ಕೊರೊನಾ ನಿವಾರಣೆಗೆ ಮೈಸೂರಲ್ಲಿ ಮಧ್ಯರಾತ್ರಿ ಮೆಣಸಿನಕಾಯಿ ಹೋಮ

ಮೈಸೂರು, ಮಾರ್ಚ್ 31: ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಮೈಸೂರಿನಲ್ಲೂ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ಹೀಗಾಗಿ ಮೈಸೂರಿನಲ್ಲಿ ಕೊರೊನಾ ನಿವಾರಣೆ ಆಗಲಿ ಎಂದು ಪ್ರಾರ್ಥಿಸಿ ಮಹಾಪ್ರತ್ಯಂಗೀರ ಹೋಮವನ್ನು ನಡೆಸಲಾಗಿದೆ. ಮೈಸೂರಿನ ಶೆಟ್ಟನಾಯಕನಹಳ್ಳಿಯ ಮಹಾಪ್ರತ್ಯಂಗೀರ ದೇವಾಲಯದಲ್ಲಿ ಮಧ್ಯರಾತ್ರಿ ಮೆಣಸಿನಕಾಯಿ ಹೋಮ ಮಾಡಿ ಕೊರೊನಾ ನಿವಾರಣೆಗಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ.

ಸರ್ಕಾರದ ಆದೇಶದಂತೆ ಅರ್ಚಕರು ದೇವಾಲಯ ಬಾಗಿಲು ಹಾಕಿದ್ದರು. ನಿನ್ನೆ ದೇವಾಲಯದ ಆವರಣದಲ್ಲಿ ಕೋವಿಡ್-19 ಶತ್ರು ಸಂಹಾರ ಪ್ರತ್ಯಂಗೀರ ಹೋಮ ನೆರವೇರಿಸಲಾಗಿದೆ. ಯಾಗವಿದಾನಂದ ತಾಂತ್ರಿಕ್ ಅರ್ಚಕರು ಹೋಮ ನೆರವೇರಿಸಿದ್ದಾರೆ.

Maha Pratyangira Homa Performed In Mysuru To Fight Against Coronavirus

"ಜಗತ್ತಿಗೆ ಪ್ರತ್ಯಂಗೀರ ದೇವಿ ತಾಯಿಯಾಗಿದ್ದಾಳೆ. ಇಂದು ಅವಳಲ್ಲಿ ಜಗತ್ತಿಗೆ ಕಂಟಕವಾಗಿರುವ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ನೀವು ನಿಮ್ಮ ನಿಮ್ಮ ಮನೆಗಳಲ್ಲಿ ನಿಮ್ಮ ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ. ಎಲ್ಲರೂ ಕೊರೊನಾ ವಿರುದ್ಧ ಹೋರಾಡೋಣ" ಎಂದು ಅರ್ಚಕರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+