from the childress selling mafia recently have not yet able to get their parents. Police are trying at their level best to find their parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X