ನರಭಕ್ಷಕ ವ್ಯಾಘ್ರನ ಬಗ್ಗೆ ಮತ್ತೊಂದಿಷ್ಟು ಮಾಹಿತಿ!

ಮೈಸೂರು, ಡಿ. 6 : ನರಭಕ್ಷಕ ಹುಲಿಯ ದಾಳಿಯಿಂದ ಜನರು ಬಚಾವ್, ಕಂಡಲ್ಲಿ ಗುಂಡು ಆದೇಶದಿಂದ ಹುಲಿ ಬಚಾವ್. ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ನಾಲ್ವರನ್ನು ಬಲಿ ತೆಗೆದುಕೊಂಡ ನರಭಕ್ಷಕ ಗಂಡು ಹುಲಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವ ಮುಖಾಂತರ ಎರಡು ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ಮೈಸೂರು ಮೃಗಾಲಯದಲ್ಲಿ ನರಭಕ್ಷಕ ಹುಲಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೆರೆ ಸಿಕ್ಕಿರುವ ಹುಲಿಯು ನಾಲ್ವರನ್ನು ತಿಂದು ತೇಗಿತ್ತೆ? ಎಂದು ಖಚಿತ ಪಡಿಸಿಕೊಳ್ಳಲು ಮಲ ಮತ್ತು ಮೂತ್ರ ಪರೀಕ್ಷೆ ಸೇರಿದಂತೆ ಅಗತ್ಯ ಪರೀಕ್ಷೆಗಳನ್ನು ಮೈಸೂರು ಮೃಗಾಲಯದ ವೈದ್ಯರು ಶುಕ್ರವಾರ ನಡೆಸುತ್ತಿದ್ದಾರೆ.

ಶುಕ್ರವಾರ ಬೆಳಗ್ಗೆ ಹುಲಿ ಅರವಳಿಕೆ ಮತ್ತಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದು ಹುಲಿಯ ಆರೋಗ್ಯದ ಉಸ್ತುವಾರಿ ವಹಿಸಿರುವ ವೈದ್ಯ ಡಾ.ಸುರೇಶ್ ಹೇಳಿದ್ದಾರೆ. ಹುಲಿಯ ಬಾಯಿಯಲ್ಲಿ ಮುಳ್ಳು ಹಂದಿಯ ಮುಳ್ಳೊಂದು ನಾಟಿಕೊಂಡಿದ್ದು, ಅದನ್ನು ತೆಗೆಯಲು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. (ಹುಲಿ ಗುಂಡಿಕ್ಕಲು ಆದೇಶಿಸಿದ್ದಕ್ಕೆ ಓದುಗರ ಆಕ್ರೋಶ)

ಗುರುವಾರ ಚಿಕ್ಕಬರಗಿ ಗ್ರಾಮದ ಬಳಿ ನಾಲ್ವರನ್ನು ತಿಂದು ತೇಗಿದ್ದ ನರಭಕ್ಷಕ ಹುಲಿಯನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಸದ್ಯ ಹುಲಿ ಮೈಸೂರು ಮೃಗಾಲಯದಲ್ಲಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸುವ ಕುರಿತು ಚರ್ಚೆ ನಡೆಯುತ್ತಿದೆ. ನ.27ರಿಂದ ಡಿ.3ರವರೆಗೆ ನಾಲ್ವರನ್ನು ಕೊಂದಿದ್ದ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ 50 ಅರಣ್ಯ ಸಿಬ್ಬಂದಿ, ಮೂವರು ವೈದ್ಯರು ಭಾಗವಹಿಸಿದ್ದರು. ನಾಲ್ಕ ದಸರಾ ಆನೆಗಳನ್ನು ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗಿತ್ತು. ಹುಲಿ ಕಾರ್ಯಾಚರಣೆ ಬಗ್ಗೆ ಒಂದಿಷ್ಟು ಮಾಹಿತಿ..

ಹುಲಿ ಪತ್ತೆಯಾಗಿದ್ದು ಹೇಗೆ?

ಹುಲಿ ಪತ್ತೆಯಾಗಿದ್ದು ಹೇಗೆ?

ಕಾಡುಪ್ರಾಣಿಗಳು ಒಂದು ಪ್ರದೇಶಕ್ಕೆ ಸೀಮಿತವಾಗಿರುತ್ತವೆ ಎಂಬ ಜಾಡು ಹಿಡಿದು ಗುರುವಾರ ಬೆಳಗ್ಗೆ 6 ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಬೆಳಗ್ಗೆ 11 ಗಂಟೆ ವೇಳೆಗೆ ಚಿಕ್ಕಬರಗಿ ಗ್ರಾಮದ ಕಾರೆಕಟ್ಟೆ ಬಳಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ದಸರಾ ಆನೆ ಕಾಂತಿಯ ಅಸಹಜ ವರ್ತನೆಯಿಂದ ಹುಲಿಯ ಇರುವ ಬಗ್ಗೆ ಸುಳಿವು ಲಭಿಸಿತು. ಹುಲಿ ಕಂಡ ತಕ್ಷಣ ಆನೆಯ ಮೇಲಿದ್ದ ವೈದ್ಯ ಸನತ್ ಕುಮಾರ್ ಹುಲಿಗೆ ಅರವಳಿಗೆ ಪ್ರಯೋಗ ಮಾಡಿದ್ದಾರೆ.

ಮೈಸೂರು ಮೃಗಾಲಯಕ್ಕೆ ಹುಲಿ

ಮೈಸೂರು ಮೃಗಾಲಯಕ್ಕೆ ಹುಲಿ

ಬನ್ನೇರುಘಟ್ಟದ ಡಾ.ಸನತ್‌ಕುಮಾರ್‌ 3-4 ಸುತ್ತು ಅರವಳಿಕೆ ಚುಚ್ಚುಮದ್ದು ಇದ್ದ ಗುಂಡನ್ನು ಹುಲಿಯ ಮೇಲೆ ಪ್ರಯೋಗಿಸಿದ್ದರು. ಒಂದು ಚುಚ್ಚುಮದ್ದು ಮಾತ್ರ ಹುಲಿಗೆ ನಾಟಿತ್ತು. ಬಳಿಕ ಹುಲಿ ಸ್ವಲ್ಪ ದೂರ ಹೋಗಿ ಪ್ರಜ್ಞೆ ತಪ್ಪಿ ಬಿದ್ದಿತು. ಕೂಡಲೇ ಸಿಬ್ಬಂದಿ ಬಲೆ ಮೂಲಕ ಅದನ್ನು ಸೆರೆಹಿಡಿದು ಬೋನಿಗೆ ಹಾಕಿದರು. ಚಿಕಿತ್ಸೆ ನಂತರ ಹುಲಿಗೆ ಪ್ರಜ್ಞೆ ಬಂತು. ಅಲ್ಲಿಂದ ಕೋಟೆ ಪ್ರವಾಸಿ ಮಂದಿರಕ್ಕೆ ತಂದು ಕಾಡಿನ ಮಾರ್ಗವಾಗಿ ಮೈಸೂರಿನ ಮೃಗಾಲಯಕ್ಕೆ ಹುಲಿಯನ್ನು ಕರೆತರಲಾಗಿದೆ.

ಮೂರು ತಂಡ, ಮೂವರು ವೈದ್ಯರು

ಮೂರು ತಂಡ, ಮೂವರು ವೈದ್ಯರು

ಸೆರೆಸಿಕ್ಕ ಹುಲಿಗೆ ಸುಮಾರು 12 ವರ್ಷ ಎಂದು ಎಸಿಎಫ್ ರವಿಶಂಕರ್‌ ಹೇಳಿದ್ದಾರೆ. ನರಭಕ್ಷರನನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಮೂವರು ಪಶುವೈದ್ಯರು ಸೇರಿದಂತೆ ಸುಮಾರು 50 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಇವರಿಗೆ 25ಕ್ಕೂ ಹೆಚ್ಚು ಸ್ಥಳೀಯ ರೈತರು ನೆರವು ನೀಡಿದರು. ಹುಲಿ ಸೆರೆಗಾಗಿ ದಸರಾ ಆನೆಗಳಾದ ಅಭಿಮನ್ಯು, ಲಕ್ಷ್ಮೀ, ಸರಳ, ಕಾಂತಿಯನ್ನು ಬಳಸಿಕೊಳ್ಳಲಾಯಿತು.

ನಾಲ್ವರನ್ನು ತಿಂದು ತೇಗಿದ್ದ ನರಭಕ್ಷಕ

ನಾಲ್ವರನ್ನು ತಿಂದು ತೇಗಿದ್ದ ನರಭಕ್ಷಕ

ನ.27 ರಂದು ಎಚ್‌.ಡಿ.ಕೋಟೆ ತಾಲೂಕಿನ ನಡಾಡಿ ಗ್ರಾಮದದಲ್ಲಿ ಬಸವರಾಜು (55) ಜಮೀನಿನಲ್ಲಿ ಹಸುಗಳನ್ನು ಮೇಯಿಸುವಾಗ ಹುಲಿ ಅವರನ್ನು ತಿಂದಿತ್ತು. ನ.29 ರಂದು ಕೋಟೆ ತಾಲೂಕಿನ ಸೀಗೆಹಾಡಿ ಚೆಲುವ (27) ಹುಲಿಗೆ ಬಲಿಯಾದರು. ನವಂಬರ್‌ 30 ರಂದು ಕೋಟೆ ತಾಲೂಕಿನ ಡಿ.ಬಿ.ಕುಪ್ಪೆಯ ಸುರೇಶ ಹುಲಿಗೆ ಬಲಿಯಾಗಿದ್ದರು. ಡಿ. 3 ರಂದು ಕೋಟೆ ತಾಲೂಕಿನ ಚಿಕ್ಕಬರಗಿಯ ಬಸಪ್ಪ (70) ಅವರನ್ನು ಹುಲಿ ತಿಂದು ಹಾಕಿತ್ತು.

ಹುಲಿಯನ್ನು ಕೊಲ್ಲಿ ಗ್ರಾಮಸ್ಥರ ಒತ್ತಾಯ

ಹುಲಿಯನ್ನು ಕೊಲ್ಲಿ ಗ್ರಾಮಸ್ಥರ ಒತ್ತಾಯ

ನರಭಕ್ಷಕ ಹುಲಿ ಸೆರೆಸಿಕ್ಕ ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಹುಲಿಯನ್ನು ತಮ್ಮ ವಶಕ್ಕೆ ಒಪ್ಪಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಹುಲಿಯ ಜೀವ ಉಳಿಸಿದರು. ಸದ್ಯ ಅದನ್ನು ಮೈಸೂರು ಮೃಗಾಲಯದಲ್ಲಿ ಇಡಲಾಗಿದ್ದು, ಅದನ್ನು ಮತ್ತೆ ಕಾಡಿಗೆ ಬಿಡುವುದಿಲ್ಲ ಎಂದು ನಾಗರೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಗೋಕುಲ್ ಹೇಳಿದ್ದಾರೆ.

ಹುಲಿ ಕಾಲಿಗೆ ಗ್ಯಾಂಗ್ರಿನ್ ಆಗಿದೆ

ಹುಲಿ ಕಾಲಿಗೆ ಗ್ಯಾಂಗ್ರಿನ್ ಆಗಿದೆ

10 ರಿಂ ೧೨ ವರ್ಷ ಪ್ರಾಯದ ಹುಲಿಯ ಬಲಗಾಲಿಗೆ ಗ್ಯಾಂಗ್ರಿನ್ ಆಗಿದೆ. ಮಳ್ಳು ಹಂದಿ ಜೊತೆ ಕಾದಾಡಿ ಏಟು ತಿಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ಯಾಂಗ್ರಿನ್ ಕಾರಣದಿಂದ ಹುಲಿ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿತ್ತು. ಆದ್ದರಿಂದ ನರಭಕ್ಷರವಾಗಿ ಪರಿವರ್ತನೆಯಾಗಿತ್ತು ಎಂದು ವೈದ್ಯರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+