ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಓಯು ದೂರ ಶಿಕ್ಷಣ ಕೋರ್ಸ್‌, ಹೆಚ್ಚು ಅರ್ಜಿ ಬಂದಿರುವುದು ಎಂ.ಕಾಂಗೆ!

|
Google Oneindia Kannada News

ಮೈಸೂರು, ನವೆಂಬರ್. 20:ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ದೂರ ಶಿಕ್ಷಣ ಕೋರ್ಸ್ ಪುನರಾರಂಭ ಮಾಡಿದ್ದು, ಎಂ.ಕಾಂ.ಕೋರ್ಸ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಬರೋಬ್ಬರಿ 1,607 ವಿದ್ಯಾರ್ಥಿಗಳು ಪ್ರಥಮ ವರ್ಷದ ಎಂ.ಕಾಂ ಕೋರ್ಸಿಗೆ ಅರ್ಜಿ ಗುಜರಾಯಿಸಿದ್ದಾರೆ.

ಈಗಾಗಲೇ ರಾಜ್ಯದೆಲ್ಲೆಡೆ ಎಂ.ಕಾಂ.ಸಾಮಾನ್ಯ ಕೋರ್ಸುಗಳಿಗೆ ಪ್ರವೇಶ ಪಡೆಯುವುದು ಬಲು ಕಷ್ಟಕರ. ಈಗ ಎಲ್ಲಾ ವಿ.ವಿ.ಗಳಲ್ಲೂ ಇದಕ್ಕಾಗಿ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿರುವ ಕಾರಣ ಹಾಗೂ ಪರೀಕ್ಷೆಯ ಬಳಿಕ ಆಯಾ ವಿ.ವಿ.ಗಳಲ್ಲಿ ಸೀಟುಗಳ ಲಭ್ಯತೆಗೆ ಅನುಸಾರವಾಗಿ ಅಧ್ಯಯನ ಕೇಂದ್ರ ಅಥವಾ ವ್ಯಾಪ್ತಿ ಕಾಲೇಜುಗಳ ಸ್ನಾತಕೋತ್ತರ ಕಾಲೇಜುಗಳಲ್ಲಿ ಸೀಟು ಸಿಗುತ್ತದೆ.

ಆದರೆ, ದೂರಶಿಕ್ಷಣದಲ್ಲಿ ಈ ಸಮಸ್ಯೆಯಿಲ್ಲ. ಇದೇ ಕಾರಣಕ್ಕೆ ಕೆಎಸ್ಒಯುಗೆ ರಾಜ್ಯದ ಹಲವು ಭಾಗಗಳಿಂದ ಅರ್ಜಿಗಳು ಸಲ್ಲಿಕೆಯಾಗಿವೆ. ಮೈಸೂರು ವಿಶ್ವವಿದ್ಯಾಲಯವೂ ಈ ವರ್ಷ ದೂರ ಶಿಕ್ಷಣ ಕೋರ್ಸುಗಳಿಗೆ ಅರ್ಜಿ ಆಹ್ವಾನಿಸಿದ್ದ ಕಾರಣ ಕೆಎಸ್ಒಯು ಕೋರ್ಸುಗಳಿಗೆ ಬೇಡಿಕೆ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು.

ಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್‌.ಡಿಕರ್ನಾಟಕ ಮುಕ್ತ ವಿವಿಯಲ್ಲಿ ಜನವರಿಯಿಂದ ಪಿಎಚ್‌.ಡಿ

ಆದರೆ, ಹಾಗೇನೂ ಆಗಿಲ್ಲ. ಮೈಸೂರು ವಿ.ವಿ.ಗೆ ದೂರಶಿಕ್ಷಣ ಕೋರ್ಸುಗಳಿಗೆ ಕೇವಲ 33 ಅರ್ಜಿ ಬಂದಿದ್ದು, ಕೆಎಸ್ಒಯುಗೆ 12 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದೆ. ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದಕ್ಕೆ ಶುಲ್ಕ ಕಡಿಮೆ ಇರುವುದೂ ಕಾರಣ.

 ಬೇರೆ ವಿವಿಗಳ ಶುಲ್ಕಕ್ಕಿಂತ ಕಡಿಮೆ

ಬೇರೆ ವಿವಿಗಳ ಶುಲ್ಕಕ್ಕಿಂತ ಕಡಿಮೆ

ಕೆಎಸ್ಒಯುವಿ ನಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಮೊದಲ ವರ್ಷಕ್ಕೆ 6,100 ರೂ. ಹಾಗೂ ದ್ವಿತೀಯ ವರ್ಷಕ್ಕೆ 5,000 ರೂ ಶುಲ್ಕ ಇದೆ. ಪದವಿ ಕೋರ್ಸುಗಳಿಗೆ 3,700 ರೂ.ರಿಂದ 5,000 ರೂ.ವರೆಗೆ ಮಾತ್ರ ಇದೆ. ಎಂ.ಎ. ಸಂವಹನ ಮತ್ತು ಪತ್ರಿಕೋದ್ಯಮ ಕೋರ್ಸುಗಳಿಗೆ ಮಾತ್ರ 9,800 ರೂ ಶುಲ್ಕವಿದೆ. ಇದು ರಾಜ್ಯದ ಬೇರೆಲ್ಲಾ ವಿ.ವಿ.ಗಳ ಶುಲ್ಕಕ್ಕಿಂತ ಕಡಿಮೆ ಇದೆ.

 ಕೆಎಸ್ಓಯುಗೆ ಮಾನ್ಯತೆ ಸಿಕ್ಕರೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಹಿಂದೇಟು ಕೆಎಸ್ಓಯುಗೆ ಮಾನ್ಯತೆ ಸಿಕ್ಕರೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಹಿಂದೇಟು

 ಅರ್ಜಿ ಸಂಖ್ಯೆ ಹೆಚ್ಚಲು ಕಾರಣ

ಅರ್ಜಿ ಸಂಖ್ಯೆ ಹೆಚ್ಚಲು ಕಾರಣ

ಮೈಸೂರು ವಿಶ್ವವಿದ್ಯಾಲಯದಲ್ಲಿ ದೂರ ಶಿಕ್ಷಣ ಕೋರ್ಸುಗಳ ಶುಲ್ಕ ಹೆಚ್ಚಿದೆ. ಎಂ.ಎ.ಗೆ 10 ಸಾವಿರ, ಎಂ.ಕಾಂ.ಗೆ 15 ಸಾವಿರ ಹಾಗೂ ಎಂ.ಎಸ್ಸಿಗೆ 20 ಸಾವಿರ ಶುಲ್ಕ ಇದೆ. ಬಹುತೇಕ ರಾಜ್ಯದ ಇತರ ವಿವಿಗಳ ಶುಲ್ಕ ಇದೇ ಮಾದರಿಯಲ್ಲಿದೆ. ಹಾಗಾಗಿ, ಕೆಎಸ್ಒಯು ಶುಲ್ಕ ಕಡಿಮೆ ಇರುವುದು ಅರ್ಜಿ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಮೈಸೂರು ವಿಶ್ವವಿದ್ಯಾಲಯ: ಕರೆಸ್ಪಾಂಡೆನ್ಸ್ ಕೋರ್ಸ್ ಗೆ ಬಂದ ಅರ್ಜಿಗಳೆಷ್ಟು?ಮೈಸೂರು ವಿಶ್ವವಿದ್ಯಾಲಯ: ಕರೆಸ್ಪಾಂಡೆನ್ಸ್ ಕೋರ್ಸ್ ಗೆ ಬಂದ ಅರ್ಜಿಗಳೆಷ್ಟು?

 ಪ್ರಾಬಲ್ಯ ಮೆರೆದ ಕಲಾ ವಿದ್ಯಾರ್ಥಿಗಳು

ಪ್ರಾಬಲ್ಯ ಮೆರೆದ ಕಲಾ ವಿದ್ಯಾರ್ಥಿಗಳು

ಅಂತೆಯೇ ಕನ್ನಡ ಎಂಎ ಕೋರ್ಸಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು 1,399 ಅರ್ಜಿಗಳು ಸಲ್ಲಿಕೆಯಾಗಿವೆ. ಬಿ.ಎ. ಕೋರ್ಸುಗಳಿಗೂ 3,128 ಅರ್ಜಿಗಳನ್ನು ವಿದ್ಯಾರ್ಥಿಗಳು ಸಲ್ಲಿಸಿದ್ದಾರೆ. ಹಾಗಾಗಿ, ಕಲಾ ಕ್ಷೇತ್ರದ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸುವಲ್ಲಿ ತಮ್ಮ ಪ್ರಾಬಲ್ಯ ತೋರಿದ್ದಾರೆ.

 ಬಿ.ಇಡಿ ಕೋರ್ಸ್ ಆರಂಭ

ಬಿ.ಇಡಿ ಕೋರ್ಸ್ ಆರಂಭ

ಜನವರಿಯಿಂದ ಕೆಎಸ್ಒಯು ಬಿ.ಇಡಿ. ಕೋರ್ಸುಗಳನ್ನು ಆರಂಭಿಸುತ್ತಿದ್ದು, ಇದೇ ಡಿಸೆಂಬರ್ ನಿಂದ ಅರ್ಜಿ ಆಹ್ವಾನಿಸುತ್ತಿದೆ. ಒಟ್ಟು 500 ಸೀಟುಗಳಿಗೆ ಅರ್ಜಿ ಸ್ವೀಕರಿಸಲು ಅವಕಾಶವಿದೆ. ಬಿ.ಇಡಿ. ಕೋರ್ಸುಗಳ ಶುಲ್ಕವೂ ಕಡಿಮೆ ಇರುವ ಕಾರಣ, ಉತ್ತಮ ಸ್ಪಂದನೆ ನಿರೀಕ್ಷಿಸಲಾಗಿದೆ.

English summary
Karnataka State Open University has again begun Distance Education Course. M.com Course has received a good response this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X