ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಐಎಎಸ್ ಮಾಡಿರೋದೆ ಡೌಟು!

|
Google Oneindia Kannada News

ಬೆಂಗಳೂರು, ನ. 28: ಜನಪ್ರತಿನಿಧಿಗಳು ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ ಮಧ್ಯದ ಜಟಾಪಟಿ ಮುಂದುವರೆದಿದೆ. ಡೀಸಿ ರೋಹಿಣಿ ಸಿಂಧೂರಿ ರೋಹಿಣಿ ಸಿಂಧೂರಿ ಐಎಎಸ್‌ ಪಾಸ್ ಮಾಡಿದ್ದಾರೆ ಅನ್ನೋದೆ ನನಗೆ ಡೌಟು ಎಂದು ವಿಧಾನ ಪರಿಷತ್ ಸದಸ್ಯ ರಘೂ ಆಚಾರ್ ಹೇಳಿಕೆ ನೀಡಿದ್ದಾರೆ. ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಐಎಎಸ್ ಅಧಿಕಾರಿ ಸಿಂಧೂರಿ. ಶಾಸಕಾಂಗ ಶಾಸನ ರೂಪಿಸುತ್ತದೆ. ಆ ಶಾಸನಗಳನ್ನ ಕಾರ್ಯ ರೂಪಕ್ಕೆ ತರೋದು ಕಾರ್ಯಾಂಗ. ಅದಾಗದಿದ್ದಲ್ಲಿ ನ್ಯಾಯಾಂಗ ಮೊರೆ ಹೋಗಬೇಕು.

ಆದರೆ ಶಾಸಕರಿಗೆ ಪತ್ರ ತಲುಪುವ ಮುನ್ನವೇ ಸೊಷಿಯಲ್ ಮಿಡಿಯಾಗೆ ಹೇಗೆ ಹೋಗಿದೆ? ನಿಮ್ಮ ಕಚೇರಿ ಸಿಬ್ಬಂದಿಯಿಂದ ಹೋಗಿದೆಯೋ? ಅಥವಾ ಹೇಗೆ ಹೋಗಿದೆ? ಎಂಬುದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೂಡಲೇ ಶಾಸಕರ ಕ್ಷಮೆ ಕೇಳಬೇಕು ಎಂದು ಎಂದು ರಘು ಆಚಾರ್ ಆಗ್ರಹಿಸಿದ್ದಾರೆ. ಇನ್ನು ಮೂರು ದಿನದಲ್ಲಿ ಕ್ಷಮೆ ಕೇಳದೆ ಇದ್ದಲ್ಲಿ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Mlc Raghu Achar Warned That He Will Move Privilege Against Mysore Dc Rohini Sindhuri

ಇದು ಶಾಸಕ ಮಂಜುನಾಥ್‌ಗೆ ಮಾಡಿದ ಅವಮಾನವಲ್ಲ. ಶಾಸಕರಿಗೆ ಮಾಡಿದ ಅವಮಾನ. ವಿಧಾನ ಪರಿಷತ್ಗೆ ಬಂದು ಉತ್ತರ ಕೊಡಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಜನಪ್ರತಿನಿಧಿಗಳು ಅಂದ್ರೆ ಲೆಕ್ಕಕ್ಕಿಲ್ಲ ಅಂತಾ ಮಾಡಿಕೊಂಡಿದ್ದರಿ. ನೀವು ಐಎಎಸ್ ಪಾಸ್ ಮಾಡಿಕೊಂಡಿಲ್ಲ ಅಂತಾ ನನಗೆ ಡೌಟಿದೆ ಎಂದು ರೋಹಿಣಿ ವಿರುದ್ದ ಎಂಎಲ್‌ಸಿ ರಘು ಆಚಾರ್ ವಾಗ್ದಾಳಿ ನಡೆಸಿದ್ದಾರೆ.

English summary
MLC Raghu Achar warned Mysore DC Rohini Sindhuri regarding letter issue. He sad he will move previlage in Legislative Council,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X