ಮೈಸೂರಿನ ಪಿರಿಯಾಪಟ್ಟಣದಲ್ಲಿ 6 ಜನರ ಬಲಿ ಪಡೆದ ಭೀಕರ ಸಿಡಿಲು
ಮೈಸೂರು, ಅಕ್ಟೋಬರ್ 5: ಸಿಡಿಲು ಬಡಿದು ಆರು ಜನ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ನಂದಿಪುರದಲ್ಲಿ ನಡೆದಿದೆ.
ಭೀಕರ ಸಿಡಿಲಿನ ಹೊಡೆತಕ್ಕೆ ಆರು ಜನ ಏಕಕಾಲಕ್ಕೆ ಅಸುನೀಗಿದ್ದಾರೆ. ಇವರೆಲ್ಲಾ ಭಾರಿ ಮಳೆಗೆ ಬೆದರಿ ಗುಡಿಯೊಂದರಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಅಲ್ಲಿಗೆ ಸಿಡಿಲು ಬಡಿದಿದೆ.

ಪುಟ್ಟಣ್ಣ (60), ಸುವರ್ಣಮ್ಮ(45), ಸುಜಯ್(18) ಸೇರಿದಂತೆ ಒಟ್ಟು ಆರು ಮಂದಿ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ನಿವಾಸಿಗಳಾಗಿದ್ದಾರೆ.
ದಾರುಣ ದುರಂತ ನಡೆದ ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.












Click it and Unblock the Notifications