• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹದೇವಸ್ವಾಮಿಯಿಂದ ಸಾಲೂರು ಮಠಕ್ಕೆ ಕಳಂಕ:ಹಿರಿಯ ಶ್ರೀ ಆರೋಪ

|

ಮೈಸೂರು, ಡಿಸೆಂಬರ್ 21 : ಕಳೆದ ವಾರ ಈ ದಿನದಂದೇ ಸುಳ್ವಾಡಿ ಮಾರಮ್ಮನ ದೇವಸ್ಥಾನದಲ್ಲಿ ವೈಭವೋಪೇತವಾಗಿ ಗೋಪುರ ಶಂಕುಸ್ಥಾಪನೆಗೆ ಸಜ್ಜಾಗುತ್ತಿದ್ದರು. ಅತ್ತ ಬಂದ ಭಕ್ತರಿಗೆ ನೀಡಲೆಂದು ಪ್ರಸಾದ ತಯಾರಾಗುತ್ತಿತ್ತು. ಇದೇ ವೇಳೆ ಏನು ಅರಿಯದ ಮುಗ್ಧರಿಗೆ ವಿಷವಿಕ್ಕಿದ ದುರುಳರು ಅಲ್ಲಿ ನಡೆಯಬಹುದಾದ ಘಟನೆಯನ್ನು ನೆನದು ಮನದಲ್ಲೇ ಮುಸಿ - ಮುಸಿ ನಗ್ಗುತ್ತಿದ್ದರು.

ಇದಕ್ಕೆ ಹೆಚ್ಚು ತಲೆ ದಂಡವಾಗಿದ್ದು ಮಾತ್ರ ಸಾಲೂರು ಮಠದ ಹಿರಿಯಶ್ರೀಗಳಾದ ಗುರುಸ್ವಾಮಿ. ಏನು ಅರಿಯದ ಇವರನ್ನೂ ಪ್ರಕರಣದ ಕೇಂದ್ರಬಿಂದುವನ್ನಾಗಿಸುವ ಸಂಚು ರೂಪಿಸಲಾಗಿತ್ತು. ಆದರೆ ದೈವ ಬೆಸೆದಿದ್ದೇ ಮತ್ತೊಂದು ಮಜಲು. ಆಗಿದ್ದು ಮಾತ್ರ ಸಾಲೂರು ಮಠದ ಮಹದೇವಸ್ವಾಮಿಯ ಬಂಧನ.

ಚಾಮರಾಜನಗರ ವಿಷ ಪ್ರಸಾದ ಸೇವನೆ: ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ

ಇವರ ಬಂಧನದ ಬಳಿಕ ಸಾಲೂರು ಮಠದ ಶ್ರೀ ಗುರುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಯಾರ ವಿರೋಧಿಯೂ ಅಲ್ಲ. ನನಗೆ ಯಾವ ಹಣದ ಆಸೆಯೂ ಇಲ್ಲ. ನನಗಿಂತ ವಯಸ್ಸಿನಲ್ಲಿ ಕಿರಿಯವನಾಗಿದ್ದರಿಂದ ಮಠದ ವಿದ್ಯಾಸ್ಥಂಸ್ಥೆಗಳನ್ನೆಲ್ಲಾ ಅವನ ಸುಪರ್ದಿಗೆ ಬಿಟ್ಟು, ದೇವಾಲಯದ ಆಡಳಿತದ ಜವಾಬ್ದಾರಿ ನಾನು ವಹಿಸಿಕೊಂಡಿದ್ದೆ ಎಂದು ನೊಂದ ಮನದಿಂದಲೇ ನುಡಿಯುತ್ತಾರೆ ಮಠದ ಶ್ರೀಗಳಾದ ಗುರುಸ್ವಾಮಿ. ಮುಂದೆ ಓದಿ ...

ಪೀಠದಲ್ಲಿ ಕೂರಿಸಲು ನನಗೆ ಇಷ್ಟವಿರಲಿಲ್ಲ

ಪೀಠದಲ್ಲಿ ಕೂರಿಸಲು ನನಗೆ ಇಷ್ಟವಿರಲಿಲ್ಲ

ಈ ಮಹದೇವಸ್ವಾಮಿಯನ್ನು ಪೀಠದಲ್ಲಿ ಕೂರಿಸಲು ನನಗೆ ಇಷ್ಟವಿರಲಿಲ್ಲ. ಕಳೆದ 2 ದಶಕಗಳಿಂದಲೂ ದ್ವೇಷ ಸಾಧಿಸಿಕೊಂಡು ಬರುತ್ತಲೇ ಇದ್ದಾನೆ. ಮಠಕ್ಕೆ ಬರುತ್ತಿದ್ದ ಭಕ್ತರ ಬಳಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದ. ಆದರೂ ಭಕ್ತರು ಈ ವಿಚಾರಗಳ ಬಗ್ಗೆ ಕಿವಿ ಕೊಟ್ಟಿರಲಿಲ್ಲ. ಇದನ್ನು ಸಹಿಸದೇ ನನ್ನ ಹತ್ತಿರ ಬರುವ ಭಕ್ತರ ಮೇಲೆ ಹಲ್ಲೆ ಮಾಡಲು ಶುರುವಿಟ್ಟುಕೊಂಡ. ಕೆಲವು ತಿಂಗಳ ಹಿಂದೆ ನನ್ನ ಭಕ್ತ ಸಂಗಮೇಶ್ ಎಂಬುವವರ ಮೇಲೆ ಕಾರಣವೇ ಇಲ್ಲದೇ ಎಲ್ಲರ ಮುಂದೆ ಕಪಾಳಕ್ಕೆ ಹೊಡೆದದ್ದು ನನಗೆ ಬೇಸರ ತರಿಸಿತ್ತು ಎನ್ನುತ್ತಾರೆ.

ಪೊಲೀಸರು ಸುಳ್ವಾಡಿ ವಿಷಪ್ರಸಾದ ಪ್ರಕರಣ ಭೇದಿಸಿದ್ದು ಹೇಗೆ ?

ವಿಷ ಬೆರೆಸುವಷ್ಟು ನೀಚನೆಂದು ಗೊತ್ತಿರಲಿಲ್ಲ

ವಿಷ ಬೆರೆಸುವಷ್ಟು ನೀಚನೆಂದು ಗೊತ್ತಿರಲಿಲ್ಲ

ಇವನು ನೀಚನೆಂದು ಗೊತ್ತಿತ್ತು. ಆದರೇ ಪ್ರಸಾದಕ್ಕೆ ವಿಷ ಬೆರೆಸುವಷ್ಟು ನೀಚನೆಂದು ಗೊತ್ತಿರಲಿಲ್ಲ. ನನ್ನನ್ನೂ ಹಿಯ್ಯಾಳಿಸಿಕೊಂಡೇ ಬರುತ್ತಿದ್ದ. ಮಠದಲ್ಲಿ ಸಣ್ಣ ಜಗಳವಾದರೂ ಇವನ ಸಹಚರರು ಹಾಜರಿರುತ್ತಿದ್ದರು. ಅಕ್ಕ ಪಕ್ಕದ ಗ್ರಾಮಗಳ ಜನರಿಗೆ ಬೆದರಿಕೆ ಹಾಕುತ್ತಿದ್ದರು. ಆ ದೇವರೇ ಆತನಿಗೆ ತಕ್ಕ ಶಿಕ್ಷೆ ನೀಡುತ್ತೇನೆ ಎಂದಿದ್ದೆ. ಇವನು ಮಾಡಿದ ಕೆಟ್ಟ ಕೆಲಸಕ್ಕೆ ಇಮ್ಮಡಿ ಮಠಕ್ಕೆ ಕೆಟ್ಟ ಹೆಸರು ಬಂತು ಎಂದು ಬೇಸರ ವ್ಯಕ್ತಪಡಿಸಿದರು.

ವಿಷಪ್ರಸಾದ ಸೇವಿಸಿ ಇಂದಿಗೆ 7 ದಿನ: ಸುಳ್ವಾಡಿ ಜನರ ಸ್ಥಿತಿ ಹೇಗಿದೆ?

ಶಾಲೆಗಳ ಬಗ್ಗೆ ಗಮನ ಕೊಡುತ್ತಿರಲಿಲ್ಲ

ಶಾಲೆಗಳ ಬಗ್ಗೆ ಗಮನ ಕೊಡುತ್ತಿರಲಿಲ್ಲ

ಮಹದೇಶ್ವರ ಬೆಟ್ಟದಲ್ಲಿ ಮಠದ ವತಿಯಿಂದ ನಡೆಯುತ್ತಿದ್ದ ಶಾಲೆಗಳ ಬಗ್ಗೆ ಮಹದೇವಸ್ವಾಮಿ ಗಮನ ಕೊಡುತ್ತಿರಲಿಲ್ಲ. ಶೈಕ್ಷಣಿಕವಾಗಿ ಶಾಲೆ ಹಿಂದುಳಿಯಲು ಕೂಡ ಅವರೇ ಕಾರಣ. ಮೊದಲೇ ನನಗೆ ಅವನು ನಿಮ್ಮ ತಲೆದಂಡ ಬೇಕೆಂದು ಕೇಳಿದ್ದರೇ ನಾನೇ ಕೊಡುತ್ತಿದ್ದೆ. ಅದಕ್ಕಾಗಿ ಇಷ್ಟು ಜನರನ್ನು ಸಾಯಿಸುವ ಅವಶ್ಯಕತೆ ಇರಲಿಲ್ಲ ಎಂದರು.

ಪೀಠದಿಂದ ಕೆಳಗಿಳಿಸಲು ಭಕ್ತರ ಆಗ್ರಹ

ಪೀಠದಿಂದ ಕೆಳಗಿಳಿಸಲು ಭಕ್ತರ ಆಗ್ರಹ

ಅಲ್ಲದೇ ಇದೇ ವೇಳೆ ಪ್ರಸಾದದಲ್ಲಿ ವಿಷಬೆರೆಸಿ 15 ಜನರ ಸಾವಿಗೆ ಕಾರಣರಾಗಿರುವ ಮಠದ ಕಿರಿಯ ಸ್ವಾಮೀಜಿಗಳನ್ನು ಪೀಠದಿಂದ ಕೆಳಗಿಳಿಸಬೇಕು ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ. ಇವರಿಂದ ಮಠದ ಘನತೆಗೆ ಚ್ಯುತಿ ಬಂದಿದೆ. ಸ್ವಾಮೀಜಿಯಾಗಿ ಮುಂದುವರಿಯುವ ಯಾವ ಅರ್ಹತೆಯೂ ಅವರಿಗಿಲ್ಲ ಎಂದು ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Salur mutt Shree Guruswamy said that Mahadevswamy become blakmark to our salur mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more