• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಲಿವಿಂಗ್ ಟುಗೆದರ್"ನಲ್ಲಿದ್ದ ಮಹಿಳೆ ಮೇಲಿನ ಆಸೆ ಹೀಗೆಲ್ಲಾ ಮಾಡಿಸಿತ್ತು...

By Kc Indresh
|

ಮೈಸೂರು, ಡಿಸೆಂಬರ್ 24: ಪತಿಯಿಂದ ಬೇರ್ಪಟ್ಟ ಮಹಿಳೆಯೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಸೋಮವಾರ ಸಂಜೆ ಶ್ರೀರಂಗಪಟ್ಟ ತಾಲೂಕಿನ ಮಂಟಿ ಗ್ರಾಮದಲ್ಲಿ ನಡೆದಿದ್ದು, ಈ ಕೃತ್ಯಕ್ಕೆ ಕಾರಣವೂ ತಿಳಿದುಬಂದಿದೆ.

ಹತ್ಯೆಗೀಡಾದವನನ್ನು ನಂಜನಗೂಡು ತಾಲೂಕು ಹುರ ಗ್ರಾಮದ ಅಡುಗೆ ಭಟ್ಟ ಉದಯ್ (30) ಎಂದು ಗುರುತಿಸಲಾಗಿದೆ. ಈತ ಮಂಟಿ ಗ್ರಾಮದ ಮಹಿಳೆಯೊಂದಿಗೆ ಕಳೆದ 6 ವರ್ಷಗಳಿಂದ ಲಿವಿಂಗ್ ಟುಗೆದರ್ ನಲ್ಲಿದ್ದ.

 6 ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ

6 ವರ್ಷದಿಂದ ಲಿವಿಂಗ್ ಟುಗೆದರ್ ನಲ್ಲಿದ್ದ ಮಹಿಳೆ

ಮಹಿಳೆಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡನೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಬೇರೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ತಾಯಿಯ ಜೊತೆಗಿದ್ದು, ಗಂಡು ಮಗು ತಂದೆಯ ಬಳಿ ಇದೆ. ಆರು ವರ್ಷಗಳ ಹಿಂದಿನಿಂದ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದರು. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆ ಉದಯ್ ಜೊತೆ ಕಳೆದ ಆರು ವರ್ಷಗಳಿಂದ ಲಿವಿಂಗ್ ಟುಗೆದರ್ ನಲ್ಲಿದ್ದರು.

ವಿದ್ಯಾರ್ಥಿನಿಗೆ ಕಿರುಕುಳ; ಮೈಸೂರಿನಲ್ಲಿ ಕಾಲೇಜು ಸಿಬ್ಬಂದಿ ಅಮಾನತು

 ಫೇಸ್ ಬುಕ್ ನಲ್ಲಿ ಪರಿಚಯವಾದ ಮೋಹನ್

ಫೇಸ್ ಬುಕ್ ನಲ್ಲಿ ಪರಿಚಯವಾದ ಮೋಹನ್

ಮಂಟಿ ಗ್ರಾಮದವನಾದ ಮೋಹನ್ ಅಲಿಯಾಸ್ ಕುಳ್ಳಚ್ಚಿ ಇತ್ತೀಚೆಗೆ ಮಹಿಳೆಗೆ ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಕಳುಹಿಸಿ ಸ್ನೇಹಿತನಾಗಿದ್ದ. ಕೆಲ ದಿನ ಆಕೆ ಆತನೊಂದಿಗೆ ಚಾಟಿಂಗ್ ಮಾಡಿದ್ದಳು. ಫೇಸ್ ಬುಕ್ ಸ್ನೇಹಿತನಾಗಿದ್ದ ಈತ ಬೇರೆ ಊರಿನವನೊಂದಿಗೆ ವಾಸಿಸುತ್ತಿರುವುದಕ್ಕೆ ಹೀಯಾಳಿಸಿ ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

 ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಕ್ಕೆ ಕೊಲೆ ಬೆದರಿಕೆ

ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಕ್ಕೆ ಕೊಲೆ ಬೆದರಿಕೆ

ಕಳೆದ ವಾರ ಆಕೆಯ ಮೊಬೈಲ್ ಗೆ ಕರೆ ಮಾಡಿದ ಮೋಹನ್, ದೈಹಿಕವಾಗಿ ತನ್ನೊಂದಿಗೆ ಸಹಕರಿಸದಿದ್ದರೆ ಉದಯ್ ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜೊತೆಗೆ ತನ್ನೊಂದಿಗೆ ದೈಹಿಕವಾಗಿ ಸಹಕರಿಸುವಂತೆ ಪೀಡಿಸುತ್ತಿದ್ದ. ಅದನ್ನು ಮಹಿಳೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ವಿಷಯವನ್ನು ಉದಯ್ ಗೆ ತಿಳಿಸಿದ್ದಳು. ಇಬ್ಬರೂ ಅದರೆಡೆಗೆ ನಿರ್ಲಕ್ಷ್ಯ ವಹಿಸಿ ಸುಮ್ಮನಾಗಿದ್ದರು.

 ಆರನೇ ವಾರ್ಷಿಕೋತ್ಸವದ ದಿನ ಕೊಲೆ

ಆರನೇ ವಾರ್ಷಿಕೋತ್ಸವದ ದಿನ ಕೊಲೆ

ಲಿವಿಂಗ್ ಟುಗೆದರ್ ನ 6ನೇ ವಾರ್ಷಿಕೋತ್ಸವ ಪ್ರಯುಕ್ತ ಮೈಸೂರಿಗೆ ಬೈಕ್ ನಲ್ಲಿ ಬಂದು ಶಾಪಿಂಗ್ ಮಾಡಿ ಕೇಕ್ ಖರೀದಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಮಂಟಿ ಗ್ರಾಮದ ಬಾರ್ ಬಳಿ ಕುಳಿತ ಮೋಹನ್ ಅವಾಚ್ಯ ಶಬ್ದದಿಂದ ಉದಯ್ ನನ್ನು ನಿಂದಿಸಿದ್ದು, ಬೈಕ್ ನಿಲ್ಲಿಸದೇ ಉದಯ್ ಮನೆಗೆ ಬಂದಿದ್ದ. ಮನೆಯ ಬಳಿಯೇ ಬಂದು ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆಯದಿದ್ದಾಗ ಬಲವಾಗಿ ಒದ್ದಿದ್ದಾನೆ. ತನ್ನ ಇಬ್ಬರು ಸ್ನೇಹಿತರೊಂದಿಗೆ ಒಳನುಗ್ಗಿ ಉದಯ್ ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯ ಉದಯ್ ಸಾವನ್ನಪ್ಪಿದ್ದಾನೆ.

English summary
A group of people stabbed and killed a man who was living with a woman separated from her husband in mysuru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X