• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ

|

ಮೈಸೂರು, ಜುಲೈ 18: ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯವೊಂದು ರವಾನೆಯಾಗಿದೆ. ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯೊಬ್ಬರ ಹೃದಯ ಮತ್ತು ಶ್ವಾಸಕೋಶವನ್ನು ಬುಧವಾರ ರಾತ್ರಿ ಮೈಸೂರಿನಿಂದ ಚೆನ್ನೈಗೆ ಸಾಗಿಸಲಾಯಿತು.

ಅಂಗಾಂಗಗಳನ್ನು ಹೊತ್ತ ಆಂಬುಲೆನ್ಸ್ ಮೈಸೂರಿನ ಅಪೋಲೊ ಆಸ್ಪತ್ರೆಯಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಗ್ರೀನ್‌ ಕಾರಿಡಾರ್ -ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ನಿರ್ಮಿಸಲಾಗಿತ್ತು. ಅಲ್ಲಿಂದ ವಿಮಾನದಲ್ಲಿ ಚೆನ್ನೈಗೆ ಸಾಗಿಸಲಾಯಿತು. ದಾನಿಯ ಕಿಡ್ನಿ ಮತ್ತು ಯಕೃತ್‌ ಅನ್ನು ಮೈಸೂರಿನ ಅಪೋಲೊ ಆಸ್ಪತ್ರೆ ರೋಗಿಗಳಿಗೆ ಅಳವಡಿಸಲಾಯಿತು.

ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ

ಮಂಡ್ಯದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಜುಲೈ16ರಂದು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟ್ರಮ್ಯಾಟಿಕ್ ಬ್ರೇನ್ ಇಂಜ್ಯುರಿಗೆ ಒಳಗಾಗಿದ್ದರಿಂದ ಅವರು ಬದುಕುವುದು ಕಷ್ಟ ಎಂದು ವೈದ್ಯರು ತಿಳಿಸಿದ್ದರು. ಅಂಗಾಂಗಗಳ ದಾನಕ್ಕೆ ಕುಟುಂಬದವರು ಒಪ್ಪಿಗೆ ಸೂಚಿಸಿದ್ದರು.

ಈಚೆಗೆ ಕಟ್ಟಡದಿಂದ ಬಿದ್ದು ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರ ಹೃದಯ, ಕಾರ್ನಿಯಾ, ಯಕೃತ್, 2 ಮೂತ್ರ ಪಿಂಡಗಳನ್ನು ಜೆಎಸ್ ‌ಎಸ್‌ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲಾಗಿತ್ತು.

English summary
The living heart of an accident victim has been transfered from mysuru Apolo hospital to Chennai. Traffic police created zero traffic for Ambulance which carried living heart.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X