ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಲಭೆ: ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂದ ತನ್ವೀರ್ ಸೇಠ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಆಗಸ್ಟ್‌ 12: ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಿನ್ನೆ ನಡೆದ ಗಲಭೆಗೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಲು ಮುಂದಾಗಬೇಕು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಗುಪ್ತಚರ ಇಲಾಖೆ ತುಂಬಾ ದುರ್ಬಲವಾಗಿದೆ. ಮುಂದೆ ಏನಾಗುತ್ತದೆ ಎಂಬ ಸಣ್ಣ ಸುಳಿವಾದರೂ ಗುಪ್ತಚರ ಇಲಾಖೆಗೆ ಇರಬೇಕು. ಗುಪ್ತಚರ ಇಲಾಖೆ ಅಷ್ಟು ಜವಾಬ್ದಾರಿಯುತ ಇಲಾಖೆಯಾಗಿದೆ. ಆದರೆ ಇಲಾಖೆ ಕರ್ತವ್ಯದಲ್ಲಿ ನಿರ್ಲಕ್ಷ ಮಾಡುವುದರಿಂದ ಅನೇಕ ಪ್ರಾಣ ಹಾನಿಯಾಗುತ್ತದೆ. ಗುಪ್ತಚರ ಇಲಾಖೆಯ ವೈಫಲ್ಯವೇ ಈ ಘಟನೆಗೂ ಕಾರಣವಾಗಿದೆ" ಎಂದು ಹೇಳಿದರು.

Recommended Video

ಡಿ.ಜೆ ಹಳ್ಳಿ ಗಲಾಟೆ ಹಿಂದಿದೆ ರಾಜಕೀಯ - ರಿಜ್ವಾನ್ ಹರ್ಷದ್ | Oneindia Kannada

"ಶಾಂತಿ ಕದಡಲೂ ಗುಪ್ತಚರ ಇಲಾಖೆ ನಿರ್ಲಕ್ಷ್ಯ ಕಾರಣ"

ಗುಪ್ತಚರ ಇಲಾಖೆ ವೈಫಲ್ಯದಿಂದ ಶಾಂತಿ ಕದಡುವ ಘಟನೆ ನಡೆದಿದೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಗುಪ್ತಚರ ಇಲಾಖೆ ಚಟುವಟಿಕೆಯಿಂದ ಇರಬೇಕಿತ್ತು. ಆದರೆ ಗಿಲ್ಲದಿರುವುದೇ ಇಂಥ ಘಟನೆಗೆ ಕಾರಣವಾಗುತ್ತದೆ ಎಂದುಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಗಲಭೆ ಹಿಂದಿನ ಕಾರಣ ಇದು?ಬೆಂಗಳೂರು ಗಲಭೆ ಹಿಂದಿನ ಕಾರಣ ಇದು?

 ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು

ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು

ಮೊದಲು ನಾವು ಶಾಂತಿ ಕಾಪಾಡಿಕೊಳ್ಳೋಣ. ಗಲಭೆ ಸಂಬಂಧ ಎಲ್ಲಿ ವೈಫಲ್ಯಗಳು ಆಗಿವೆ ಎಂಬುದನ್ನು ತನಿಖೆ ಮಾಡಲು ಸರ್ಕಾರವನ್ನು ನಾನು ಒತ್ತಾಯಿಸುತ್ತೇನೆ. ಗಲಭೆ ಸಂಬಂಧ ಅಖಂಡ ಶ್ರೀನಿವಾಸ್ ಮೂರ್ತಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಲೇಬೇಕು ಎಂದು ಹೇಳಿದರು.

"ಪ್ರಚೋದಿತ ಪೋಸ್ಟ್ ಗಳಿಂದ ಕೆಟ್ಟ ಸಂಸ್ಕೃತಿ"

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆ ಪ್ರಚೋದಿತ ಪೋಸ್ಟ್ ಗಳನ್ನ ಹಾಕಲಾಗುತ್ತಿದೆ. ಇತ್ತೀಚೆಗೆ ಇದರಿಂದ ಕೆಟ್ಟ ಸಂಸ್ಕೃತಿ ಬೆಳೆಯುತ್ತಿದೆ. ಆಳುವ ಸರ್ಕಾರಗಳು ಉದ್ಯೋಗ ಸೃಷ್ಟಿ ಮಾಡಬೇಕು. ದುಡಿಯುವ ಕೈಗಳಿಗೆ ಕೆಲಸ ನೀಡಿದಾಗ ಇಂತಹ ಘಟನೆಗಳನ್ನ ತಡೆಯಬಹುದು. ಕೇಂದ್ರ ಸರ್ಕಾರ ಈಗಾಗಲೇ ಅನೇಕ appಗಳನ್ನ ನಿಷೇಧ ಮಾಡಿದ್ದು, ಇನ್ನಷ್ಟು appಗಳನ್ನು ಸಹ ನಿಷೇಧಿಸಬೇಕು ಎಂದರು.

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ: ಗೃಹ ಸಚಿವರು ಹೇಳುವುದೇನು?ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ: ಗೃಹ ಸಚಿವರು ಹೇಳುವುದೇನು?

"ಮೈಸೂರಿನಲ್ಲೂ 1986ರಲ್ಲಿ ಹೀಗಾಗಿತ್ತು"

ಇತ್ತೀಚೆಗೆ ಆನ್ ಲೈನ್ ತರಗತಿಗಳು ಬಂದು ಎಲ್ಲರ ಕೈಯಲ್ಲೂ ಮೊಬೈಲ್ ಬಂದಿವೆ. ಇದರಿಂದ ಹೊರಗಿನ ವಾತಾವರಣ ಮತ್ತಷ್ಟು ಹಾಳಾಗುತ್ತಿದೆ. ಈ ಹಿಂದೆ 1986ರಲ್ಲಿ ಮೈಸೂರಿನಲ್ಲೂ ಇಂತಹ ಹೇಳಿಕೆಯಿಂದ ಶಾಂತಿ ಕದಡಿತ್ತು. ಹೀಗಾಗಿ ಪೊಲೀಸ್, ಗುಪ್ತಚರ ಇಲಾಖೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಾಗುತ್ತೆ ಎಂದ ಅವರು, ಯುವಕರು ಸಾಮಾಜಿಕ ಜಾಳತಾಣಗಳ ದುರ್ಬಳಕೆ ಮಾಡಿಕೊಳ್ಳಬಾರದು. ಜಾತಿ ವ್ಯವಸ್ಥೆಯಲ್ಲಿ ಸಮಾಜ ಇಬ್ಭಾಗ ಮಾಡುವುದು ಬೇಡ ಎಂದು ಮನವಿ ಮಾಡಿದರು.

English summary
MLA Tanveer Sait has demanded government to take appropriate action regarding bengaluru violence
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X