ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಕಲಾಮಂದಿರದಲ್ಲಿ 'ಮಧ್ಯರಾತ್ರಿಯ ತಿಗಣೆಗಳು'

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 1: ಎಸ್. ಎನ್. ಕಿತ್ತೂರು ಅವರು ರಚಿಸಿರುವ ಸುಮಾರು 20 ನಿಮಿಷಗಳ ರೇಡಿಯೋ ನಾಟಕ 'ಮಧ್ಯರಾತ್ರಿಯ ತಿಗಣೆಗಳು' ಮೈಸೂರಿನ ಕಲಾಮಂದಿರದಲ್ಲಿ ಸೆಪ್ಟೆಂಬರ್ 3, ಭಾನುವಾರದಂದು ಸಂಜೆ 7 ಕ್ಕೆ ನಡೆಯಲಿದೆ.

ಹಾಸ್ಯ ಸಾಹಿತಿ ಎಂಎಸ್ ಎನ್ ಅವರ 'ಮದಗಜಗಮನೆ' ಸೆ.2 ಕ್ಕೆ ಲೋಕಾರ್ಪಣೆಹಾಸ್ಯ ಸಾಹಿತಿ ಎಂಎಸ್ ಎನ್ ಅವರ 'ಮದಗಜಗಮನೆ' ಸೆ.2 ಕ್ಕೆ ಲೋಕಾರ್ಪಣೆ

ನಾಟಕವನ್ನು ಹೆಚ್.ಕೆ.ದ್ವಾರಕನಾಥ್ ವಿನ್ಯಾಸಗೊಳಿಸಿದ್ದು, ಸಂಗೀತ ಪ್ರಶಾಂತ್ ಹಿರೇಮಠ್, ವಸ್ತ್ರವಿನ್ಯಾಸ ಸುಷ್ಮಾ ನಾಣಯ್ಯ, ಪ್ರಸಾದನ ರಾಘವೇಂದ್ರ ಬೂದನೂರು ಬೆಳಕು ರಾಜೇಶ್ ತಲಕಾಡು, ಸಹಾಯ ಮಹೇಶ್ ನಂಜುಂಡಯ್ಯ ಮತ್ತು ನಿರ್ವಹಣೆಯ ಹೊಣೆ ರಾಜೇಶ್ ಅವರದು.

"Madhyaratriya Thiganegalu" a humor drama will be held in Mysuru Kalamandir on Sep 3rd

ಸಹೃದಯರು ಭಾಗವಹಿಸುವಂತೆ ಕೋರಲಾಗಿದೆ.

ನಾಟಕದ ಬಗ್ಗೆ: ಇದು ಎಸ್. ಎನ್. ಕಿತ್ತೂರು ಅವರು ರಚಿಸಿರುವ ಸುಮಾರು 20 ನಿಮಿಷಗಳ ರೇಡಿಯೋ ನಾಟಕ. ಪ್ರದರ್ಶನದ ದೃಷ್ಟಿಯಿಂದ ನಾಟಕದ ಮೂಲ ಉದ್ದೇಶಕ್ಕೆ ಚ್ಯುತಿ ಬಾರದಂತೆ ನಿರ್ದೇಶಕ ಪ್ರಭುಸ್ವಾಮಿ ಮಳಿಮಠ ಅವರು ಒಂದು ಗಂಟೆಗೆ ವಿಸ್ತರಿಸಿದ್ದಾರೆ. ಗೋಪಿ ಒಬ್ಬ ಬ್ರಹ್ಮಚಾರಿ ಯುವಕ. ಒಂದು ಓಣಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುತ್ತಾನೆ. ಆ ಮನೆ ಮಾಲೀಕ ಹತ್ತು ಹಲವು ಷರತ್ತುಗಳನ್ನು ವಿಧಿಸಿ ಮನೆ ನೀಡಿರುತ್ತಾನೆ. 'ಬಾಗಿಲು ಬಡಿಯಬಾರದು', 'ರಾತ್ರಿ 10 ಗಂಟೆ ಮೇಲೆ ನಿಶ್ಯಬ್ದವಾಗಿರಬೇಕು', 'ಬಾಗಿಲು ಬಡಿಯಬಾರದು ಅನ್ನೊ ಬೋರ್ಡ್ ಹಾಕಿ ಅದು ಕಾಣೂ ಹಂಗೆ ಒಂದು ಬಲ್ಬ್ ಹಾಕಬೇಕು', 'ರಾತ್ರಿ 10 ಗಂಟೆ ಮೇಲೆ ದೀಪ ಹಚ್ಚಬಾರದು' ಹೀಗೆ...

"Madhyaratriya Thiganegalu" a humor drama will be held in Mysuru Kalamandir on Sep 3rd

ನಾಲ್ಕು ದಿನಗಳ ನೈಟ್ ಶಿಫ್ಟ್ ಕೆಲಸದಿಂದ ನಿದ್ರೆಗೆಟ್ಟ ಗೋಪಿಗೆ ನಿದ್ರೆ ಬರದಂತೆ ಕಾಡುವ ಎದುರು ಮನೆ ವಿಶ್ವಂಭರ, ಚಹಾಗೆ ಸಕ್ಕರೆಗಾಗಿ ಅಪರ ರಾತ್ರಿಯಲ್ಲಿ ಮನೆ ಬಾಗಿಲು ತಟ್ಟುತ್ತಾನೆ. ಅವನ ಹಿಂದೆಯೇ ಬೆಳಗಾವಿ ಬಸ್ಸಿನ ವ್ಯಾಳಾ (ಟೈಮ್) ಕೇಳಿಕೊಂಡು ಬರುವ ಗುಂಡ್ಯಾ. ಗಂಡನನ್ನು ಹುಡುಕಿಕೊಡಿ ಎಂದು ಬರುವ ಗೌರಿ. ಷರತ್ತನ್ನು ಮುರಿದು ನಿದ್ದೆಗೆಡಿಸಿದ್ದಕ್ಕಾಗಿ ಬಂದು ವಿಚಾರಿಸಿಕೊಳ್ಳುವ ಯಂಗ್ ಅಂಡ್ ಎನೆರ್ಜಟಿಕ್ ಮನೆ ಮಾಲೀಕ. ಹೀಗೆ ಎಲ್ಲರೂ ಗೋಪಿಗೆ ನಿದ್ರೆ ಬರದಂತೆ ತಿಗಣೆಗಳಾಗಿ ಕಾಡುವ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿಬಿಡುತ್ತವೆ.

"Madhyaratriya Thiganegalu" a humor drama will be held in Mysuru Kalamandir on Sep 3rd

ಹೆಚ್ಚಿನ ಮಾಹಿತಿಗೆ ಹಾಗು ಟಿಕೆಟ್ಗಳಿಗೆ ಸಂಪಕರ್ಕಿಸಿ: 9448871815 / 9964656482

English summary
"Madhyaratriya Thiganegalu" a humor drama will be held in Mysuru Kalamandir on September 3rd, Sunday at 7 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X