• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಪ್ರೇಕ್ಷಾ ಹಾಗೂ ಮನು ಮೈಸೂರು ಜಿಲ್ಲೆಗೆ ಪ್ರಥಮ

|

ಮೈಸೂರು, ಆಗಸ್ಟ್ 10: 2019-2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಐಡಿಯಲ್ ಜಾವ ರೋಟರಿ ಶಾಲೆಯ ವಿದ್ಯಾರ್ಥಿನಿ ಎನ್.ಆರ್.ಪ್ರೇಕ್ಷಾ ಹಾಗೂ ವಿಜಯ ವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು 625ಕ್ಕೆ 623 ಅಂಕಗಳಿಸಿ ಮೈಸೂರು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.

SSLC Result: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಬೈಂದೂರಿನ ಸುರಭಿ ಶೆಟ್ಟಿ

ರವಿಚಂದ್ರೇ ಗೌಡ, ರೂಪಾ ದಂಪತಿಯ ಪುತ್ರಿ ಪ್ರೇಕ್ಷಾ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 99, ಕನ್ನಡದಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ.

ವಿಜಯವಿಠಲ ಶಾಲೆಯ ವಿದ್ಯಾರ್ಥಿ ಸಿ.ಮನು, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 100, ಕನ್ನಡದಲ್ಲಿ 100, ಗಣಿತದಲ್ಲಿ 99, ವಿಜ್ಞಾನದಲ್ಲಿ 99, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಗಳಿಸಿದ್ದಾರೆ. ಮನು ಸಿ.ಚಿಕ್ಕಣ್ಣ, ಎಂ.ಭಾಗ್ಯ ದಂಪತಿಯ ಪುತ್ರನಾಗಿದ್ದು, ಇವರನ್ನು ಶಾಲೆಯ ಆಡಳಿತ ಮಂಡಳಿ ಅಭಿನಂದಿಸಿದೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆ

ವಿಜಯವಿಠಲ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಸ್.ಸಂಜೀವ್ ಹೊಳ್ಳ 621 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿ.ಎನ್.ಸುಧೀಂದ್ರ, ವೀಣಾ ದಂಪತಿಯ ಪುತ್ರನಾಗಿರುವ ಸಂಜೀವ್ ಹೊಳ್ಳ, ಸಂಸ್ಕೃತದಲ್ಲಿ 125, ಇಂಗ್ಲಿಷ್ ನಲ್ಲಿ 98, ಕನ್ನಡದಲ್ಲಿ 99, ಗಣಿತದಲ್ಲಿ 99, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳಿಸಿದ್ದಾರೆ.

English summary
Two talented students from the Mysore district have emerged as the topper to mysuru in the SSLC result of 2019-2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X