• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಮುಲ್ ಚುನಾವಣೆ; ಸಾ. ರಾ. ಮಹೇಶ್ v/s ಜಿ. ಟಿ. ದೇವೇಗೌಡ!

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 03: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮಾರ್ಚ್ 16ರಂದು ಚುನಾವಣೆ ನಡೆಯಲಿದ್ದು, ತೀವ್ರ ಕುತೂಹಲ ಹುಟ್ಟುಹಾಕಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ, ಮೈಸೂರು ವಿಭಾಗೀಯ 7, ಹುಣಸೂರು ವಿಭಾಗೀಯ 8 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮಾರ್ಚ್ 8 ನಾಮಪತ್ರ ಸಲ್ಲಿಸಲು ಕೊನೆ ದಿನ. ಮಾರ್ಚ್ 9ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮಾರ್ಚ್ 10ರಂದು ನಾಮಪತ್ರ ವಾಪಾಸ್ ಪಡೆಯಬಹುದು.

ಕೆ.ಆರ್ ನಗರ ಕ್ಷೇತ್ರ; ಜಿಟಿ ದೇವೇಗೌಡ ಕುಟುಂಬಕ್ಕೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್ಕೆ.ಆರ್ ನಗರ ಕ್ಷೇತ್ರ; ಜಿಟಿ ದೇವೇಗೌಡ ಕುಟುಂಬಕ್ಕೆ ಪಂಥಾಹ್ವಾನ ನೀಡಿದ ಸಾ.ರಾ ಮಹೇಶ್

ಮಾ.16ರಂದು ಬೆಳಗ್ಗೆ 8 ರಿಂದ ಸಂಜೆ 4ರ ತನಕ ಮತದಾನ ನಡೆಯಲಿದೆ. ಅಂದು ಸಂಜೆ 5ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಒಟ್ಟು 1104 ಸೊಸೈಟಿಗಳಿಂದ 1030 ಮಂದಿ ಮತ ಚಲಾವಣೆ ಮಾಡಲಿದ್ದಾರೆ.

ಶಾಸಕ ಜಿ‌.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗಶಾಸಕ ಜಿ‌.ಟಿ ದೇವೇಗೌಡ ಹಾಗೂ ಜೆಡಿಎಸ್ ವರಿಷ್ಠರ ನಡುವಿನ ಮುಸುಕಿನ ಗುದ್ದಾಟ ಬಹಿರಂಗ

ಪ್ರತಿಷ್ಠೆಯಾದ ಚುನಾವಣೆ; ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರಿಗೆ ಮೈಮುಲ್ ಚುನಾವಣೆ ಪ್ರತಿಷ್ಠೆಯಾಗಿದೆ. ಚುನಾವಣೆಯಲ್ಲಿ ಕೆ. ಆರ್. ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಬಣ, ಜಿಟಿಡಿ ಬಣದ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ.

ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್! ಜೆಡಿಎಸ್ ಮುಖಂಡ ಜಿಟಿ ದೇವೇಗೌಡರಿಗೆ ಡಿಸಿಎಂ ಸ್ಥಾನದ ಆಫರ್!

ಆದ್ದರಿಂದ ಈ ಚುನಾವಣೆ ಕುತೂಹಲವನ್ನು ಮೂಡಿಸಿದೆ. ಜೆಡಿಎಸ್‌ ಪಕ್ಷದಿಂದ ಒಂದು ಹೆಜ್ಜೆ ಆಚೆ ಇಟ್ಟಿರುವ ಜಿ. ಟಿ. ದೇವೇಗೌಡರು ತಮ್ಮ ಪ್ರಾಬಲ್ಯ ತೋರಲು ಮೈಮುಲ್ ಚುನಾವಣೆ ವೇದಿಕೆಯಾಗಿದೆ. ಇನ್ನು, ಸಾ. ರಾ. ಮಹೇಶ್‌ ಅವರಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಮೈಸೂರು ಭಾಗದಲ್ಲಿ ತಾವು ಪ್ರಬಲ ನಾಯಕರು ಎನ್ನುವುದನ್ನು ಸಾಬೀತುಗೊಳಿಸಲು ಇದು ಸದಾವಕಾಶವಾಗಿದೆ.

ಚುನಾವಣೆ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸಿನಿಂದ ನಡೆಯುತ್ತಿವೆ. ಕಳೆದ ವಾರ ಮುಕ್ತಾಯವಾದ ಮೈಸೂರು ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರ ಗಿಟ್ಟಿಸುವಲ್ಲಿ ಶಾಸಕ ಸಾ. ರಾ. ಮಹೇಶ್ ಯಶಸ್ವಿಯಾಗಿದ್ದರು. ಮೇಯರ್ ಚುನಾವಣೆಯಿಂದ ಜಿ. ಟಿ. ದೇವೇಗೌಡ ಸಂಪೂರ್ಣವಾಗಿ ದೂರವಾಗಿದ್ದರು. ಇದು ದಳಪತಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

English summary
Schedule announced for Mysore District Co-Operative Milk Producers Societies Union Limited (MYMUL) election. Election will be held on March 16. This election prestige for JD(S) MLA Sa Ra Mahesh and Chamundeshwari MLA G. T. Devegowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X