ಭಾರತದ ರಕ್ಷಣೆಗೆ ಕ್ಷಿಪಣಿಗಳು ಅತ್ಯಗತ್ಯ: ಗಿರೀಶ್ ಲಿಂಗಣ್ಣ
ಮೈಸೂರು: ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಕ್ಷಿಪಣಿಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ವಿಶ್ಲೇಷಕರಾದ ಗಿರೀಶ್ ಲಿಂಗಣ್ಣ ಹೇಳಿದರು. ಮೈಸೂರಿನ ಸಿದ್ದಾರ್ಥ ನಗರದ ಟೆರಿಶಿಯನ್ ಕಾಲೇಜಿನ ಕನ್ನಡ ವಿಭಾಗ ಹಾಗೂ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಕ್ಷಿಪಣಿಗಳ ಇತಿಹಾಸ ಕುರಿತು ಮಾತನಾಡಿದರು.
ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣ, ಕ್ರೀಡೆ ಮತ್ತು ಸಿನಿಮಾಗಳಲ್ಲೇ ಸೀಮಿತವಾಗಿದ್ದು, ವಿಜ್ಞಾನ ಮತ್ತು ಸಂಶೋಧನೆಯ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು. "ಯಾವುದೇ ದೇಶ ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳದಿದ್ದರೆ, ಅದು ವೆನೆಜುವೆಲಾ ದೇಶದಂತೆಯೇ ಸಂಕಷ್ಟದ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇದೆ" ಎಂದು ಎಚ್ಚರಿಸಿದರು.

ಯುದ್ಧದ ಸ್ವರೂಪ ಬದಲಾಗಿದೆ
ಹಿಂದಿನ ಕಾಲದಲ್ಲಿ ಯುದ್ಧಕ್ಕೆ ಮದ್ದು-ಗುಂಡುಗಳು ಅಗತ್ಯವಿದ್ದರೆ, ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿಗಳೂ ಯುದ್ಧದ ಪ್ರಮುಖ ಭಾಗವಾಗಿವೆ ಎಂದು ಅವರು ಹೇಳಿದರು. ಕ್ಷಿಪಣಿ ಎಂದರೆ ಸ್ವಯಂ ಚಾಲಿತವಾಗಿ ನಿಖರ ಗುರಿಯನ್ನು ತಲುಪುವ ಆಧುನಿಕ ಶಸ್ತ್ರಾಸ್ತ್ರ ಎಂದು ಅವರು ವಿವರಿಸಿದರು.
ಗಿರೀಶ್ ಲಿಂಗಣ್ಣ ಅವರು ವಿವಿಧ ರೀತಿಯ ಕ್ಷಿಪಣಿಗಳ ಕುರಿತು ಮಾಹಿತಿ ನೀಡಿದರು. ಕ್ಷಿಪಣಿ ಎಂದರೆ ಸ್ವಯಂ ಚಾಲಿತವಾಗಿ ನಿಖರವಾದ ಗುರಿಯನ್ನು ತಲುಪುವ ಸಾಧನ. ಕ್ಷಿಪಣಿಗಳಲ್ಲಿ ಪ್ರಮುಖವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು, ಗಾಳಿ-ಗಾಳಿ ಕ್ಷಿಪಣಿಗಳು, ಗಾಳಿ-ನೆಲೆಗೆ ಕ್ಷಿಪಣಿಗಳು, ಭೂಮಿಯಿಂದ-ಗಾಳಿಗೆ ಕ್ಷಿಪಣಿಗಳು, ಹೈಪರ್ ಸಾನಿಕ್ ಕ್ಷಿಪಣಿಗಳ ಕುರಿತು ಮಾಹಿತಿ ನೀಡಿದರು.
ರಾಕೆಟ್ ಮತ್ತು ಕ್ಷಿಪಣಿಯ ವ್ಯತ್ಯಾಸ
ರಾಕೆಟ್ ಮತ್ತು ಕ್ಷಿಪಣಿಯ ನಡುವಿನ ಪ್ರಮುಖ ವ್ಯತ್ಯಾಸವನ್ನು ವಿವರಿಸಿದ ಅವರು, "ರಾಕೆಟ್ಗಳಿಗೆ ನಿರ್ದಿಷ್ಟ ಗುರಿಯ ಮಾರ್ಗದರ್ಶನ ವ್ಯವಸ್ಥೆ ಇರುವುದಿಲ್ಲ, ಆದರೆ ಕ್ಷಿಪಣಿಗಳು ಆಂತರಿಕ ಮಾರ್ಗದರ್ಶನ ವ್ಯವಸ್ಥೆಯೊಂದಿಗೆ ನಿಖರ ಗುರಿಯನ್ನು ತಲುಪುವ ಶಸ್ತ್ರಾಸ್ತ್ರಗಳಾಗಿವೆ" ಎಂದು ಸ್ಪಷ್ಟಪಡಿಸಿದರು. ದೃಶ್ಯರೂಪಕಗಳ ಮೂಲಕ ಕ್ಷಿಪಣಿಗಳ ಇತಿಹಾಸದ ವಿವಿಧ ಮಗ್ಗಲುಗಳನ್ನು ವಿವರಿಸುವ ಮೂಲಕ ಉಪನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಿದರು.
ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಂ. ನಂಜಯ್ಯ ಹೊಂಗನೂರು ಮಾತನಾಡಿ, "ವಿದ್ಯಾರ್ಥಿಗಳು ಮೂಢನಂಬಿಕೆಯನ್ನು ಬಿಟ್ಟು ವಿಜ್ಞಾನಾತ್ಮಕ ಚಿಂತನೆಗೆ ಒತ್ತು ನೀಡಬೇಕು. ಮೊಬೈಲ್ ಬಳಕೆ ಹೆಚ್ಚಾದ ಬಳಿಕ ವಿದ್ಯಾರ್ಥಿಗಳು ಪುಸ್ತಕಗಳತ್ತ ಮುಖ ಮಾಡುತ್ತಿಲ್ಲ ಎಂಬುದು ವಿಷಾದಕರ" ಎಂದು ಹೇಳಿದರು. ವಿಜ್ಞಾನಿ ಗಿರೀಶ್ ಲಿಂಗಣ್ಣ ಅವರು 600ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ. ಸಿಸ್ಟರ್ ರೋಹಿಣಿ, ಕನ್ನಡ ವಿಭಾಗದ ಡಾ. ಸಿ.ಸಿ. ವೆಂಕಟೇಶ್, ಸಂಯೋಜಕರಾದ ವಿವೇಕ್ ಚಾರ್ಲ್ಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications