• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: ಪಾರಂಪರಿಕ ಹಾದಿ ಹಾದುಬಂದ ಜಾವಾ ಬೈಕ್ ಗಳು

|

ಮೈಸೂರು ಸೆಪ್ಟೆಂಬರ್ 25: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಎರಡನೇ ದಿನದ ಪಾರಂಪರಿಕ ಕಾರ್ಯಕ್ರಮದಲ್ಲಿ ಸೆ.24 ರಂದು 'ಮೇಡ್ ಇನ್ ಮೈಸೂರ್' ಜಾವಾ ಬೈಕ್ ಗಳಲ್ಲಿ ಪಾರಂಪರಿಕ ಕಟ್ಟಡಗಳಿಗೆ ಭೇಟಿ ನೀಡಲಾಯಿತು.

ಗೋಲ್ಡನ್ ಚಾರಿಯೆಟ್ ನಲ್ಲಿ ಪ್ರಯಾಣ, ಸೆಲ್ಫಿ, ಅಂಬಾವಿಲಾಸದ ಅಚ್ಚರಿ

ಮೈಸೂರಿನ ಹಾಗೂ ವಿವಿಧ ಭಾಗಗಳಿಂದ ತಮ್ಮ ನೆಚ್ಚಿನ ಜಾವಾ ಬೈಕ್ ಗಳೊಡನೆ ಬಂದಿದ್ದ 40ಕ್ಕೂ ಹೆಚ್ಚಿನ ಆಸಕ್ತರು ಭಾಗವಹಿಸಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಸರ್ವಮಂಗಳ ಶಂಕರ್ ಅವರು ಹಸಿರು ನಿಶಾನೆ ತೋರಿದರು.

ಪಾರಂಪರಿಕ ನಡಿಗೆ ಕಾರ್ಯಕ್ರಮದ ವಿವರಣೆಯನ್ನು ಪಾರಂಪರಿಕ ತಜ್ಞರಾದ ಎನ್.ಎಸ್.ರಂಗರಾಜು ಮತ್ತು ಈಚನೂರು ಕುಮಾರ್ ಅವರು ನೀಡಿದರು. ಜಾವಾ ಕಂಪನಿಯು ಮೈಸೂರು ಮತ್ತು ಜಕೋಸ್ಲಾವಿಯಾ ನಡುವೆ ಸೇತುವೆಯಾಗಿತ್ತು ಜಾವಾ ಬೈಕ್ ಗಳ ತಯಾರಿಕೆಯಲ್ಲಿ. ಎಫ್.ಕೆ. ಇರಾನಿ ಅವರ ಕೊಡುಗೆ ಹಾಗೂ ಜನತಾ ದಸರೆಗೆ ಆರಂಭಿಸಲು ಅವರಿಟ್ಟ ಹಜ್ಜೆಗಳನ್ನು ತಜ್ಞರು ಸ್ಮರಿಸಿದರು ಅದರೊಂದಿಗೆ ಜಾವಾ ಕಂಪನಿಯ ಏಳು ಬೀಳುಗಳನ್ನು ಅದರಿಂದ ಸಾಮಾಜಿಕ ಪರಿಣಾಮಗಳನ್ನು ಮನ ಮಟ್ಟುವಂತೆ ತಿಳಿಸಿದರು.

ಯುವ ದಸರಾದಲ್ಲಿ ಕನ್ನಡ ಹಾಡು, ಗಾಯಕ ನಕಾಶ್ ಸಂಗೀತ

ಪಾರಂಪರಿಕ ಸಂಚಾರ ರಂಗಾಚಾರ್ಲು ಪುರಭವನ, ದೊಡ್ಡ ಗಡಿಯಾರ, ಹತ್ತನೇ ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಮಹಾರಾಜ ಕಾಲೇಜು, ಯುವರಾಜಾ ಕಾಲೇಜು, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ, ಕ್ರಾಫರ್ಡ್ ಹಾಲ್, ರೈಲು ನಿಲ್ದಾಣ ಹಾಗೂ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಕೊನೆಗೊಂಡಿತು.

ವಿಶೇಷವಾಗಿ 1947 ರ ಮಾದರಿಯ ಜಾವಾ ಬೈಕ್ ಅನ್ನು ಮಂಜುನಾಥ್ ಎಂಬುವರು ತಂದಿದ್ದು, ಅದರಲ್ಲಿ ಮೇಡ್ ಇನ್ ಮೈಸೂರ್ ಎಂದು ಬರೆದಿರುವುದನ್ನು ನೋಡಿದ ಎಲ್ಲರು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಪಾರಂಪರಿಕ ಇಲಾಖೆಯ ಉಪನಿರ್ದೆಶಕ ಡಾ.ಗವಿಸಿದ್ದಯ್ಯ, ಪುರಾತತ್ವ ತಜ್ಞ ಎನ್.ಎಲ್.ಗೌಡ ಹಾಗೂ ಇತರರು ಭಾಗವಹಿಸಿದ್ದರು. (ಕೃಪೆ: ಕರ್ನಾಟಕ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Many people have participated in bike rally in Mysuru during Dasara occassion. Riders have visited many heritage buildings as a part of Made in Mysuru java bike rally, which took place on Sep 24th, sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more