ಒಂದು ಗಂಟೆಯಲ್ಲಿ ಕನ್ನಡ ಕಲಿಯಿರಿ! ವಿದೇಶಿಯರಿಗಾಗಿ ಹೊಸ ಕೊಡುಗೆ

ಮೈಸೂರು, ಅಕ್ಟೋಬರ್ 31: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೈಸೂರಿನ ಬೆಳಕು ಸಂಸ್ಥೆ ವತಿಯಿಂದ ದೇಶ, ವಿದೇಶಗಳಿಂದ ಆಗಮಿಸಿರುವ ಪ್ರವಾಸಿಗರಿಗೆ ಕೇವಲ ಒಂದು ಗಂಟೆಯಲ್ಲಿ ಕನ್ನಡ ಕಲಿಯಿರಿ' ಎಂಬ ಕಿರು ಮಾರ್ಗದರ್ಶಿ ಪುಸ್ತಕವನ್ನು ವಿತರಿಸಲಾಯಿತು.

ಅರಮನೆಯ ದಕ್ಷಿಣದ ವರಹಾದ್ವಾರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚೆನ್ನಪ್ಪ ಅವರು ಪ್ರವಾಸಿಗರಿಗೆ ಕಿರು ಮಾರ್ಗದರ್ಶಿ ಪುಸ್ತಕ ನೀಡುವ ಮೂಲ ವಿವಿಧ ಪ್ರವಾಸಿ ಸ್ಥಳಗಳಲ್ಲಿ ನಡೆಸುವ ಒಂದು ವಾರದ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Learn Kannada in One hour, new book for foreigners releases in Mysuru

ನಂತರ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಸಂಭ್ರಮ ನಮ್ಮ ತಾಯಿಯ ಜನ್ಮದಿನದಷ್ಟೆ ಸಂಭ್ರಮವನ್ನುಂಟು ಮಾಡುತ್ತದೆ. ಹೆತ್ತ ತಾಯಿ ನಮಗೆ ಶರೀರ ನೀಡಿದರೆ ಕನ್ನಡಾಂಬೆಯು ವ್ಯಕ್ತಿತ್ವ ನೀಡಿದವಳು. ಕನ್ನಡಾಂಬೆಯ ವರಪುತ್ರರಾದ ನಾವು ಭಾಷೆ, ಭಾವನೆ, ನಡವಳಿಕೆ, ಸಂಸ್ಕಾರ, ಸಹಿಷ್ಣುತೆ ಎಲ್ಲದರಲ್ಲೂ ಇಡೀ ಜಗತ್ತಿಗೆ ಮಾದರಿಯಾಗಿದ್ದೇವೆಂದರೆ ತಪ್ಪಲ್ಲ. ಎಲ್ಲ ಭಾಷೆಗಳನ್ನು ಕಲಿಯುವುದೇ ಕನ್ನಡಿಗರ ವಿಶೇಷತೆ. ಆದರೆ ಅದೇ ಕಾರಣಕ್ಕೆ ನಮ್ಮ ಮಾತೃಭಾಷೆಯನ್ನು ಕಡೆಗಣಿಸಬಾರದು ಎಂದರು.

ಬೆಳಕು ಸಂಸ್ಥೆಯ ಸಂಚಾಲಕ ಕೆ.ಎಂ.ನಿಶಾಂತ್ ಮಾತನಾಡಿ, ಪ್ರವಾಸಿರಿಗೆ ರಾಜ್ಯದ ಭಾಷೆ, ಸಂಸ್ಕೃತಿ, ಸಂಪ್ರದಾಯ ಹಾಗೂ ನಮ್ಮ ಮೈಸೂರಿನ ವಿಶೇಷತೆಗಳ ಬಗ್ಗೆ ತಿಳಿಸಿ ಅವರು ಕನ್ನಡವನ್ನು ಕಲಿಯಲು ಪ್ರೋತ್ಸಾಹ ನೀಡುವ ಸಲುವಾಗಿ ಕೇವಲ ಒಂದು ಗಂಟೆಯಲ್ಲಿ ಕನ್ನಡ ಕಲಿಯಿರಿ' ಎಂಬ ಪುಸ್ತಕ ನೀಡಲಾಗುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+