ಮೈಸೂರಿನಲ್ಲಿ ಹಲಸು-ಮಾವು ಪ್ರಿಯರಿಗಾಗಿ ಹಣ್ಣಿನ ಮೇಳ: ಈ ಬಾರಿಯ ವಿಶೇಷತೆ ಏನು..?
ಮೈಸೂರು, ಮೇ 20: ಪ್ರತಿ ವರ್ಷ ನಡೆದುಕೊಂಡು ಬಂದಿರುವ ಮಾವು ಮತ್ತು ಹಲಸಿನ ಮೇಳವನ್ನು ನಗರದಲ್ಲಿ ಈ ಬಾರಿಯೂ ನಡೆಸಲಾಗುತ್ತಿದ್ದು, ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಗ್ರಾಹಕ ಸ್ನೇಹಿ ಮತ್ತು ಆರೋಗ್ಯಕಾರಿ, ರಾಸಾಯನಿಕ ಮುಕ್ತ ಹಣ್ಣುಗಳನ್ನು ಮಾರಾಟ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ತೋಟಗಾರಿಕೆ ಇಲಾಖೆ, ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನಗರದ ಕುಪ್ಪಣ್ಣ ಪಾರ್ಕ್ ಆವರಣದಲ್ಲಿ ಮೇ 24, 25 ಮತ್ತು 26ರಂದು ಮೂರು ದಿನಗಳ ಮಾವು ಮತ್ತು ಹಲಸು ಮೇಳ ನಡೆಯುತ್ತಿದ್ದು ಈ ಸಂಬಂಧ ಮೇಳಕ್ಕೆ ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ನಗರಕ್ಕೆ ಹಲವು ಬಗೆಯ ಮಾವು ಮತ್ತು ಹಲಸು ಮಾರಾಟಕ್ಕೆ ಬಂದಿದೆಯಾದರೂ ಮೇಳದ ಮೂಲಕ ಆರೋಗ್ಯಕಾರಿ ಹಣ್ಣುಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ.

ಹಣ್ಣಿನ ಮೇಳಕ್ಕೆ ಆಗಮಿಸುವ ಗ್ರಾಹಕರು ತಮಗೆ ಬೇಕಾದ ತರಾವರಿಯ ಮಾವಿನ ಹಣ್ಣುಗಳನ್ನು ಮತ್ತು ಹಲಸಿನ ಹಣ್ಣು ಖರೀದಿಸಲು ಅವಕಾಶವಿದೆ. ಈ ಮೇಳದ ವಿಶೇಷವೆಂದರೆ ನೈಸರ್ಗಿಕ ವಿಧಾನದಲ್ಲಿ ಮಾಗಿಸಿರುವ ಮಾವಿನಹಣ್ಣನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಜತೆಗೆ ಮಾವಿನ ಹಣ್ಣು ಮಾತ್ರವಲ್ಲದೆ, ಗಿಡಗಳನ್ನು ನೆಟ್ಟು ಬೆಳೆಸುವ ಆಸಕ್ತಿ ಹೊಂದಿರುವವರಿಗೆ ಗಿಡಗಳನ್ನು ಪಡೆಯುವ ಅವಕಾಶವನ್ನು ಮಾಡಲಾಗಿದೆ.
ರಾಸಾಯನಿಕ ಮುಕ್ತ ಮಾರಾಟ
ಮಾವಿನ ಕಾಯಿಯನ್ನು ಬಹುಬೇಗ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೆಡ್ ಬಳಸಲಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿದ್ದು, ಇದನ್ನು ತಡೆಯುವ ಕೆಲಸವೂ ನಡೆಯುತ್ತಿದೆ. ಈ ಬಗ್ಗೆ ದೂರು ಕೇಳಿ ಬಂದಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಸಾಯನಿಕ ವಸ್ತು ಬಳಕೆ ಮಾಡಿದ ಹಣ್ಣುಗಳ ಮಾರಾಟವನ್ನು ಮಾವಿನ ಮೇಳದಲ್ಲಿ ನಿರ್ಬಂಧಿಸಲಾಗಿದೆ. ರಾಸಾಯನಿಕ ಬಳಸಿ ಮಾಡಿರುವ ಹಣ್ಣುಗಳು ನೋಡಲು ಹೆಚ್ಚು ಆಕರ್ಷಕವಾಗಿ, ಗಾಢ ಬಣ್ಣದಿಂದ ಕೂಡಿರುತ್ತವೆ. ಹೀಗಾಗಿ ಅವುಗಳನ್ನು ಮೇಲ್ನೋಟದಿಂದಲೇ ಗುರುತಿಸಬಹುದಾಗಿದೆ. ಇಂತಹ ಹಣ್ಣುಗಳಿಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ.
ಮಾವಿನ ಮೇಳದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸುವ ಸಲುವಾಗಿ ಹಾಪ್ಕಾಮ್ಸ್, ಎಪಿಎಂಸಿಯಲ್ಲಿರುವ ಬೆಲೆಗೆ ಅನುಗುಣವಾಗಿ ಹಣ್ಣುಗಳನ್ನು ಮಾರಾಟ ಮಾಡಲು ಹಣ್ಣುಗಳ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಪ್ರತಿದಿನ ಮಾವಿನ ಹಣ್ಣಿನ ಬೆಲೆ ನಿಗದಿ ಮಾಡಿ, ಮಳಿಗೆ ಮುಂದೆ ದರಫಲಕ ಹಾಕುವುದು ಕಡ್ಡಾಯವಾಗಿದೆ.

ಪ್ರತಿ ವರ್ಷವೂ ಉತ್ತಮ ರೀತಿಯ ಸ್ಪಂದನೆ
ಮಾವಿನ ಮೇಳಕ್ಕೆ ಪ್ರತಿವರ್ಷವೂ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತಿದ್ದು, ಈ ಬಾರಿಯೂ ಹೆಚ್ಚು ಗ್ರಾಹಕರರನ್ನು ಸೆಳೆಯುವ ಸಾಧ್ಯತೆಯಿದೆ. ಮೇಳದಲ್ಲಿ ಮೈಸೂರು, ಚಾಮರಾಜನಗರ ಮಂಡ್ಯ ಹಾಗೂ ರಾಮನಗರ ಭಾಗದ ರೈತರು ಭಾಗವಹಿಸಲಿದ್ದು, ಟನ್ ಗಟ್ಟಲೆ ಮಾವಿನ ಹಣ್ಣುಗಳು ಮಾರಾಟವಾಗಲಿವೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಈ ಹಣ್ಣುಗಳ ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡುವುದು ಹಾಗೂ ಗ್ರಾಹಕರು ನ್ಯಾಯಯುತ ಬೆಲೆಯಲ್ಲಿ ಹಣ್ಣುಗಳನ್ನು ಖರೀದಿಸಲು ಉತ್ತೇಜನ ನೀಡುವ ಉದ್ದೇಶ ತೋಟಗಾರಿಕೆ ಇಲಾಖೆಯದ್ದಾಗಿದೆ.
ಮಾನಕೂರ, ಆಮ್ಲೆಟ್, ಚೈತ್ರಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪೂರಿ, ಮಲಗೋವ, ಮಲ್ಲಿಕಾ, ಸಿಂಧೂರ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಸರ್, ಸಕ್ಕರೆಗುತ್ತಿ, ಆಮ್ರಪಾಲಿ, ದಿಲ್ಪಸಂದ್ ಸೇರಿದಂತೆ ಹಲವು ತಳಿಯ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡುವ ಮಾಡುವ ಸಾಧ್ಯತೆ ಇದೆ
ಮಾವು ಮಲಬದ್ಧತೆ ನಿವಾರಣೆಗೆ ಸಹಕಾರಿ
ಮಾವಿನಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಅಂಶಗಳಿರುತ್ತವೆ. ಅಲ್ಲದೆ, ನಾರಿನಾಂಶ ಇರುತ್ತದೆ. ಮಾವು ಮಲಬದ್ಧತೆ ನಿವಾರಣೆಗೆ ತುಂಬಾ ಒಳ್ಳೆಯದಾಗಿದೆ. ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಾದಾಮಿ, ರಸಪುರಿ, ತೋತಾಪುರಿ, ಬಂಗನಪಲ್ಲಿ, ದಶೇರಿ, ಮಲ್ಲಿಕಾ, ಮಲಗೋವ, ನೀಲಂ, ಸಿಂಧೂರ ತಳಿಯ ಮಾವು ಮೈಸೂರಿನ ಮಾರುಕಟ್ಟೆ ಪ್ರವೇಶ ಮಾಡಿದೆ.
ಕುಕ್ಕರಹಳ್ಳಿ ಕೆರೆ ರಸ್ತೆ, ಜೆಎಲ್ಬಿ ರಸ್ತೆ, ಮಹಾರಾಜ ಕಾಲೇಜು ಮುಂಭಾಗದ ರಸ್ತೆ, ಕ್ರಾಫರ್ಡ್ ಹಾಲ್ ಮುಂಭಾಗ, ನಾರಾಯಣಶಾಸ್ತ್ರಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ನಗರದ ಹಲವೆಡೆ ತಳ್ಳುಗಾಡಿ ಹಾಗೂ ಆಟೋರಿಕ್ಷಾಗಳಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಆದರೂ ಮಾವು ಮೇಳಕ್ಕೆ ಗ್ರಾಹಕರು ಮುಗಿ ಬೀಳುವುದು ಮಾಮೂಲಿಯಾಗಿದೆ.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications