ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಡ ಬನ್ನಿ ಪಾರಂಪರಿಕ ನಗರಿಯ ಝಗಮಗಿಸುವ ದೀಪಾಲಂಕಾರದ ಸೊಬಗು

|
Google Oneindia Kannada News

ಮೈಸೂರು, ಅಕ್ಟೋಬರ್. 12 : ಪಾರಂಪರಿಕ ನಗರದ ನವರಾತ್ರಿಯಲ್ಲಿ ಮಿರಮಿರನೆ ಮಿನುಗುವ ಮಾಯಾಲೋಕ ಸೃಷ್ಟಿಯಾಗಿದೆ. ನೋಡಲು ಎರಡು ಕಣ್ಣುಗಳು ಸಾಲದು. ಪ್ರವಾಸಿಗರಿಗಂತೂ ರಸದೌತಣ. ಹೌದು, ಕವಿದ ಕತ್ತಲೆಯಲ್ಲಿ ನಾನಾ ಬಗೆಯ ಬೆಳಕು ಸೂಸುವ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರವನ್ನು ತಂದಿದೆ.

ದೀಪಾಲಂಕಾರ ನವರಾತ್ರಿಯ ವಿಶೇಷ. ಮೈಸೂರಿನ ಪ್ರಮುಖ ರಸ್ತೆ, ವೃತ್ತ, ಕಟ್ಟಡಗಳಲ್ಲಿ ಸಾಲು ಸಾಲು ದೀಪಗಳು ಝಗಮಗಿಸುತ್ತಿರುತ್ತವೆ. ವೃತ್ತಗಳಲ್ಲಿ ಮೈಸೂರಿನ ಐತಿಹಾಸಿಕ, ಸಾಂಸ್ಕೃತಿಕ ನಾಯಕರ ಪ್ರತಿಕೃತಿಗಳು, ಮೈಸೂರು ಅರಮನೆಯನ್ನು ದೀಪಗಳಲ್ಲಿ ಕಟ್ಟಿಕೊಡುವ ಕಲಾಕೃತಿ ನೋಡಿದರೆ ಕಣ್ಣಿಗೆ ಹಬ್ಬ, ಮನಸಿಗೆ ಸಡಗರ!

ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?ಮೈಸೂರು ಯುವ ದಸರಾ: ಸೆಲೆಬ್ರಿಟಿಗಳು ಪಡೆಯುತ್ತಿರುವ ಸಂಭಾವನೆ ಎಷ್ಟು?

ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೇ, ಇಡೀ ನಗರವೇ ಕತ್ತಲಾಗುತ್ತಿದ್ದಂತೆ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಬೆಳಕಿನ ವಯ್ಯಾರವನ್ನೇ ಕಣ್ಣಿಗೆ ಕಟ್ಟಲಿದೆ. ಈಗಾಗಲೇ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ವಿದ್ಯುತ್ ದೀಪಗಳ ಬಗೆಬಗೆಯ ಬಣ್ಣ ನೋಡುಗರನ್ನು ಸಂತಸಗೊಳಿಸಿದೆ.

ದಸರಾ ದೀಪಾಲಂಕಾರ ಉಪ ಸಮಿತಿ ಈ ಬಾರಿ 2.75 ಕೋಟಿ ವೆಚ್ಚದಲ್ಲಿ ನಗರದ ರಸ್ತೆಗಳ ವೃತ್ತಗಳನ್ನು ಶೃಂಗಾರ ಮಾಡಿದೆ. ಹಲವು ಮಹನೀಯರು, ಖ್ಯಾತ ಕಟ್ಟಡದ ಪ್ರತಿಕೃತಿಗಳು , ಬೆಳಕಿನ ಪ್ರಜ್ವಲತೆಯಲ್ಲಿ ಮೂಡಿಬರುತ್ತಿವೆ. ಮುಂದೆ ಓದಿ...

 ವಿದ್ಯುತ್ ದೀಪಗಳಿಂದ ಪ್ರತಿಕೃತಿ

ವಿದ್ಯುತ್ ದೀಪಗಳಿಂದ ಪ್ರತಿಕೃತಿ

ದೀಪಾಲಂಕಾರ ಉಪಸಮಿತಿ ನಿರ್ದೇಶನದಲ್ಲಿ ಬೆಂಗಳೂರು ಜಯನಗರ ಮೋಹನ್ ಕುಮಾರ್ ಸೌಂಡ್ಸ್ ಮತ್ತು ಲೈಟಿಂಗ್ ಸಂಸ್ಥೆ ನೋಡುಗರ ಕಣ್ಮನ ತಣಿಸುವಂತೆ ಪ್ರಸಿದ್ಧ ಕಟ್ಟಡಗಳ ಹಾಗೂ ಹಲವು ಮಹನೀಯರ ಪ್ರತಿಕೃತಿಗಳನ್ನು ಬೆಳಕಿನ ಚಿತ್ತಾರದಲ್ಲಿ ಮೂಡಿಸಿದೆ .

ಈ ಸಂಸ್ಥೆ ಐದನೇ ದಸರಾ ಮಹೋತ್ಸವದ ದೀಪಾಲಂಕಾರ ಮಾಡುತ್ತಿದ್ದು, ಎಲ್ ಇಡಿ ವಿದ್ಯುತ್ ದೀಪಗಳಿಂದ ಪ್ರತಿಕೃತಿ ಸಿದ್ಧಪಡಿಸುವ ಕಲೆ ಕರಗತ ಮಾಡಿಕೊಂಡಿದೆ.

 ಎಲ್ ಇಡಿ ಬಲ್ಬ್ ಅಳವಡಿಕೆ

ಎಲ್ ಇಡಿ ಬಲ್ಬ್ ಅಳವಡಿಕೆ

ಈ ದಸರಾದಲ್ಲಿ ವಿಶೇಷವಾಗಿ ಚಾಮುಂಡೇಶ್ವರಿ, ಬುದ್ಧ , ಬಸವ , ಅಂಬೇಡ್ಕರ್, ಗಾಂಧಿ , ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ . ಜೊತೆಗೆ ಮೈಸೂರು ಅರಮನೆ , ಸಂಸತ್ ಭವನ , ವಿಧಾನಸೌಧ ಒಳಗೊಂಡಂತೆ ಹತ್ತು ಹಲವು ಪ್ರಸಿದ್ಧ ಕಟ್ಟಡಗಳನ್ನು ವಿದ್ಯುತ್ ದೀಪಗಳ ಬೆಳಕಿನಲ್ಲಿ ನಿರ್ಮಿಸಿದ್ದರಿಂದ ಅದರ ಅಂದ ಸವಿಯಬಹುದಾಗಿದೆ.

ಈ ರೀತಿಯ ಒಟ್ಟು 16 ಕಟೌಟ್ ಮಾದರಿಯ ದೀಪಾಲಂಕಾರಗಳನ್ನು ನಗರದ ರಸ್ತೆಗಳು ಹಾಗೂ ವೃತ್ತಗಳಲ್ಲಿ ನಿರ್ಮಿಸಲಾಗಿದೆ. ಈ ಎಲ್ಲ ಪ್ರತಿಕೃತಿಗಳನ್ನು ಬಿದಿರಿನ ಪಟ್ಟಿಯ ಆಧಾರದಲ್ಲಿ ಎಲ್ ಇಡಿ ಬಲ್ಬ್ ಅಳವಡಿಸಿ ಸಿದ್ಧಪಡಿಸಲಾಗಿದೆ.

ಕಳೆಗಟ್ಟಿದ ರೈತ ದಸರಾ ಸಂಭ್ರಮ: ಎತ್ತಿನ ಗಾಡಿ ಓಡಿಸಿದ ಜಿಟಿಡಿ, ಶಿವಶಂಕರರೆಡ್ಡಿಕಳೆಗಟ್ಟಿದ ರೈತ ದಸರಾ ಸಂಭ್ರಮ: ಎತ್ತಿನ ಗಾಡಿ ಓಡಿಸಿದ ಜಿಟಿಡಿ, ಶಿವಶಂಕರರೆಡ್ಡಿ

 ಗಜಪಡೆಯ ವಿನ್ಯಾಸ

ಗಜಪಡೆಯ ವಿನ್ಯಾಸ

ಸಿಂಹದೊಂದಿಗೆ ತಾಯಿ ಚಾಮುಂಡಿ ನಿಂತಿರುವ ಭಂಗಿಯಲ್ಲಿ ಮೂಡಿಬಂದಿರುವ ಪ್ರತಿಕೃತಿಯು 40 ಅಡಿ ಎತ್ತರ ಹಾಗೂ 40 ಅಡಿ ಅಗಲದ ಅಳತೆಯಲ್ಲಿ ಮೂಡಿದೆ. ಇನ್ನು ದೊಡ್ಡಕೆರೆ ಮೈದಾನದಲ್ಲಿ ಮತ್ತೊಂದು ಆಕರ್ಷಣೆಯ ಪ್ರತಿಕೃತಿ ಕಣ್ತುಂಬಿಕೊಳ್ಳಬಹುದಾಗಿದ್ದು , ಇಲ್ಲಿ ಚಿನ್ನದ ಅಂಬಾರಿ ಹೊತ್ತ ಗಜಪಡೆಯ ವಿನ್ಯಾಸವಿದೆ.

45 ಅಡಿ ಎತ್ತರ ಹಾಗೂ 90 ಅಡಿ ಅಗಲದಲ್ಲಿ ಒಟ್ಟು ಮೂರು ಆನೆಗಳನ್ನು ವಿದ್ಯುತ್ ದೀಪಗಳಲ್ಲಿ ಕಟ್ಟಿಕೊಡಲಾಗಿದೆ . ಇದರ ಪಕ್ಕದಲ್ಲೇ ಕೆಆರ್ಎಸ್ ಜಲಾಶಯದ ಪ್ರತಿಕೃತಿ ಇದ್ದು, ಇದನ್ನು 40 ಅಡಿ ಎತ್ತರ ಹಾಗೂ 90 ಅಡಿ ಅಗಲ ವಿಸ್ತಾರದಲ್ಲಿ ನಿರ್ಮಿಸಲಾಗಿದೆ.

ದಸರಾ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡೋ ಡಿಮ್ಯಾಂಡುದಸರಾ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡೋ ಡಿಮ್ಯಾಂಡು

 51 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ

51 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ

ಜೆಸ್ಕಾಂ ಈ ಬಾರಿ ದಸರಾ ದೀಪಾಲಂಕಾರಕ್ಕೆ ಸಂಪೂರ್ಣ ಎಲ್ಇಡಿ ಬಲ್ಬ್ ಗಳನ್ನು ಬಳಸಿದ್ದು ಮೈಸೂರಿನ ಪ್ರಮುಖ ರಸ್ತೆಗಳು ಸೇರಿದಂತೆ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಅಲಂಕಾರ ಮಾಡಲಾಗಿದೆ. ಜೊತೆಗೆ 51 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರದ ಮೆರುಗು ಮೂಡಿದೆ.

ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..ಮೈಸೂರು ದಸರಾದಲ್ಲಿ 'ರಂಗೋಲಿ' ಬಗ್ಗೆ ಸಚಿವೆ ಜಯಮಾಲ ಆಡಿದ ಮಾತುಗಳಿವು..

English summary
Main road, circle, and buildings of Mysore are decorated with electric lights. Art works also made from electric lights. Here's a short article about this light decoration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X