Get Updates
Get notified of breaking news, exclusive insights, and must-see stories!

12 ಕೋಟಿ ರೂ ಡ್ರಗ್ಸ್ ಜಪ್ತಿ: ಗಂಧದ ನಾಡು 'ಗಾಂಜಾ ಬೀಡು' ಮಾಡಿದ ಕಾಂಗ್ರೆಸ್ ಸರ್ಕಾರ; R ಅಶೋಕ

ಮೈಸೂರಲ್ಲಿ ಈ ಹಿಂದೆ ಡ್ರಗ್ ಫ್ಯಾಕ್ಟರಿಗಳು ಪತ್ತೆಯಾಗಿದ್ದು ಭಾರಿ ಸದ್ದು ಮಾಡಿತ್ತು. ರಾಜ್ಯ ಪೊಲೀಸ್ ಇಲಾಖೆ ಕಾರ್ಯವೈಖರಿ ಮೇಲೆ ಅನುಮಾನ ಹುಟ್ಟುವಂತೆ ಮಾಡಿತ್ತು. ಇದೀಗ ಮತ್ತೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದಾಸನಪುರ ಗ್ರಾಮದ ತೋಟದ ಮನೆಯೊಂದರಲ್ಲಿ ಬೃಹತ್ ಡ್ರಗ್ಸ್ ದಾಸ್ತಾನು ಪತ್ತೆಯಾಗಿದೆ. ಬರೋಬ್ಬರಿ 12 ಕೋಟಿ ರೂ. ಮೌಲ್ಯದ ಮಾಧಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಮೇಲಿಂದ ಮೇಲೆ ಡ್ರಗ್ಸ್ ಪ್ರಕರಣಗಳು ವರದಿ ಆಗುತ್ತಿದ್ದು. ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ ಅವರು ಕಲವು ತಿಂಗಳ ಅಂತರದಲ್ಲಿ ನಿರಂತರವಾಗಿ ರಾಜ್ಯದಲ್ಲಿ ಡ್ರಗ್ ಆಗುತ್ತಿರುವುದನ್ನು ಖಂಡಿಸಿದೆ.'ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಗಂಧದ ನಾಡು ಕರುನಾಡು ಗಾಂಜಾ ಬೀಡಾಗಿದೆ.!' ಎಂದು ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Drugs

ಇತ್ತೀಚೆಗೆ ವರದಿಯಾದ ಡ್ರಗ್ ಪ್ರಕರಣಗಳಿವು!

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ತಿಂಗಳು ಫೆಬ್ರವರಿ 10ರಂದು 2 ಕೋಟಿ
ರೂಪಾಯಿ ಡ್ರಗ್ಸ್‌ ವಶ, ಫೆಬ್ರವರಿ 18ರಂದು 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ಜಪ್ತಿ, ಮತ್ತೆ ಫೆಬ್ರವರಿ 20ರಂದು ಪುತ್ತೂರಿನಲ್ಲಿ ಡ್ರಗ್ಸ್‌ ವಶಕ್ಕೆ ಪಡೆಯಲಾಗಿತ್ತು. ️ಫೆಬ್ರವರಿ 25ರಂದು ಮೈಸೂರಿನಲ್ಲಿ
ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಆಗಿತ್ತು. ಅದಾದ ಬಳಿಕ ತನಿಖಾಧಿಕಾರಿಗಳ ತಂಡ ದಾಳಿ ನಡೆಸಿ ಫೆಬ್ರವರಿ 27 5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿತ್ತು. ಇದೀಗ ️ಮಾರ್ಚ್ 28ರಂದು ಹುಣಸೂರಿನಲ್ಲಿ 12 ಕೋಟಿ ಮೌಲ್ಯದ ಒಟ್ಟು ಸುಮಾರು 48 ಕೆಜಿ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ.

NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್

ನಾಡಿನಲ್ಲೆಲ್ಲ ಗಾಂಜಾ ಘಾಟು

ಸಿದ್ದರಾಮಯ್ಯ ಅವರ ಸರ್ಕಾರದ ತುಘಲಕ್‌ ಆಡಳಿತದಿಂದ ನಾಡೆಲ್ಲಾ ಗಾಂಜಾ ಘಾಟು ಆವರಿಸಿದೆ.! ಯುವಕರ ಭವಿಷ್ಯ ನಶೆಯಲ್ಲಿ ತೇಲಿ ಹೋಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪಾತಾಳ ಸೇರಿದ್ದರೂ "ಗೊತ್ತಿಲ್ಲ" ಗೃಹ ಸಚಿವ ಜಿ. ಪರಮೇಶ್ವರ ಅವರು ಕಣ್ಮರೆಯಾಗಿದ್ದಾರೆ. ಡ್ರಗ್ಸ್ ಮಾಫಿಯಾಗೆ ಕಾಂಗ್ರೆಸ್ ಸರ್ಕಾರವೇ ರಕ್ಷಣೆ ಕೊಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ರಾಜ್ಯ ಸರ್ಕಾರ, ಗೃಹ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಹುಣಸೂರು ಪ್ರಕರಣಕ್ಕೆ ಮುಂಬೈ ನಂಟು

ಈ ಹಿಂದೆ ಮುಂಬೈ ಪೊಲೀಸರು ಪ್ರಕರಣವೊಂದರ ಜಾಡು ಹಿಡಿದು ಮೈಸೂರಿಗೆ ಬಂದಾಗ ಅಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಇರುವುದನ್ನು ಪತ್ತೆ ಮಾಡಿದ್ದರು. ಇದರಿಂದ ರಾಜ್ಯ ಪೊಲೀಸ್ ಇಲಾಖೆಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗಿತ್ತು. ಇದೀಗ ಹುಣಸೂರಿನಲ್ಲಿ ಸಿಕ್ಕ 12ಕೋಟಿ ರೂ. ಮೌಲ್ಯದ ಡ್ರಗ್ ಕೇಸಿಗೂ ಮುಂಬೈಗೂ ನಂಟಿದೆ ಎಂಬುದು ಗೊತ್ತಾಗಿದೆ. ಮುಂಬೈನಿಂದ ಡ್ರಗ್‌ ತಂದು ಮೈಸೂರು ವ್ಯಾಪ್ತಿಯಲ್ಲಿ ಹಂಚುತ್ತಿದ್ದರು ಎಂಬುದು ಗೊತ್ತಾಗಿದೆ.

ತೋಟದ ಮನೆಯನ್ನು ವಾರದ ಹಿಂದಷ್ಟೇ ಬಾಡಿಗೆ ಪಡೆದ ಡ್ರಗ್ ಪೆಡ್ಲರ್‍‌ಗಳು ಕ ಮಾದಕ ವಸ್ತು ಸೇರಿದಂತೆ ಹಲವು ಕಚ್ಚಾ ಪದಾರ್ಥ್ ಇಲ್ಲಿಗೆ ತರುತ್ತಿದ್ದರು. ಆನ್‌ಲೈನ್ ಮೂಲಕ ಕೆಲವು ರಸಾಯನಿಕಗಳನ್ನು ಇಲ್ಲಿಗೆ ತರಿಸಿಕೊಳ್ಳಲಾಗಿತ್ತು. ಇಲ್ಲಿಯೇ ಉತ್ಪಾದನೆ ಮಾಡುವ ಪ್ಲಾನ್ ಹಾಕಿಕೊಂಡಿರಬಹುದೆಂದು ಹೇಳಲಾಗುತ್ತಿದೆ. ಸದ್ಯ ಈ ಜಾಲದಲ್ಲಿರುವವರನ್ನು ಪತ್ತೆ ಮಾಡಲು ಮೂರು ತಂಡಗಳಾಗಿ ರಚಿಸಿ ಮುಂಬೈ ಸೇರಿದಂತೆ ಇತರ ಕಡೆಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+