ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಯ ಕಾರ್ತಿಕ ಸೋಮವಾರದ ಸಂಭ್ರಮಕ್ಕೆ ಸಜ್ಜಾದ ಗದ್ದಿಗೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 13: ಹುಣಸೂರು ತಾಲೂಕಿನ ಶ್ರೀಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ಕಡೇ ಕಾರ್ತಿಕ ಸೋಮವಾರದ(ನ.13) ಅಂಗವಾಗಿ ಭಾನುವಾರದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿವೆ. ಎರಡು ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವದಲ್ಲಿ ಪಲ್ಲಕ್ಕಿ ಉತ್ಸವ-ದೀಪೋತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಸುಮಾರು ನಲವತ್ತರಿಂದ ಐವತ್ತು ಸಾವಿರ ಭಕ್ತರು ಭಾಗವಹಿಸಲಿದ್ದಾರೆ.

ಉತ್ಥಾನ ದ್ವಾದಶಿ: ತುಳಸಿ ಮದುವೆಯ ಆಚರಣೆ ಏಕೆ? ಹೇಗೆ?ಉತ್ಥಾನ ದ್ವಾದಶಿ: ತುಳಸಿ ಮದುವೆಯ ಆಚರಣೆ ಏಕೆ? ಹೇಗೆ?

ಹಾಗೆನೋಡಿದರೆ ಶ್ರೀಕೆಂಡಗಣ್ಣಸ್ವಾಮಿ ಗದ್ದಿಗೆಯು ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದು, ಮೈಸೂರು ಜಿಲ್ಲೆಯ ಪ್ರಮುಖ ಕ್ಷೇತ್ರವಾಗಿಯೂ ಗಮನಸೆಳೆಯುತ್ತಿದೆ. ಅರಕಲಗೂಡು ತಾಲೂಕಿನ ಬಸವಾಪಟ್ಟಣದ ಅಡಿಕೆ ವ್ಯಾಪಾರಿ ತೊಟ್ಟಿಮನೆ ಕುಟುಂಬದವರು ಪುನರುಜ್ಜೀವನಗೊಳಿಸಿ ಸುಂದರವಾದ ಭವ್ಯ ದೇವಸ್ಥಾನವನ್ನು ನಿರ್ಮಿಸಿಕೊಟ್ಟಿರುವುದನ್ನು ಕಾಣಬಹುದಾಗಿದೆ.

ವರ್ಷ ಪೂರ್ತಿ ಹಬ್ಬ ಹರಿದಿನಗಳಲ್ಲಿ ಇಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಕಡೇ ಕಾರ್ತಿಕದಂದು ಕೆಂಡಗಣ್ಣಸ್ವಾಮಿ ಹಾಗೂ ಮಹದೇಶ್ವಸ್ವಾಮಿಗೆ ವಿಶೇಷಪೂಜಾ ಕಾರ್ಯಗಳು ನಡೆಯುತ್ತಿದ್ದು, ಈ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುವುದು ಮಾಮೂಲಿಯಾಗಿದೆ.

ಮುಂಜಾನೆಯಿಂದಲೇ ಪೂಜಾಕಾರ್ಯ

ಮುಂಜಾನೆಯಿಂದಲೇ ಪೂಜಾಕಾರ್ಯ

ಕಾರ್ತಿಕ ಸೋಮವಾರದಂದು ಮುಂಜಾನೆಯಿಂದಲೇ ದೇವರ ಪೂಜಾ ಕೈಂಕರ್ಯಗಳು ಆರಂಭವಾಗಿ ತಡರಾತ್ರಿವರೆಗೂ ನಡೆಯಲಿದೆ. ಗದ್ದಿಗೆಯ ಲಕ್ಷ್ಮಿ ಸೌಂಡ್ಸ್ ಸಿಸ್ಟಂನ ಮೀನಾಕ್ಷಿ-ಗೌರೀಶ್ ಕುಟುಂಬದವರು ಸಂಜೆ ಗದ್ದಿಗೆಯ ರಾಜಬೀದಿಯಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ ನಡೆಸಿಕೊಡಲಿದ್ದಾರೆ.

ಸಿಡಿಮದ್ದು ಪ್ರದರ್ಶನ

ಸಿಡಿಮದ್ದು ಪ್ರದರ್ಶನ

ಸುಮಾರು 30 ಸಾವಿರ ಭಕ್ತರಿಗೆ ತಿಂಡಿ-ಊಟದ ವ್ಯವಸ್ಥೆ ಹಾಗೂ ರಾತ್ರಿ ದೀಪೋತ್ಸವ, ಸಿಡಿಮದ್ದು ಪ್ರದರ್ಶನವನ್ನು ಮೈಸೂರಿನ ಬೋಗಾದಿಯ ನಳಿನಿ-ಬಿ.ಕೆ.ರಾಜು ಕುಟುಂಬದವರು ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಗದ್ದಿಗೆಯ ದೇವಸ್ಥಾನದಲ್ಲಿ ನಡೆಯುವ ಎಲ್ಲ ಪೂಜಾ, ಜಾತ್ರಾಮಹೋತ್ಸವ ಸೇರಿದಂತೆ ಎಲ್ಲಕಾರ್ಯಕ್ರಮಕ್ಕೂ ಮೈಸೂರಿನ ದೇವರಾಜಮಾರುಕಟ್ಟೆಯ ಗಾಯಿತ್ರಿ ಫ್ಲವರ್ ಸ್ಟಾಲ್ ನವರು ಉಚಿತವಾಗಿಯೇ ಹೂವಿನ ಅಲಂಕಾರವನ್ನು ಮಾಡಿಕೊಡುತ್ತಾರೆ.

ಕುಸ್ತಿಪಂದ್ಯಾವಳಿ, ನಾಟಕ

ಕುಸ್ತಿಪಂದ್ಯಾವಳಿ, ನಾಟಕ

ಜಾತ್ರೆಯ ಅಂಗವಾಗಿ ನ.13 ಸೋಮವಾರ ಮಧ್ಯಾಹ್ನ 3ಕ್ಕೆ ದೇವಸ್ಥಾನದ ಹೊರ ಆವರಣದಲ್ಲಿ 25 ಜೊತೆ ಕುಸ್ತಿಪಂದ್ಯಾವಳಿ ನಡೆಯಲಿದೆ. ರಾತ್ರಿ ಮೈಸೂರು ತಾಲೂಕು ದಾಸನಕೊಪ್ಪಲಿನ ಗ್ರಾಮಸ್ಥರಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.

ನ.19ರಂದು ಸರಳ ಮದುವೆ

ನ.19ರಂದು ಸರಳ ಮದುವೆ

ಜಾತ್ರಾ ಯಶಸ್ವಿಗೆ ದುಡಿದವರಿಗೆ ಹಾಗೂ ಅವರ ಸ್ನೇಹಿತರು, ನೆಂಟರಿಷ್ಟರಿಗೆ ಪ್ರತಿವರ್ಷದಂತೆ ನಳಿನಿರಾಜು ಕುಟುಂಬದವರು ವಿಶೇಷ ದಾಸೋಹದ ಜೊತೆಗೆ ಒಂದು ಜೋಡಿಯ ಸರಳ ವಿವಾಹವನ್ನು ಸಹ ನಡೆಸಿಕೊಡಲಿದ್ದಾರೆ.

ಜಾತ್ರಾ ಸಂದರ್ಭ ಗದ್ದಿಗೆಗೆ ಮೈಸೂರು, ಹುಣಸೂರು, ಎಚ್.ಡಿ.ಕೋಟೆಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

English summary
For last monday(Nov 13th) of Hindu month of Kartika in 2017, People of Gaddige in Hunsur taluk, Mysuru district are in festival mood. Almost 50,000 people will be presented in the festival which will be taking place in Shri Kengannaswamy Gaddige in Hunsur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X