• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೀಪಾಲಂಕಾರಕ್ಕೆ ಸಜ್ಜಾಗುತ್ತಿದೆ ಅರಮನೆ; ಬಲ್ಬ್‌ ಬದಲಿಸುವ ಕಾರ್ಯಕ್ಕೆ ಚಾಲನೆ

By ಮೈಸೂರು ಪ್ರತಿನಿಧಿ
|

ಮೈಸೂರು, ಅಕ್ಟೋಬರ್ 13: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಸರಳ ಸುಸೂತ್ರ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗಜಪಡೆಗೆ ಅರಮನೆ ಆವರಣದಲ್ಲಿ ತಾಲೀಮು ನಡೆಯುತ್ತಿದ್ದು, ಮತ್ತೊಂದೆಡೆ ಅರಮನೆಯಲ್ಲೂ ದಸರಾ ಅಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.

ರಾಜವಂಶಸ್ಥರು ಪೂಜಾ ಕೈಂಕರ್ಯಗಳಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅರಮನೆ ಆಡಳಿತ ಮಂಡಳಿ ಕೆಟ್ಟಿರುವ ಬಲ್ಬ್ ಗಳನ್ನು ಬದಲಿಸುತ್ತಿದೆ ಅರಮನೆಯು ಸುವರ್ಣ ಬಣ್ಣದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಕಣ್ಮನ ಸೆಳೆಯುವ ವಾಸ್ತುಶಿಲ್ಪ ನೋಡುಗರ ಮನಸೂರೆಗೊಳ್ಳುತ್ತದೆ. ಈ ಕಾರಣದಿಂದಲೇ ಪ್ರತಿನಿತ್ಯ ಅರಮನೆಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಅರಮನೆಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಕೊರೋನಾ ಎಲ್ಲರ ಸಂತಸ ಸಂಭ್ರಮವನ್ನೂ ಕಸಿದುಕೊಂಡಿದೆ.

 ಅರಮನೆಗೆ ಈ ಬಾರಿ ಜನರಿಗೆ ಪ್ರವೇಶವಿಲ್ಲ

ಅರಮನೆಗೆ ಈ ಬಾರಿ ಜನರಿಗೆ ಪ್ರವೇಶವಿಲ್ಲ

ದಸರಾ ಸಂದರ್ಭದಲ್ಲಿ ಲಕ್ಷಾಂತರ ಪ್ರವಾಸಿಗರು ಅರಮನೆಗೆ ಭೇಟಿ ನೀಡಿ, ಸಂಜೆ ವೇಳೆ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುವ ಅರಮನೆಯ ಅಂದವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿರುತ್ತಿದ್ದರು. ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ರಾತ್ರಿ 7 ಗಂಟೆಯಿಂದ 8ರವರೆಗೆ ವಿದ್ಯುತ್ ದೀಪಾಲಂಕಾರವಿರುತ್ತಿತ್ತು. ಅರಮನೆ ಇಂದ್ರಲೋಕದಂತೆ ಭಾಸವಾಗುತ್ತಿತ್ತು. ಆದರೆ ಈ ಬಾರಿ ಕೊರೋನಾದಿಂದ ಪ್ರವಾಸಿಗರು ಬರುವುದು ಕಷ್ಟಸಾಧ್ಯವಾದರೂ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ಅನುಮತಿಯಿಲ್ಲ.

ಸರಳ ದಸರಾದಲ್ಲಿ ಝಗಮಗಿಸುತ್ತಿದೆ ಮೈಸೂರು ನಗರ

 ದಸರಾದಲ್ಲಿ ರಾತ್ರಿ 7-9ರವರೆಗೆ ದೀಪಾಲಂಕಾರ

ದಸರಾದಲ್ಲಿ ರಾತ್ರಿ 7-9ರವರೆಗೆ ದೀಪಾಲಂಕಾರ

ದಸರಾ ಸಂದರ್ಭದಲ್ಲಿ ರಾತ್ರಿ 7ರಿಂದ 9 ಗಂಟೆವರೆಗೆ 2 ಗಂಟೆಗಳ ದೀಪಾಲಂಕಾರವಿರಲಿದೆ. ಅರಮನೆ ಹಾಗೂ ಅದರ ಕಾಂಪೌಂಡ್ ಗೆ 1 ಲಕ್ಷ ಬಲ್ಬ್ ಗಳನ್ನು ಅಳವಡಿಸಿದ್ದು, ಪ್ರತೀ ವರ್ಷವೂ ಕೆಟ್ಟ ಬಲ್ಬ್ ಗಳನ್ನು ಬದಲಿಸಲಾಗುತ್ತದೆ. ಪ್ರತಿ ಬಾರಿಯೂ ಅರಮನೆಗೆ ಶೇ.10ರಷ್ಟು ಬಲ್ಪ್ ಗಳನ್ನು ಬದಲಿಸಲಾಗುತ್ತಿದೆ. ಎತ್ತರದಲ್ಲಿರುವ ಬಲ್ಬ್‌ ಗಳನ್ನು ಕ್ರೇನ್ ಹಾಗೂ ಡ್ರೋನ್ ಸಹಾಯದಿಂದ ಬದಲಾವಣೆ ಮಾಡುವ ಕಾರ್ಯ ಭರದಿಂದ ಸಾಗಿದೆ.

 ಮಳೆಯಿಂದ ಕೆಟ್ಟಿರುವ ನೂರಾರು ಬಲ್ಬ್ ಗಳು

ಮಳೆಯಿಂದ ಕೆಟ್ಟಿರುವ ನೂರಾರು ಬಲ್ಬ್ ಗಳು

ಇತ್ತೀಚೆಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಅರಮನೆಗೆ ಅಳವಡಿಸಿರುವ ನೂರಾರು ಬಲ್ಬ್ ಗಳು ಕೆಟ್ಟು ಹೋಗಿವೆ. ಯದುವಂಶದ ಕೊನೆಯ ಅರಸ ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ 1942ರ ಸುಮಾರಿನಲ್ಲಿ ಅರಮನೆಗೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಿಸಲಾಯಿತು. ತೇಗದ ಮರದ ಪಟ್ಟಿಗಳ ಮೇಲೆ ಜೋಡಿಸಿ ಸುಮಾರು ಒಂದು ಲಕ್ಷ ಕ್ಯಾಂಡಿಸೆಂಟ್ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ 30 ವ್ಯಾಟ್ ನ ಬಲ್ಪ್ ಗಳನ್ನು ಅಳವಡಿಸಲಾಗಿತ್ತು. ನಂತರದ ದಿನಗಳಲ್ಲಿ 20 ವ್ಯಾಟ್ ಗೆ ಇಳಿಸಲಾಯಿತು. ಪ್ರಸ್ತುತ 15 ವ್ಯಾಟ್ ನ ಬಲ್ಬ್ ಗಳನ್ನು ಅಳವಡಿಸಲಾಗಿದೆ.

ಮೈಸೂರು ದಸರಾದಲ್ಲಿ ಕಾಣುತ್ತಿರುವುದೀಗ ಕೊರೊನಾ ಭಯ

 ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ

ನಿರ್ವಹಣೆಗೆ ಸಿಬ್ಬಂದಿ ನಿಯೋಜನೆ

ನಿರ್ವಹಣೆಗಾಗಿ ಅರಮನೆಯ ಪವರ್ ಹೌಸ್ ನಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅರಮನೆ ಹಾಗೂ ಗೇಟ್ ಗಳಿಗೆ ಮೂರು ಪ್ರತ್ಯೇಕ ಸ್ವಿಚ್ ಗಳಿವೆ. ದೀಪಾಲಂಕಾರದ ವೇಳಾಪಟ್ಟಿಯಂತೆ ಸಿಬ್ಬಂದಿ ಏಕಕಾಲಕ್ಕೆ ಮೂರು ಸ್ವಿಚ್ ಗಳನ್ನು ಆನ್ ಮಾಡುತ್ತಾರೆ. ಸ್ವಿಚ್ ಹಾಕಿದ ಕೂಡಲೇ ಇಡೀ ಅರಮನೆ ಚಿನ್ನದ ಬಣ್ಣದಿಂದ ಬೆಳಗಿ ಸ್ವರ್ಗವೇ ಧರೆಗಿಳಿದಂತೆ ಕಂಗೊಳಿಸುತ್ತದೆ. ಅಷ್ಟೇ ಅಲ್ಲದೇ ನಗರದ ಪ್ರಮುಖ ವೃತ್ತಗಳಲ್ಲಿಯೂ ಬಣ್ಣ ಬಣ್ಣದ ವಿದ್ಯುತ್ ದೀಪಗಳನ್ನು ಅಳವಡಿಸುವ, ವೈರ್‌ ಗಳ ಮಾಲೆಗಳನ್ನು ಇಳಿ ಬಿಡುವ ಕಾರ್ಯ ಭರದಿಂದ ಸಾಗಿದೆ.

English summary
The lighting preparations are taking place at palace premises for world famous Dasara. Staff started changing bulbs of palace today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X