• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನದ ಹಿನ್ನೆಲೆ ಬೆಂಗಳೂರಿಗೆ ತೆರಳಿದ ಸಿಎಂ

|

ಮೈಸೂರು, ನವೆಂಬರ್.12: ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನ ಎಚ್. ಡಿ. ಕೋಟೆಯ ರೆಸಾರ್ಟ್ ಒಂದರಲ್ಲಿ ವಿಶಾಂತ್ರಿಯಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ರಸ್ತೆ ಮೂಲಕ ಎಚ್​.ಡಿ.ಕೋಟೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ

ದಿವಂಗತ ಅನಂತಕುಮಾರ್ ಅಂತಿಮ ದರ್ಶನ ಪಡೆಯಲು ಎಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿ ಖಾಸಗಿ ರೆಸಾರ್ಟ್​ ನಿಂದ ಹಿಂತಿರುಗಿದ್ದು, ಇವರ ಜೊತೆ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಇದ್ದಾರೆ.

ಅನಂತ್ ಕುಮಾರ್ ಅಗಲಿಕೆಗೆ ಸಂತಾಪ ಸೂಚಿಸಿದ ಖಾದರ್, ಶಕುಂತಲಾ ಶೆಟ್ಟಿ

ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ರೆಸಾರ್ಟ್​ನಲ್ಲಿ ವಿಶಾಂತ್ರಿಯಲ್ಲಿದ್ದ ಕುಮಾರಸ್ವಾಮಿ ರಾಗಿ ರೊಟ್ಟಿ, ರಾಗಿ ಮುದ್ದೆ, ಸೊಪ್ಪು, ಸಾಂಬಾರ ಮಾತ್ರ ಸೇವಿಸಿದ್ದರು ಎನ್ನಲಾಗಿದೆ.

ಇನ್ನು ಸಿಎಂಗೆ ಕಳೆದ ರಾತ್ರಿ ಚಿಕಿತ್ಸೆ ನೀಡಲು ಏಳು ಮಂದಿ ವೈದ್ಯರ ತಂಡ ರೆಸಾರ್ಟ್​ಗೆ ತೆರಳಿತ್ತು. ಸಚಿವ ಸಾ.ರಾ. ಮಹೇಶ್ ರೆಸಾರ್ಟ್‌ಗೆ ಭೇಟಿ ನೀಡಿ, ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಅನಂತ ಕುಮಾರ್ ಬಾಲ್ಯದಲ್ಲಿ ಹೀಗಿದ್ದರು: ಅಪರೂಪದ ಫೋಟೊಗಳು

ಕುಮಾರಸ್ವಾಮಿಗೆ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಏಳು ಮಂದಿ ವೈದ್ಯರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಅವರೆಲ್ಲರೂ ಸಿಎಂ ಹಿಂತಿರುಗಿದ ಬಳಿಕ ವಾಪಸ್ ತೆರಳಿದ್ದಾರೆ ಎನ್ನಲಾಗಿದೆ.

English summary
Union Minister Ananth Kumar's death:Chief Minister Kumaraswamy has traveled from HD Kote to Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X