ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂರಾರು ಪ್ರಯಾಣಿಕರ ಜೀವ ಉಳಿಸಿದ ರೈಲು ಚಾಲಕ

By Srinath
|
Google Oneindia Kannada News

mysore-bangalore-chamundi-express-halted-driver-detects-crack-in-rail
ಮೈಸೂರು, ಮಾರ್ಚ್ 18- ಚಾಮುಂಡಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ದೊಡ್ಡ ದುರಂತದಿಂದ ಅದೃಷ್ಟವಾಶಾತ್ ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ಬೆಂಗಳೂರಿನತ್ತ ಹೊರಟಿದ್ದ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ ಚಾಲಕ ಸಕಾಲಿಕವಾಗಿ ತನ್ನ ಬುದ್ಧಿಮತ್ತೆ ಪ್ರದರ್ಶಿಸಿ, ಸಂಭವಿಸಬಹುದಾಗಿದ್ದ ಭಾರಿ ದುರಂತವನ್ನು ತಪ್ಪಿಸಿ ಪ್ರಯಾಣಿಕರು ಮತ್ತು ಇಲಾಖೆಯಿಂದ ಮೆಚ್ಚುಗೆ ಗಳಿಸಿದ್ದಾರೆ.

ಬೇಸಿಗೆ ಬಿಸಿಲು ತೋರಿದ ಪ್ರಕೋಪ:
ಏನಾಯಿತೆಂದರೆ ನಿನ್ನೆ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಸದರಿ ಚಾಮುಂಡಿ ಎಕ್ಸ್ ಪ್ರೆಸ್ ಮೈಸೂರಿನಿಂದ ಹೊರಟಿತ್ತು. ಆದರೆ ಮದ್ದೂರಿನ ನಿಡಘಟ್ಟ ಬಳಿಗೆ ಬರುವ ವೇಳೆಗೆ ಹಳಿಯಲ್ಲಿ ವಿಚಿತ್ರ ಶಬ್ದ ಕೇಳಿಬಂದಿದೆ. ನಾಡಿಮಿಡಿತದಿಂದಲೇ ವೈದ್ಯರು ರೋಗಲಕ್ಷಣ ಅರಿಯುವಂತೆ ಹಳಿಯಲ್ಲಿನ ಭಿನ್ನ ರಾಗ ಅರಿತ ರೈಲು ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ಸ್ವಲ್ಪ ದೂರ ಹಳಿಗಳ ಮೇಲೆ ನಡೆದುಹೋಗಿದ್ದಾರೆ. ಅನತಿ ದೂರ ನಡೆಯುವಷ್ಟರಲ್ಲಿ ಹಳಿಯೊಂದು 2 ಅಂಗುಲ ಬಿರುಕು ಬಿಟ್ಟಿರುವುದು ಕಣ್ಣಿಗೆ ಬಿದ್ದಿದೆ.

ಆತಂಕಗೊಂಡ ಚಾಲಕ ತಕ್ಷಣ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಮುಂದಿನ ಕಾರ್ಯಚರಣೆಯಲ್ಲಿ ಸಮೀಪದಲ್ಲೇ ಜೋಡಿ ಹಳಿ ಕಾಮಗಾರಿ ನಡೆಸುತ್ತಿದ್ದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ, ಬಿರುಕುಬಿಟ್ಟಿದ್ದ ಹಳಿಯನ್ನು ಬದಲಾಯಿಸಿದ್ದಾರೆ, ಮುಂದಿನ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಸುಮಾರು 1 ಗಂಟೆ ಕಾಲ ರೈಲು ಪ್ರಯಾಣ ವ್ಯತ್ಯಯಗೊಂಡಿತ್ತು. ಇತರೆ ರೈಲುಗಳ ಸಂಚಾರವೂ ಏರುಪೇರಾಯಿತು.

ಇಲಾಖೆ, ಪ್ರಯಾಣಿಕರಿಂದ ಪ್ರಶಂಸೆ: ಹಳಿ ನಾಡಿಮಿಡಿತ ಅರಿಯುವಲ್ಲಿನ ತನ್ನ ಅನುಭವ ಮತ್ತು ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರ ಜೀವ ಉಳಿಸಿದ್ದಕ್ಕೆ ಪ್ರಯಾಣಿಕರು ಚಾಲಕನನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. 'ಚಾಲಕ ಕೊಂಚವೇ ನಿರ್ಲಕ್ಷ್ಯ ತೋರಿದ್ದರೂ ದೊಡ್ಡ ದುರಂತ ನಡೆದುಹೋಗುತ್ತಿತ್ತು. ಚಾಲಕನ ಸಮಯಪ್ರಜ್ಞೆ ಅನನ್ಯ' ಎಂದು ಇಲಾಖೆಯೂ ಅತೀವ ಪ್ರಶಂಸೆ ವ್ಯಕ್ತಪಡಿಸಿದೆ.

'ಪ್ರಯಾಣಿಕರು ಹೆಚ್ಚಾಗಿ ಮೈಸೂರು-ಬೆಂಗಳೂರು ಮಧ್ಯೆ ದಿನವಹಿ ಸಂಚರಿಸುವವರು. ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಇಂತಹ ನ್ಯೂನತೆಗಳು ಕಂಡುಬರುತ್ತವೆ' ಎಂದು ನಿಡಘಟ್ಟ ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.

English summary
Mysore-Bangalore Chamundi Express halted - Driver detects crack in rail. An alert driver of the Bangalore-bound Chamundi Express saved the lives of hundreds of passengers when he suspected cracks in the tracks and brought the train to a timely halt on Monday morning. It is said that the train that left Mysore for Bangalore on scheduled experienced a rattling sound when it approached Nidaghatta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X