ಲಾಕ್ ಡೌನ್ ನಿಯಮ ಲೆಕ್ಕಕ್ಕಿಲ್ಲ; ಮೈಸೂರಲ್ಲಿ ಅದ್ದೂರಿ ಬರ್ತ್ ಡೇ ಪಾರ್ಟಿ

ಮೈಸೂರು, ಜೂನ್ 17: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಆದರೆ ಈ ನಡುವೆಯೂ ನಿಯಮಗಳನ್ನು ಮೀರಿ ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯಾಧ್ಯಕ್ಷರು ಅದ್ದೂರಿ ಪಾರ್ಟಿ ನಡೆಸಿದ್ದಾರೆ.

ಮೈಸೂರು ಸುಖಧರೆ ರೆಸ್ಟೋರೆಂಟ್ ಆವರಣದಲ್ಲಿ ಕೆಪಿಟಿಸಿಎಲ್ ನೌಕರ ಸಂಘದ ರಾಜ್ಯಾಧ್ಯಕ್ಷ ರಾಮಕೃಷ್ಣಯ್ಯ ಭರ್ಜರಿ ಬರ್ತ್ ಡೇ ಪಾರ್ಟಿ ನಡೆಸಿದ್ದು, ನೂರೈವತ್ತಕ್ಕೂ ಹೆಚ್ಚು ಜನರು ಈ ಪಾರ್ಟಿಯಲ್ಲಿ ಸೇರಿರುವುದಾಗಿ ತಿಳಿದುಬಂದಿದೆ.

ಈ ಬರ್ತ್ ಡೇ ಪಾರ್ಟಿಯಲ್ಲಿ ಮೈಸೂರು ಚಾಮರಾಜನಗರ ವಿಭಾಗದ ಕೆಪಿಟಿಸಿಎಲ್ ಇಂಜಿನಿಯರ್ ಗಳು, ಇತರೆ ಸಿಬ್ಬಂದಿಯೂ ಭಾಗವಹಿಸಿದ್ದು, ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ, ಹೆಚ್ಚು ಜನರನ್ನು ಸೇರಿಸಿಕೊಂಡು ಮಾಂಸದೂಟ ಮಾಡಿ ಜೋರು ಪಾರ್ಟಿ ನಡೆಸಲಾಗಿದೆ.

Violation Of Lockdown Rules In KPTCL Workers Association President Birthday Party In Mysuru

ವಿಪರ್ಯಾಸ ಎಂದರೆ, ಹುಟ್ಟಿದ ದಿನಾಂಕವೇ ಗೊತ್ತಿಲ್ಲದಿದ್ದರೂ ರಾಜ್ಯಾಧ್ಯಕ್ಷರು ಕೇಕ್ ಕತ್ತರಿಸಿ ಪಾರ್ಟಿ ನಡೆಸಿರುವುದು. ಕೋವಿಡ್ -19 ಹಿನ್ನೆಲೆ ಸರ್ಕಾರ ಕೆಲವು ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಆ ನಿಯಮಗಳನ್ನು ಗಾಳಿಗೆ ತೂರಿದ ಅದ್ದೂರಿ ಪಾರ್ಟಿ ನಡೆಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+