ಮೈಸೂರಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ 22 ಕೋವಿಡ್ ಪರೀಕ್ಷಾ ಕೇಂದ್ರ

ಮೈಸೂರು, ನವೆಂಬರ್ 20: ನವೆಂಬರ್‌ 17ರಿಂದ ರಾಜ್ಯಾದ್ಯಂತ ಪದವಿ ಕಾಲೇಜು‌ಗಳು ತೆರೆದಿದ್ದು, ಮೈಸೂರಿನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದಕ್ಕೆ ಸುಲಭವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಅನುವಾಗುವಂತೆ ಮಹಾನಗರ ಪಾಲಿಕೆ 22 ಕಡೆಗಳಲ್ಲಿ ಕೋವಿಡ್ ಟೆಸ್ಟ್ ಕೇಂದ್ರಗಳನ್ನು ತೆರೆದಿದೆ‌.

ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುವ ಕುಂಬಾರಕೊಪ್ಪಲು, ಬನ್ನಿಮಂಟಪ,‌‌ ವೀರನಗೆರೆ, ರಾಜೇಂದ್ರನಗರ, ಶಾಂತಿನಗರ, ಚಾಮುಂಡಿಪುರಂ, ಕುರುಬರಹಳ್ಳಿ ವೃತ್ತ, ವಿ.ವಿ.ಪುರಂ, ಜಯನಗರ, ಬಿ.ಡಿ. ಆಸ್ಪತ್ರೆ, ಜಿ.ಬಿ. ಪಾಳ್ಯ, ಸಿಐಟಿಬಿ, ಸೋಮಾನಿ ಕಾಲೇಜು, ‌ರಾಜೀವ್ ನಗರ ರಂಗಮಂದಿರ, ಪುರಭವನ, ದೇವರಾಜ ಮಾರುಕಟ್ಟೆ ಮುಂಭಾಗ, ಬಿಲ್ಡರ್ ಅಸೋಸಿಯೇಷನ್, ‌ನ್ಯಾಯಾಲಯದ ಆವರಣ, ಕೆ.ಆರ್. ಆಸ್ಪತ್ರೆ, ಕೋವಿಡ್ ಜಿಲ್ಲಾಸ್ಪತ್ರೆ, ಮಕ್ಕಳ ಕೂಟ, ಅರಮನೆ ಈ 22 ಸ್ಥಳಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಚಿತವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಮೈಸೂರು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

22 ಕೇಂದ್ರಗಳಲ್ಲಿ ಪ್ರತಿ ಗುರುವಾರ ರಜೆ ಇರುವುದರಿಂದ ಗುರುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮನವಿ ಮಾಡಿದೆ. ಈ ಕುರಿತು ಪಾಲಿಕೆ ವೆಬ್‌ ಸೈಟ್‌ ನಲ್ಲೂ ಮಾಹಿತಿ ನೀಡಿದೆ.

 Mysuru: Municipal Corporation Started 22 Covid Test Centre Ahead Of College Open

ಮೈಸೂರಿನಲ್ಲಿ ಕೊರೊನಾ ಪ್ರಕರಣಗಳು: ಮೈಸೂರು ಜಿಲ್ಲೆಯಲ್ಲಿ ನವೆಂಬರ್ 19ರ ವರದಿಯಂತೆ ಒಟ್ಟು 49751 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 48053 ಮಂದಿ ಗುಣಮುಖರಾಗಿದ್ದಾರೆ. 714 ಸಕ್ರಿಯ ಪ್ರಕರಣಗಳಿದ್ದು, ಈವರೆಗೂ 984 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+