Breaking; ತಂದೆ ಮೇಣದ ಪ್ರತಿಮೆ ಮುಂದೆ ಯುವಕನ ವಿವಾಹ
ಮೈಸೂರು, ಮೇ 07; ಯುವಕನೊಬ್ಬ ತಂದೆಯ ಮೇಣದ ಪ್ರತಿಮೆ ಮುಂದೆ ಮದುವೆಯಾಗಲಿದ್ದಾನೆ. ವಿವಾಹ ಶಾಸ್ತ್ರಗಳು ಆರಂಭವಾಗಿದ್ದು, ಭಾನುವಾರ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ವಿವಾಹ ನಡೆಯಲಿದೆ.
ಮೈಸೂರು ಜಿಲ್ಲೆ ನಂಜನಗೂಡಿನ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಈ ವಿಶೇಷವಾದ ವಿವಾಹ ನಡೆಯುತ್ತಿದೆ. ಡಾ.ಯತೀಶ್ ಹಾಗೂ ಡಾ. ಅಪೂರ್ವ ಮೇಣದ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.
ಕೋವಿಡ್ ಸೋಂಕು ತಗುಲಿದ್ದ ಯತೀಶ್ ಅವರ ತಂದೆ ರಮೇಶ್ ಒಂದು ವರ್ಷದ ಹಿಂದೆ ಮೃತಪಟ್ಟಿದರು. ತಂದೆಯ ನೆನಪಿನಲ್ಲಿ ಪುತ್ರ ಮೇಣದ ಪ್ರತಿಮೆ ಮಾಡಿಸಿದ್ದು, ಅದರ ಸಮ್ಮುಖದಲ್ಲಿಯೇ ವಿವಾಹವಾಗುತ್ತಿದ್ದಾರೆ. ಈ ಮೂಲಕ ತಂದೆಯ ನೆನಪು ಉಳಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರ್ ತಾಲೂಕಿನ ಅಜ್ಜಂಪುರ ನಿವಾಸಿಯಾಗಿದ್ದ ರಮೇಶ್ ಪುತ್ರ ಯತೀಶ್ ಮೈಸೂರು ಜೆ. ಎಸ್. ಎಸ್ ಆಯುರ್ವೇದ ಕಾಲೇಜಿನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದಾರೆ.

ನಂಜನಗೂಡು ತಾಲೂಕಿನ ಮಲ್ಕುಂಡಿಯ ನಿವಾಸಿ ಡಾ. ಅಪೂರ್ವ ಜೊತೆ ವಿವಾಹ ನಡೆಯಲಿದೆ. ಶನಿವಾರ ವಿವಾಹ ಶಾಸ್ತ್ರಗಳು ಆರಂಭವಾಗಿದೆ. ತಂದೆ ಪ್ರತಿಮೆ ಪಕ್ಕದಲ್ಲಿ ತಾಯಿಯನ್ನು ಕೂರಿಸಿ ಯತೀಶ್ ಶಾಸ್ತ್ರಗಳನ್ನು ಮಾಡುತ್ತಿದ್ದಾರೆ. ಭಾನುವಾರ ವಿವಾಹ ನಡೆಯಲಿದೆ.












Click it and Unblock the Notifications