ಹಣ ಪಡೆದು ಕೈಕೊಟ್ಟ ಕಲಾವಿದ, ಕಲಾವಿದೆ ನೇಣಿಗೆ ಶರಣು

ಮೈಸೂರು, ಆಗಸ್ಟ್ 11: ಆತ ರಂಗಾಯಣದಲ್ಲಿ ಪಾಠ ಕಲಿತ ರಂಗಭೂಮಿ ಕಲಾವಿದೆ. ಈಕೆ ಹವ್ಯಾಸಿ ಕಲಾವಿದೆ, ಇಬ್ಬರು ಮೈಮ್ ರಮೇಶ್ ತಂಡದ ವಿದ್ಯಾರ್ಥಿಗಳಿದ್ದವರು. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಮದುವೆ ಹಂತಕ್ಕೆ ತಲುಪಿ ಮುರಿದು ಬಿತ್ತು. ಕೊನೆಗೆ ಆಕೆ ಜೀವವನ್ನೇ ಬಲಿ ಪಡೆಯಿತು.

ಹಾಸನದ ಅರಸೀಕೆರೆಯ ನಿವಾಸಿ ಕುಮಾರ ಸ್ವಾಮಿ ಅವರ ಪುತ್ರಿ 23 ವರ್ಷ ವಯಸ್ಸಿನ ಮಹಿಮಾ ಎಂಬ ಹವ್ಯಾಸಿ ಕಲಾವಿದೆ ತನ್ನ ಪ್ರಿಯಕರ ನವೀನ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಪಡುವಾರಹಳ್ಳಿಯ 4ನೆ ಕ್ರಾಸ್‌ನಲ್ಲಿ ನಡೆದಿದೆ.

A private firm employee artist commits suicide in Mysuru

ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ದುದ್ದ ಗ್ರಾಮದ ಕುಮಾರ ಸ್ವಾಮಿ ಎಂಬುವರ ಪುತ್ರಿ ಮಹಿಮಾ ಅವರು ಮೈಸೂರಿನ ಹೆಬ್ಬಾಳದಲ್ಲಿರುವ ಥಿಯೋರಾಂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಲಾವಿದ ಮೈಮ್ ರಮೇಶ್ ಅವರ ಹವ್ಯಾಸಿ ರಂಗ ತಂಡದಲ್ಲಿ ತರಬೇತಿ ಪಡೆಯುತ್ತಿದ್ದರು. ಕಳೆದ ಒಂದು ವರ್ಷದಿಂದ ರಂಗಭೂಮಿ ಕಲಾವಿದ ನವೀನ್ ಜೊತೆಗೆ ಪ್ರೇಮ ಬೆಳೆದಿತ್ತು.

ಮೈಸೂರಿನ ಪಡುವಾರಹಳ್ಳಿಯ 4ನೇ ಕ್ರಾಸ್‌ನಲ್ಲಿ ಬಾಡಿಗೆ ಮನೆಯಲ್ಲಿದ್ದ ಮಹಿಮಾ ಮನೆಗೆ ನವೀನ್ ಬರುತ್ತಿದ್ದರು. ಮಹಿಮಾಳಿಂದ ನವೀನ್ 80 ಸಾವಿರ ರೂ. ಸಾಲ ಪಡೆದಿದ್ದ. ಇತ್ತ ಹಣವೂ ನೀಡದೆ, ಅತ್ತ ಮತ್ತೊಬ್ಬ ಯುವತಿಯೊಂದಿಗೆ ಓಡಾಡುತಿದ್ದರಿಂದ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಕಳೆದ ರಾತ್ರಿ ನವೀನ್ ಮನೆಗೆ ತೆರಳಿದ ಮಹಿಮಾ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ತನ್ನನ್ನು ಮದುವೆಯಾಗುತ್ತೇನೆಂದು ನಂಬಿಸಿ ಮೋಸ ಮಾಡಿದ್ದ. ಇತ್ತೀಚೆಗೆ ನವೀನ್ ಬೇರೊಂದು ಯುವತಿಯೊಂದಿಗೆ ಓಡಾಡುತ್ತಿದ್ದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಹಿಮಾ ತನ್ನ ಸೂಸೈಡ್ ನೋಟ್ ನಲ್ಲಿ ಬರೆದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು ನವೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+