ಮೈಸೂರಿನಲ್ಲಿ ಭೀಕರ ಅಪಘಾತ, 6 ಸಾವು, 30 ಗಾಯ
ಮೈಸೂರು, ಮಾರ್ಚ್ 14: ಮೈಸೂರಿನ ಟಿ.ನರಸೀಪುರ ಬಳಿಯ ಚಿಕ್ಕಳ್ಳಿ ಗ್ರಾಮದ ಬಳಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಟಿ.ನರಸಿಂಹಪುರ ಮುಖ್ಯರಸ್ತೆಯಲ್ಲಿ ಎರಡು ಬಸ್ ಹಾಗೂ ಒಂದು ಕಾರಿನ ನಡುವೆ ಈ ಭೀಕರ ಅಪಘಾತ ಸಂಭವಿಸಿದ್ದು, ಎದುರು ಬದುರಾಗಿ ಬರುತ್ತಿದ್ದ ಎರಡು ಬಸ್ ಬರುತ್ತಿದ್ದ ವೇಳೆಯಲ್ಲಿ ಮೈಸೂರಿನ ಕಡೆಯಿಂದ ಅತ್ಯಂತ ವೇಗವಾಗಿ ಬಂದ ಕಾರು ಎರಡು ಬಸ್‌ಗಳ ನಡುವೆ ಸಿಲುಕಿಕೊಂಡಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಒಂದು ಖಾಸಗಿ ಬಸ್ ಉರುಳಿ ಬಿದ್ದಿದೆ. ಸ್ಥಳೀಯರು ಮತ್ತು ಪೊಲೀಸರು ಕೂಡಲೇ ನೆರವಿಗೆ ಧಾವಿಸಿ ಬಸ್‌ನಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ.

ಗಾಯಾಳುಗಳಲ್ಲಿ ಕೆಲವರು ಗಂಭೀರ ಸ್ಥಿತಿಯಲ್ಲಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಉರುಳಿ ಬಿದ್ದ ಬಸ್ ಅನ್ನು ಜೆಸಿಬಿ ಯಂತ್ರದ ಮೂಲಕ ಮೇಲಕ್ಕೆತ್ತುವ ಕಾರ್ಯ ಇದೀಗ ಪ್ರಗತಿಯಲ್ಲಿದೆ.












Click it and Unblock the Notifications