ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದ ಮೇಲಿರುವ ಗುಂಬಜ್ ತೆರವಿಗೆ ಸಂಸದ ಪ್ರತಾಪ್‌ ಸಿಂಹ ಒತ್ತಾಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು ನವೆಂಬರ್‌ 14: ಮೈಸೂರಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಎಲ್ಲಾ ರಾಜರನ್ನು ನೆನೆಯಬೇಕು. ಹೈದರಾಲಿ ಹಾಗೂ ಟಿಪ್ಪುವನ್ನು ನೆನಪು ಮಾಡಿಕೊಳ್ಳಬಾರದು ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

ರಂಗಾಯಣದ ವನರಂಗದಲ್ಲಿ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರ 'ಟಿಪ್ಪು ನಿಜ ಕನಸುಗಳು' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ಪ್ರತಾಪ್‌ ಸಿಂಹ, ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದಲ್ಲಿ ಗುಂಬಜ್ ಇದೆ. ಮಧ್ಯದಲ್ಲಿ ಒಂದು ದೊಡ್ಡ ಗುಂಬಜ್ ಹಾಗೂ ಅಕ್ಕಪಕ್ಕ ಎರಡು ಸಣ್ಣ ಗುಂಬಜ್ ಇದ್ದರೆ ಅದು ಮಸೀದಿಯೇ. ಹಾಗಾಗಿ ಈಗಾಗಲೇ ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟ

ಇನ್ನು ಶಾಸಕ ತನ್ವೀರ್ ಸೇಠ್ ಟಿಪ್ಪುವನ್ನು ಬೆಂಬಲಿಸುವುದರಲ್ಲಿ ಅರ್ಥವಿದೆ. ಆದರೆ ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಅವರಿಗೆ ಇದರಲ್ಲಿ ಏನು ಲಾಭವಿದೆಯೋ ಗೊತ್ತಿಲ್ಲ. ಮುಸ್ಲಿಮರು ಏಕಾಂಗಿಯಾಗಿ ಶೌರ್ಯ ಮೆರೆದಿಲ್ಲ, ಕ್ರೌರ್ಯ ಮೆರೆದಿದ್ದಾರೆ ಎಂದು ಟಿಪ್ಪು ವಿರುದ್ಧ ಆಕ್ರೋಶ ಹೊರಹಾಕಿದರು.

ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ತೆರವಿಗೆ ಆಗ್ರಹ

ಬಸ್‌ ನಿಲ್ದಾಣದ ಮೇಲಿನ ಗುಂಬಜ್‌ ತೆರವಿಗೆ ಆಗ್ರಹ

ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಅವರ ಹೆಸರು ನಾಮಕರಣ ಮಾಡಿದಂತೆ, ಮೈಸೂರು ರೈಲ್ವೆ ನಿಲ್ದಾಣಕ್ಕೂ ಅವರ ಹೆಸರಿಡಲಾಗುವುದು. ಕೆ.ಆರ್.ಕ್ಷೇತ್ರದ ಬಸ್ ನಿಲ್ದಾಣದಲ್ಲಿ ಗುಂಬಜ್ ಇದೆ. ಕ್ಷೇತ್ರದಲ್ಲಿ ಗುಂಬಜ್ ರೀತಿ ನಿರ್ಮಿಸಿರುವ ಬಸ್ ಶೆಲ್ಟರ್‌ಗಳನ್ನು ನಿಗದಿತ ಅವಧಿಯೊಳಗೆ ತೆಗೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಪ್ರತಾಪ್‌ ಸಿಂಹ, ಒಂದು ವೇಳೆ ಬಸ್‌ ನಿಲ್ದಾಣದಲ್ಲಿರುವ ಗುಂಬಜ್‌ ತೆಗೆಯದಿದ್ದರೆ ನಾನೇ ತೆರವುಗೊಳಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ರೈತ ಚಳವಳಿಯ ಮುಂದಿನ ದಾರಿ, ಮಾರ್ಗೋಪಾಯ ಅವಲೋಕನರೈತ ಚಳವಳಿಯ ಮುಂದಿನ ದಾರಿ, ಮಾರ್ಗೋಪಾಯ ಅವಲೋಕನ

ಟಿಪ್ಪು ಸ್ವಭಾವತಃ ಕ್ರೂರಿ ಎಂದ ಎಸ್.ಎಲ್.ಬೈರಪ್ಪ

ಟಿಪ್ಪು ಸ್ವಭಾವತಃ ಕ್ರೂರಿ ಎಂದ ಎಸ್.ಎಲ್.ಬೈರಪ್ಪ

'ಟಿಪ್ಪು ನಿಜ ಕನಸುಗಳು' ಕೃತಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಎಸ್.ಎಲ್.ಬೈರಪ್ಪ ಮಾತನಾಡಿ, ನಂದಿ ಬೆಟ್ಟದಲ್ಲಿರುವ ಟಿಪ್ಪು ಡ್ರಾಪ್ ಟಿಪ್ಪುವಿನ ಕ್ರೂರ ಸ್ವಭಾವವನ್ನು ಇಂದಿಗೂ ಸಾರಿ ಹೇಳುತ್ತಿದೆ. ಆತ ಸ್ಥಳೀಯರನ್ನು ಗೋಣಿಚೀಲದಲ್ಲಿ ಕಟ್ಟಿ ಟಿಪ್ಪು ಡ್ರಾಪ್‌ನಿಂದ ಎಸೆಯುವ ಇತಿಹಾಸ ಇಂದಿಗೂ ನಮ್ಮ ಕಣ್ಮುಂದೆಯೇ ಇದೆ. ಇದು ಟಿಪ್ಪು ಸ್ವಭಾವತಃ ಕ್ರೂರಿ ಎಂದು ತಿಳಿಸುತ್ತದೆ. ಇಂತಹ ವಿಚಾರಗಳನ್ನು ಜನರಿಗೆ ತಿಳಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.

ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಟಿಪ್ಪು ಬಗ್ಗೆ ಕಿಡಿಕಾರುತ್ತಿದ್ದರೆ, ಇತ್ತ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಭೆ ನಿರ್ಮಾಣ ಮಾಡಲು ಮುಸ್ಲಿಂ ನಾಯಕರು ಸಜ್ಜಾಗುತ್ತಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ತನ್ವೀರ್‌ ಸೇಠ್‌ ಸಜ್ಜು

ಪ್ರತಿಮೆ ನಿರ್ಮಾಣಕ್ಕೆ ತನ್ವೀರ್‌ ಸೇಠ್‌ ಸಜ್ಜು

ಮೈಸೂರಿನ ಅಲ್‌ ಬದರ್‌ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವದಲ್ಲಿ ಮಾತನಾಡಿದ್ದ ಶಾಸಕ ತನ್ವೀರ್‌ ಸೇಠ್‌, ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು. ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು, ಟಿಪ್ಪು ಪ್ರತಿಮೆ ನಿರ್ಮಿಸಲಾಗುವುದು ಎಂದು ತಿಳಿಸಿದ್ದರು.

ಟಿಪ್ಪು ಹೆಸರಿಗೆ ಅನೇಕ ಅಪಚಾರ ಮಾಡಲಾಗುತ್ತಿದೆ

ಟಿಪ್ಪು ಹೆಸರಿಗೆ ಅನೇಕ ಅಪಚಾರ ಮಾಡಲಾಗುತ್ತಿದೆ

ಮೈಸೂರಿನಲ್ಲಿ ನಡೆದ ಟಿಪ್ಪು ಉತ್ಸವದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಆಮ್‌ ಆದ್ಮಿ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ತನ್ವೀರ್‌ ಸೇಠ್‌ ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದರು. ಇನ್ನು ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

English summary
MP Pratap Simha demand to remove gumbaz in KR Nagara bus stand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X