ಹೀಗಿದೆ ನೋಡಿ ಮಾವುತರ ಮಕ್ಕಳ ಟೆಂಟ್ ಶಾಲೆ
ಮೈಸೂರು, ಆ.27 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವದ ಸಿದ್ಧತೆ ಭರದಿಂದ ಸಾಗುತ್ತಿದೆ. ಇತ್ತ ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಮತ್ತು ಕವಾಡಿಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಆರಂಭಿಸಲಾಗಿದೆ.
ಬುಧವಾರ ಆರಂಭಗೊಂಡ ಟೆಂಟ್ ಶಾಲೆಗೆ ಮೈಸೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಆರ್.ಬಸಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು.[ಜಂಬೂ ಸವಾರಿ ಆನೆಗಳ ಬಯೋಡೇಟಾ]
ಪ್ರತಿಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆನೆಗಳೊಂದಿಗೆ ಆಗಮಿಸುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಸ್ಥಾಪಿಸಲಾಗುತ್ತದೆ. ಸುಮಾರು ಎರಡು ತಿಂಗಳ ಕಾಲ ಮಾವುತರು ಮತ್ತು ಕಾವಾಡಿಗಳು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಅವರ ಜೊತೆ ಮಕ್ಕಳು ಇರುತ್ತಾರೆ. ಈ ಸಂದರ್ಭದಲ್ಲಿ ಅವರ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಟೆಂಟ್ ಶಾಲೆ ತೆರೆಯಲಾಗುತ್ತದೆ. ಟೆಂಟ್ ಶಾಲೆಯ ಚಿತ್ರಗಳು.

ಮೈಸೂರಿನಲ್ಲಿ ಟೆಂಟ್ ಶಾಲೆ ಸ್ಥಾಪನೆ
ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳೊಂದಿಗೆ ಆಗಮಿಸಿರುವ ಮಾವುತರು ಮತ್ತು ಕವಾಡಿಗಳ ಮಕ್ಕಳಿಗಾಗಿ ಅರಮನೆ ಆವರಣದಲ್ಲಿ ಟೆಂಟ್ ಶಾಲೆ ಆರಂಭಿಸಲಾಗಿದೆ.

ಟೆಂಟ್ ಶಾಲೆಗೆ ಸ್ಥಾಪನೆ
ಬುಧವಾರ ಆರಂಭಗೊಂಡ ಟೆಂಟ್ ಶಾಲೆಗೆ ಮೈಸೂರು ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ವಿ.ಕರಿಕಾಳನ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್. ಆರ್.ಬಸಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೀಗಿದೆ ನೋಡಿ ಟೆಂಟ್ ಶಾಲೆ
ಮಾವುತರು ಮತ್ತು ಕವಾಡಿಗಳ ಮಕ್ಕಳಿಗಾಗಿ ಆರಂಭಿಸಿರುವ ಟೆಂಟ್ ಶಾಲೆ ಹೀಗಿದೆ ನೋಡಿ.

ಸುಮಾರು ಎರಡು ತಿಂಗಳು ಇಲ್ಲಿರುವ ಮಕ್ಕಳು
ಸುಮಾರು ಎರಡು ತಿಂಗಳ ಕಾಲ ಮಾವುತರು ಮತ್ತು ಕಾವಾಡಿಗಳು ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಅವರ ಜೊತೆ ಮಕ್ಕಳು ಇರುತ್ತಾರೆ. ಈ ಸಂದರ್ಭದಲ್ಲಿ ಅವರ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಟೆಂಟ್ ಶಾಲೆ ತೆರೆಯಲಾಗುತ್ತದೆ.

ಚಿಕಿತ್ಸಾ ಕೇಂದ್ರ ಸ್ಥಾಪನೆ
ದಸರಾ ಆನೆಗಳ ಮಾವುತರು ಹಾಗೂ ಕಾವಾಡಿಗಳಿಗಾಗಿ ಆಯುಷ್ ಚಿಕಿತ್ಸಾ ಕೇಂದ್ರವನ್ನು ಇಂದು ತೆರೆಯಲಾಗಿದೆ. ಆಯುರ್ವೇದ ವೈದ್ಯ ಡಾ.ಗೀತಾ ಅವರನ್ನು ಕೇಂದ್ರಕ್ಕೆ ನಿಯೋಜಿಸಲಾಗಿದೆ.


Click it and Unblock the Notifications
