ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾಧಿಕಾರಿ ಎಂದು ಪೋಸ್ ಕೊಟ್ಟ, ಬಾರ್ ನಲ್ಲಿ ಸಿಕ್ಕಿಬಿದ್ದ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 30: ವಿಶೇಷ ಚುನಾವಣಾಧಿಕಾರಿ ಎಂದು ಹೇಳಿ ಬಾರ್‌ನಲ್ಲಿ ಹಣ ವಸೂಲಿ ಮಾಡುತ್ತಿದ್ದ ಐನಾತಿಯೊಬ್ಬನನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ.

ಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ಆಟವಾಡಿದ ಪೋಲಿ ಉಪನ್ಯಾಸಕಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ಆಟವಾಡಿದ ಪೋಲಿ ಉಪನ್ಯಾಸಕ

ಈ ನಕಲಿ ಚುನಾವಣಾಧಿಕಾರಿ ಬೈಕ್ ನಲ್ಲಿ ಫೈಲ್‌ ಗಳನ್ನು ಇಟ್ಟುಕೊಂಡು ಬಾರ್‌ ಗಳಿಗೆ ತೆರಳಿ ಸ್ಟಾಕ್‌ ಚೆಕ್‌ ಮಾಡುತ್ತಿದ್ದ. ಆಗ ಬಾರ್‌ ನವರು ಟೀ ಕಾಫಿ ಕುಡಿಯುವಂತೆ ಆಫರ್ ಮಾಡಿದರೆ ಗದರುತ್ತಿದ್ದ. ತಾನು ಬಹಳ ಸ್ಟ್ರಿಕ್ಟ್ ಆಫೀಸರ್ ಎಂಬಂತೆ ಪೋಸು ಕೊಡುತ್ತಿದ್ದ ಈತ ನಿಮ್ಮ ಬಾರ್‌ ನಿಂದ ಅಕ್ರಮವಾಗಿ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಲು ಮದ್ಯ ಸರಬರಾಜು ಆಗಿದೆ ಎಂದು ನನಗೆ ಕಂಪ್ಲೇಂಟ್ ಬಂದಿದೆ. ನೀವು ಏನಾದ್ರೂ ಅಡ್ಜಸ್ಟ್ ಮಾಡಿಕೊಂಡರೆ ಇಲ್ಲೇ ಮುಗಿಸಿಕೊಳ್ಳಿ ಇಲ್ಲದಿದ್ದರೆ ಮೊಕದ್ದಮೆ ಹಾಕಿ ಲೈಸನ್ಸ್‌ ಕ್ಯಾನ್ಸಲ್‌ ಮಾಡಿಸುತ್ತೇನೆ ಎಂದು ಬೆದರಿಸುತ್ತಿದ್ದ.

Man Arrested For Making Money In The Name OF Election Officer In Hunasuru

ಪಿರಿಯಾಪಟ್ಟಣ ಮತ್ತು ಹುಣಸೂರಿನ ಬಾರ್‌ ಗಳಿಗೆ ತೆರಳಿ ಈತ 5 -10 ಸಾವಿರ ವಸೂಲಿ ಮಾಡಿಕೊಂಡಿದ್ದಾನೆ. ಆದರೆ ಶುಕ್ರವಾರ ಹುಣಸೂರಿನ ಬಾರ್‌ ವೊಂದರಲ್ಲಿ ಇದೇ ರೀತಿ ಧಮಕಿ ಹಾಕಿ ಚೆಕ್‌ ಮಾಡುತ್ತಿದ್ದಾಗ ರಾಜಕಾರಣಿಯೂ ಆಗಿದ್ದ ಬಾರ್‌ ಮಾಲೀಕರಿಗೆ ಸಂದೇಹ ಬಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಬಂಧಿತ ಹಾಸನ ಜಿಲ್ಲೆ ಕರ್ಲೆ ಗ್ರಾಮದ ನಿವಾಸಿ ಶಶಿಧರ್ ಎಂಬುದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈತನ ಹೆಡೆಮುರಿ ಕಟ್ಟಿದ್ದು, ಹುಣಸೂರು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

English summary
A man has been arrested by a hunasuru police for allegedly making money at a bar claiming to be a special election officer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X