Train Accident: ಪತ್ನಿ ಜೊತೆ ವಿಡಿಯೋ ಕಾಲ್​ನಲ್ಲಿದ್ದ ವ್ಯಕ್ತಿ ಮೇಲೆ ಹರಿದ ರೈಲು

ಮೈಸೂರು, ಮಾರ್ಚ್ 05: ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ರೈಲು ಹಳಿ ದಾಟುತ್ತಿದ್ದ ವ್ಯಕ್ತಿಯ ಮೇಲೆ ರೈಲು ಹರಿದ ಘಟನೆ ನಂಜನಗೂಡು ತಾಲೂಕಿನ ದೊಡ್ಡ ಕವಲಂದೇ ಗ್ರಾಮದಲ್ಲಿ ನಡೆದಿದೆ. ಬಿಹಾರ ಮೂಲದ ಮನು ಕುಮಾರ್ (27) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಬಿಹಾರ ಮೂಲದವನಾದ ಮನು ಕುಮಾರ್ ದೊಡ್ಡ ಕವಲಂದೇ ಗ್ರಾಮದಲ್ಲಿ ವಾಸವಿದ್ದು, ಅಲ್ಲೇ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದನು. ಇಂದು ಎಂದಿನಂತೆ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಪತ್ನಿಗೆ ವಿಡಿಯೋ ಕಾಲ್‌ ಮಾಡಿದ್ದಾನೆ. ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ಮಾತನಾಡಿಕೊಂಡು ಬರುತ್ತಿದ್ದಾಗ ಬೆಳಗ್ಗೆ 7:40 ರ ಸುಮಾರಿಗೆ ಚಾಮರಾಜನಗರ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ರೈಲು ಮನು ಕುಮಾರ್ ಮೇಲೆ ಹರಿದಿದೆ.

Man Died In Train Accident At Nanjangud

ವಾಟ್ಸ್​ಆ್ಯಪ್ ವಿಡಿಯೋ ಕಾಲ್‌ನಲ್ಲಿದ್ದ ಮನು ಕುಮಾರ್ ರೈಲು ಬರುತ್ತಿರುವುದನ್ನೇ ಕಾಣದೇ ಹಳಿ ದಾಟಿದ್ದಾನೆ ಎನ್ನಲಾಗಿದೆ. ರೈಲು ಅಪಘಾತದಲ್ಲಿ ಮನು ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರೈಲು ಹರಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಘಟನಾ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯ ಆರ್‌ಪಿಎಫ್ ಜಗನ್ನಾಥ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಮನು ಕುಮಾರ್ ಮೃತದೇಹವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರದಲ್ಲಿ ಪುಡಿ ರೌಡಿಗಳ ಹಾವಳಿ

ರಾಮನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗುತ್ತಿದ್ದು, ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಲಾಂಗ್ ಹಿಡಿದು ಯುವಕನನ್ನು ಅಟ್ಟಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 1ರಂದು ರಾಮನಗರದ ನಿವಾಸಿ ಮಹಾಲಿಂಗ ಎನ್ನುವಾತನನ್ನು ದುಷ್ಕರ್ಮಿಗಳು ಟಾರ್ಗೆಟ್‌ ಮಾಡಿದ್ದು, ಮನೆಗೆ ನುಗ್ಗಿ ಹತ್ಯೆ ಮಾಡಲು ಯತ್ನಿಸಿದ್ದಾರೆ.

ಈ ವೇಳೆ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡ ಯುವಕಮನೆಯಿಂದ ಹೊರಗಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ. ದುಷ್ಕರ್ಮಿಗಳು ಮಹಾಲಿಂಗನನ್ನು ಲಾಂಗ್ ಹಿಡಿದು ಅಟ್ಟಾಡಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಐಜೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+