Infosys: ಇನ್ಫೋಸಿಸ್‌ನಲ್ಲೇ ಹವಾ ಕ್ರಿಯೇಟ್ ಮಾಡಿದ್ದ ಚಿರತೆ ಕೊನೆಗೂ ಸಿಕ್ತಾ ?
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ಗೆ ನುಗ್ಗಿದ್ದ ಚಿರತೆ ಭಾರೀ ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಕಳೆದ 15 ದಿನಗಳಿಂದಲೂ ಚಿರತೆಗಾಗಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು. 2024ರ ಡಿಸೆಂಬರ್ 31ಕ್ಕೆ ಮೊದಲ ಬಾರಿ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು.
ಆದರೆ ಕಳೆದ 15 ದಿನಗಳಿಂದ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕ್ಯಾಂಪಸ್‌ಗೆ ಚಿರತೆ ಬಂದಿದೆ ಎನ್ನುವ ಸುದ್ದಿ ಕೇಳಿ ಬಂದ ಬೆನ್ನಲ್ಲೇ ಭಾರೀ ಟ್ರೋಲ್‌ಗಳು ಶುರುವಾಗಿದ್ದವು. ಇನ್ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ 70 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದ್ದನ್ನ ಹೇಳಿಕೆಯನ್ನು ಹಾಗೂ ಇನ್ಫೋಸಿಸ್‌ಗೆ ಚಿರತೆ ನುಗ್ಗಿದ ವಿಷಯವನ್ನ ಸೇರಿಸಿ ಟ್ರೋಲ್ ಮಾಡಲಾಗಿತ್ತು.

ದೇಶ ಉದ್ಧಾರ ಆಗಬೇಕು ಅಂತಾದರೆ ಎಲ್ಲಾ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅಂತ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಹೇಳಿದ್ದರು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವವರಿಗೂ ವರ್ಕ್‌ಫ್ರಮ್ ಹೋಮ್ ಸಿಗಬೇಕು ಅಂತಾದರೆ ಅದು ಚಿರತೆಯಿಂದ ಮಾತ್ರ ಸಾಧ್ಯ ಎಂದು ನೆಟ್ಟಿಗರು ಟ್ರೋಲ್ ಮಾಡಿದರು.
ಇಷ್ಟೇಲ್ಲ ಹವಾ ಕ್ರಿಯೆಟ್ ಮಾಡಿದ್ದ ಚಿರತೆ ಕೊನೆಗೂ ಸಿಕ್ಕಿಲ್ಲ. ಹೌದು ಕಳೆದ 10 ದಿನಗಳಿಂದಲೂ ಚಿರತೆಗಾಗಿ ನಿರಂತರವಾಗಿ ಶೋಧ ನಡೆಸಿದರೂ, ಚಿರತೆ ಪತ್ತೆಯಾಗದ ಹಿನ್ನೆಲೆಯಲ್ಲಿ ಚಿರತೆ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿರುವುದಾಗಿ ಅರಣ್ಯ ಇಲಾಖೆ ಹೇಳಿದೆ.
ಕ್ಯಾಂಪಸ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದ ಚಿರತೆಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿಯು ಕಳೆದ 10 ದಿನಗಳಿಂದ ನಿರಂತರ ಹಾಗೂ ತೀವ್ರವಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಚಿರತೆ ಇರುವ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಅಲ್ಲದೆ
ಸಿಸಿಟಿವಿ ಕ್ಯಾಮೆರಾ ಅಥವಾ ಕ್ಯಾಮೆರಾ ಟ್ರ್ಯಾಪ್‌ಗಳಲ್ಲೂ ಕಾಣಿಸಿಕೊಂಡಿಲ್ಲ. ಮುಖ್ಯವಾಗಿ ಚಿರತೆ ಕಾರ್ಯಾಚರಣೆ ನಡೆಸುವ ಸಮಯದಲ್ಲಿ ಚಿರತೆಯ ಹೆಜ್ಜೆಗುರುತುಗಳನ್ನು ಫಾಲೋ ಮಾಡಲಾಗುತ್ತದೆ. ಆದರೆ ಕಾರ್ಯಾಚರಣೆ ನಡೆಸುತ್ತಿರುವ ತಂಡಕ್ಕೆ ಹೆಜ್ಜೆಯ ಗುರುತುಗಳು ಸೇರಿದಂತೆ ಯಾವುದೇ ಗುರುತುಗಳು ಸಹ ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಚಿರತೆ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿರುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಕೆ.ಎನ್. ಬಸವರಾಜ್ ಅವರು ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಡ್ರೋನ್ ಕಾರ್ಯಾಚರಣೆಯಲ್ಲೂ ಪತ್ತೆ ಆಗಿಲ್ಲ: ಇನ್ನು ಇನ್ಫೋಸಿಸ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು ಪತ್ತೆ ಮಾಡುವ ಉದ್ದೇಶದಿಂದ ಡ್ರೋನ್ ಕಾರ್ಯಾಚರಣೆಯನ್ನು ಸಹ ನಡೆಸಲಾಗಿತ್ತು. ಕ್ಯಾಂಪಸ್‌ನಲ್ಲಿ ಎರಡು ಡ್ರೋನ್‌ಗಳ ಮೂಲಕ ಶೋಧವನ್ನು ಸಹ ನಡೆಸಲಾಗಿತ್ತು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬಸವರಾಜ್ ಅವರು ತಿಳಿಸಿದ್ದಾರೆ.
ರಾತ್ರಿ ವೇಳೆ ಥರ್ಮಲ್ ಡ್ರೋನ್‌ಗಳನ್ನು ಸಹ ಬಳಸಲಾಗಿದೆ. ಆದರೆ ನಿರಂತರ ಕೊಂಬಿಂಗ್‌ನ ಹೊರತಾಗಿಯೂ ಚಿರತೆ ಇರುವ ಬಗ್ಗೆ ಯಾವುದೇ ಸುಳಿವು ನೀಡದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆ ನಿಲ್ಲಿಸಿರುವುದಾಗಿ ಅರಣ್ಯ ಇಲಾಖೆ ಖಚಿತಪಡಿಸಿದೆ.












Click it and Unblock the Notifications