• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಡಿಯೂರಪ್ಪ ಮೈಸೂರಿಗೆ ಬಂದಾಗ ಪ್ರತ್ಯಕ್ಷವಾದ ಶಾಸಕ ರಾಮದಾಸ್

|

ಮೈಸೂರು, ಆಗಸ್ಟ್ 29: ಕಳೆದೊಂದು ವಾರದಿಂದ ಪಕ್ಷದ ಹಾಗೂ ದಸರೆಯ ಯಾವ ಕಾರ್ಯಕ್ರಮದಲ್ಲೂ ಭಾಗಿಯಾಗಿರದಿದ್ದ ಶಾಸಕ ರಾಮದಾಸ್ ಇಂದು ಮೈಸೂರಿಗೆ ಸಿಎಂ ಯಡಿಯೂರಪ್ಪ ಆಗಮನದ ವೇಳೆ ಕಾಣಿಸಿಕೊಂಡರು.

"ಸೆ.7ರಂದು ರಾಜ್ಯಕ್ಕೆ ಪ್ರಧಾನಿ; ಶೀಘ್ರವೇ ಸಂತ್ರಸ್ತರಿಗೆ ಸಿಹಿ ಸುದ್ದಿ": ಸಿಎಂ

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ನೋವಿಲ್ಲ. ಆದರೆ ಮೈಸೂರು ಭಾಗದವರಿಗೆ ಸಚಿವ ಸಂಪುಟದಲ್ಲಿ ಯಾರಿಗೂ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಜನರಲ್ಲೂ ಪ್ರಶ್ನೆ ಮೂಡಿದೆ. 2008ರ ಸರ್ಕಾರದಲ್ಲೂ ಇದೇ ಪರಿಸ್ಥಿತಿ ಇತ್ತು. ಇಂದಿಗೂ ಯಡಿಯೂರಪ್ಪನವರಿಗೆ ಪೂರ್ಣ ಪ್ರಮಾಣದ ಸರ್ಕಾರ ರಚನೆ ಮಾಡಲು ಸಾಧ್ಯವಾಗಿಲ್ಲ. ಈ ಹಿಂದಿನ ಮೈತ್ರಿ ಸರ್ಕಾರ ಬೀಳಲು ಕಾರಣರಾದವರಿಗೆ ಸ್ಥಾನ ಕೊಡುವ ಅವಶ್ಯಕತೆ ಇದೆ. ಯಡಿಯೂರಪ್ಪ ನಮ್ಮ ತಂದೆಯ ಸ್ಥಾನದಲ್ಲಿ ಇರುವವರು. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ" ಎಂದರು.

"ನಮ್ಮ ಮನೆಯಲ್ಲಿ ನಮಗೆ ಊಟ ಇರಲಿ ಬಿಡಲಿ, ಅತಿಥಿಗಳು ಬಂದಾಗ ಅವರಿಗೆ ಸತ್ಕಾರ ಮಾಡಬೇಕು. ಊಟ ಬಡಿಸಬೇಕು ಎಂದು ಅಮ್ಮ ಹೇಳುತ್ತಿದ್ದರು. ಇಲ್ಲೂ ಹಾಗೇ. ನಮ್ಮ ಸರ್ಕಾರ ರಚನೆ ಮಾಡಲು ಕಾರಣರಾದವರಿಗೆ ಅವಕಾಶ ನೀಡಬೇಕು. ನಾವೆಲ್ಲ ಪಕ್ಷವನ್ನು ಬೆಳೆಸಿಕೊಂಡು ಬಂದವರು. ಯಾವ ಕಾರಣಕ್ಕೂ ಪಕ್ಷ ಬಿಡುವುದಿಲ್ಲ, ಅಸಮಾಧಾನ ಪಟ್ಟುಕೊಳ್ಳಲ್ಲ ಎಂದು ನಾಯಕರಿಗೂ ಗೊತ್ತು. ರಾಜ್ಯದಲ್ಲಿ ಪಕ್ಷ ಕಟ್ಟೋಕೆ ನಾವೆಲ್ಲ ಕಾರಣೀಕರ್ತರಾಗಿದ್ದೇವೆ. ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಆಗಬಾರದು. ನಮ್ಮ ಕ್ಯಾಪ್ಟನ್ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಅಧಿಕಾರ ಇರಲಿ, ಬಿಡಲಿ ಕೆಲಸ ಮಾಡುತ್ತೇನೆ" ಎಂದು ಹೇಳಿದರು.

"ಸಮ್ಮಿಶ್ರ ಸರ್ಕಾರ ಬೀಳಲು ಕಾರಣರಾದವರು ನಮ್ಮ ಅತಿಥಿಗಳು. ಅನಿರೀಕ್ಷಿತ ಅತಿಥಿಗಳಿಗೆ ಆದ್ಯತೆ ನೀಡಬೇಕು. ಅನರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಅವಶ್ಯಕತೆ ಇದೆ. ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡಬಾರದು, ಅರ್ಹತೆ, ಕೆಲಸ ಮಾಡುವ ಸಾಮರ್ಥ್ಯ ನೋಡಿ ಮಂತ್ರಿಗಿರಿ ಕೊಡಬೇಕು. ಆದರೂ ನನ್ನ ಸಮುದಾಯದವರು ಸೇರಿ ಹಲವರು ನನ್ನ ಪರ ಮಾತಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.

ಮೈಸೂರು ಉಸ್ತುವಾರಿ ಸಿಗದಿದ್ದಕ್ಕೆ ಮುನಿಸಿಕೊಂಡರಾ ರಾಮದಾಸ್?

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕ ಎಸ್.ಎ ರಾಮದಾಸ್ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು. ಇದಕ್ಕೆ ಸಾಕ್ಷಿಯಂತೆ ದಸರಾ ಕಾರ್ಯಕಾರಿ ಸಮಿತಿ ಸಭೆ ಮತ್ತು ಗಜಪಡೆ ಸ್ವಾಗತ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಇದೀಗ ಶಾಸಕ ರಾಮದಾಸ್ ಅವರು ಕಾಣಿಸಿಕೊಂಡಿದ್ದು, ಸಚಿವರ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಕ್ಕೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ.

ಹಾಗೆಯೇ ಸಚಿವ ವಿ.ಸೋಮಣ್ಣ ಸಂಪರ್ಕಿಸಲು ಯತ್ನಿಸಿದ ಕುರಿತು ಪ್ರತಿಕ್ರಿಯಿಸಿದ ಶಾಸಕ ರಾಮದಾಸ್, "ಯಾರೂ ನನ್ನ ಸಂಪರ್ಕಿಸುವ ಅವಶ್ಯಕತೆ ಇಲ್ಲ. ನಾನೇ ಅವರನ್ನು ಮುಂದಿನ ದಿನಗಳಲ್ಲಿ ಸಂಪರ್ಕಿಸಲಿದ್ದೇನೆ" ಎಂದು ಸ್ಪಷ್ಟನೆ ನೀಡಿದರು.

English summary
MLA Ramdass presented on CM Yediyurappa visit time at Mysuru. He is absent in Mysuru dassara programs and meetings since from one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X