• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಸರೆಗೆ 4 ದಿನ ಇರುವಾಗಲೇ 200ಕ್ಕೂ ಹೆಚ್ಚು ಗೋಲ್ಡ್ ಕಾರ್ಡ್ ಗಳ ಮಾರಾಟ

|

ಮೈಸೂರು, ಅಕ್ಟೋಬರ್. 07 : ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿರುವ ಪ್ರವಾಸಿಗರು ಮತ್ತು ಸ್ಥಳೀಯರು 285 ದಸರಾ ಗೋಲ್ಡ್ ಕಾರ್ಡ್' ಖರೀದಿ ಮಾಡಿದ್ದಾರೆ.

ಜಿಲ್ಲಾಡಳಿತ, ದಸರಾ ಸಮಿತಿ ದಸರಾ ಗೋಲ್ಡ್ ಕಾರ್ಡ್ ಅನ್ನು ಅ.1ರಂದು ಬಿಡುಗಡೆ ಮಾಡಿತ್ತು. ಅ.2 ರಿಂದ ಆನ್ ಲೈನ್ ನಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರಾ ಗೋಲ್ಡ್ ಕಾರ್ಡ್ ಖರೀದಿಗೆ ಅವಕಾಶ ನೀಡಲಾಗಿತ್ತು.

ನೈಜ ದಸರಾ ವಿಷಯ ಅಪ್ರಸ್ತುತ ಎಂದ ಯದುವೀರ್ ಒಡೆಯರ್

ಅ.5ರವರೆಗೆ 285 ಕಾರ್ಡ್ ಗಳನ್ನು ಖರೀದಿಸಿದ್ದು, ದಸರಾ ಮಹೋತ್ಸವ ಆರಂಭಕ್ಕೆ ಇನ್ನು ನಾಲ್ಕು ದಿನಗಳು ಇರುವ ಹಿನ್ನೆಲೆಯಲ್ಲಿ ಪೂರ್ಣ ಕಾರ್ಡ್ ಗಳು ಮಾರಾಟವಾಗುವ ನಿರೀಕ್ಷೆಯಿದೆ.

ಒಂದು ಗೋಲ್ಡ್ ಕಾರ್ಡಿಗೆ 3,999 ರೂ. ನಿಗದಿಪಡಿಸಲಾಗಿದೆ. ಕಾರ್ಡ್ ಹೊಂದಿರುವವರಿಗೆ ದಸರಾ ಕಾರ್ಯಕ್ರಮಗಳು, ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಉಚಿತ ಪ್ರವೇಶವಿರುತ್ತದೆ. ಕಳೆದ ವರ್ಷ 7500 ರೂ.ಗಳನ್ನು ನೀಡಿ ದಸರಾ ಗೋಲ್ಡ್ ಕಾರ್ಡ್ ಖರೀದಿಸಿ ಇಬ್ಬರಿಗೆ ಪ್ರವೇಶ ನೀಡಲಾಗಿತ್ತು.

ದಸರಾ ಬಂದರೂ ಮೈಸೂರಿಗರಿಗಿಲ್ಲ ಮಹಾಪೌರರನ್ನು ನೋಡುವ ಭಾಗ್ಯ

ಜಿಲ್ಲಾಡಳಿತ 1 ಸಾವಿರ ಗೋಲ್ಡ್ ಕಾರ್ಡ್ ಗಳನ್ನು ಮುದ್ರಿಸಲಾಗಿದೆ. ಬೇಡಿಕೆಗೆ ಅನುಸಾರವಾಗಿ ಕಾರ್ಡ್ ಗಳನ್ನು ಮುದ್ರಿಸಿ ವಿತರಣೆ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್.ಪಿ. ಜರ್ನಾಧನ್ ತಿಳಿಸಿದ್ದಾರೆ.

ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ

ಅ.19ರೊಳಗೆ ವೆಬ್ ಸೈಟ್ ಮೂಲಕ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೇರವಾಗಿ ದಸರಾ ಗೋಲ್ಡ್ ಕಾರ್ಡ್ ಅನ್ನು ಖರೀದಿ ಮಾಡಬಹುದಾಗಿದೆ.

English summary
Dasara has 4 days remaining. Already more than 200 gold cards are sold. Here's an article about this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X