ಮೈಸೂರಿನಲ್ಲೊಂದು ಸಂಚಾರಿ ಪಂಕ್ಚರ್ ಶಾಪ್

ಮೈಸೂರು, ಮೇ 11: ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ ಅಥವಾ ಯಾವುದೇ ರೀತಿಯ ವಾಹನ ಹೊಂದಿದವರೆಲ್ಲ ಟೈರ್ ಗಳು ತೂತಾದಾಗ ಪಂಕ್ಚರ್ ಶಾಪ್ ಗಳಿಗೆ ಹೋಗಲೇಬೇಕು. ಟೈರ್ ಬದಲಾಯಿಸಿದರೆ ಮಾತ್ರ ಸಮೀಪದ ಪಂಕ್ಚರ್ ಶಾಪ್ ತಲುಪಬೇಕಾಗುತ್ತದೆ.

Recommended Video

      ಸಿದ್ದರಾಮಯ್ಯ ಆರೋಪಕ್ಕ ಸರಿಯಾಗಿ ಉತ್ತರಕೊಟ್ಟ ಯಡಿಯೂರಪ್ಪ | Oneindia Kannada

      ಆದರೆ ಮೈಸೂರಿನ ಸಮೀಪದ ವಾಹನಗಳ ಮಾಲೀಕರು ಇನ್ನು ವಾಹನಗಳು ಪಂಕ್ಚರ್ ಆದರೆ ಜಾಸ್ತಿ ಭಯ ಪಡಬೇಕಿಲ್ಲ. ನಿಮ್ಮ ವಾಹನ ಪಂಕ್ಚರ್ ಆದ ಸ್ಥಳಕ್ಕೆ ಬಂದು ಪಂಕ್ಚರ್ ಹಾಕಿಕೊಡುವ ಮೊಬೈಲ್‌ ಸಂಚಾರಿ ಶಾಪ್ ಒಂದು ಕಾರ್ಯ ನಿರ್ವಹಿಸುತ್ತಿದೆ.

      ಈ ಕಲ್ಪನೆಯೇ ವಿನೂತನವಾಗಿದೆ ಏಕೆಂದರೆ ಮಾರುತಿ ವ್ಯಾನ್‌ ಒಂದನ್ನು ಮಾರ್ಪಾಡು ಮಾಡಿಕೊಂಡು ಸಂಚಾರಿ ಶಾಪ್ ಮಾಡಲಾಗಿದೆ. ಈ ಮೊಬೈಲ್‌ ಪಂಕ್ಚರ್ ಶಾಪ್ ಮಾಲೀಕನ ಹೆಸರು ಮಂಜುನಾಥ್.‌ ಇವರು ಈ ಸಂಚಾರಿ ಶಾಪ‌ ಮಾಡಿ ಒಂದು ವರ್ಷವಾಗಿದೆ.

       Mobile Puncture Shop Operate In Mysuru

      ಕಳೆದ ವಾರ ವ್ಯಾಟ್ಸಪ್ ನಲ್ಲಿ ಇವರ ಮೊಬೈಲ್‌ ಪಂಕ್ಚರ್ ಶಾಪ್ ಕುರಿತು, ಇವರಿಂದ ಸೇವೆ ಪಡೆದ ಗ್ರಾಹಕರೊಬ್ಬರು ಚಿತ್ರ ಸಹಿತ ಮಾಹಿತಿ ಪ್ರಕಟಿಸಿದ್ದರು. ಅದು ಎಲ್ಲೆಡೆ ವೈರಲ್ ಆಗಿದೆ. "ಈ ಮಾಹಿತಿ ನಿಜವೇ ಸುಳ್ಳೇ ಎಂದು ಖಚಿತಪಡಿಸಿಕೊಳ್ಳಲು ನಿತ್ಯ 20 ರಿಂದ 25 ಜನರು ಫೋನ್‌ ಮಾಡುತ್ತಿದ್ದಾರೆ ಸಾರ್‌' ಎಂದು ಮಂಜುನಾಥ್‌ "ಒನ್ಇಂಡಿಯಾ ಕನ್ನಡ' ಕ್ಕೆ ತಿಳಿಸಿದರು.

       Mobile Puncture Shop Operate In Mysuru

      ಅನೇಕ ಗ್ರಾಹಕರಿಗೆ ಅವರಿದ್ದಲ್ಲೇ ಬಂದು ಪಂಕ್ಚರ್ ಹಾಕಿಕೊಡುವ ವಿಚಾರವೇ ಗೊತ್ತಿರಲಿಲ್ಲ, ಈಗ ವಿಷಯ ತಿಳಿದಿದ್ದು, ಬಿಸಿನೆಸ್‌ ಚೆನ್ನಾಗಿ ಆಗುತ್ತಿದೆ ಸಾರ್‌ ಎಂದು ಹರ್ಷ ವ್ಯಕ್ತಪಡಿಸಿದರು. ಮಂಜುನಾಥ್‌ ಅವರ ಮನೆ ಬೋಗಾದಿಯ ರಿಂಗ್‌ ರೋಡ್‌ ನಲ್ಲಿದ್ದು, ನಗರದ ಸಮೀಪದಲ್ಲಿ ವಾಹನಗಳು ಎಲ್ಲಿಯೇ ಪಂಕ್ಚರ್ ಆದರೂ ಒಂದು ಫೋನ್‌ ಕರೆ ಮಾಡಿದರೆ ಸಾಕು, ಸ್ಥಳಕ್ಕೆ ಹೋಗಿ ರಿಪೇರಿ ಮಾಡುತ್ತಾರೆ.

       Mobile Puncture Shop Operate In Mysuru

      ಈ ರೀತಿಯ ವಿಶೇಷ ವ್ಯವಸ್ಥೆ ಬೆಂಗಳೂರಿನಲ್ಲಿತ್ತು. ಈಗ ಮೈಸೂರಿನಲ್ಲೂ ಸಾಧ್ಯ ಎಂಬುದನ್ನು ಮಂಜುನಾಥ್‌ ತೋರಿಸಿಕೊಟ್ಟಿದ್ದಾರೆ. ಇವರ ಸಂಚಾರಿ ಪಂಕ್ಚರ್ ಶಾಪ್ ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತದೆ.

      ಪರಿಚಯಸ್ಥರಾದರೆ ರಾತ್ರಿಯೂ ಸೇವೆ ಲಭ್ಯವಿದೆ. ಗ್ರಾಹಕರ ಸ್ಥಳಕ್ಕೆ ತೆರಳಬೇಕಾದರೆ ಕಿ.ಮೀ ಆಧಾರದಲ್ಲಿ ಹೆಚ್ಚುವರಿ ಹಣ ಪಡೆಯುತ್ತಾರೆ. ಇವರನ್ನು ಮೊಬೈಲ್ ನಂಬರ್ 96112 47331 ಸಂಕಪರ್ಕಿಸಿ ಸೇವೆ ಪಡೆಯಬಹುದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+