• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್

|

ಮೈಸೂರು, ಏಪ್ರಿಲ್ 13 : ಸಾಹಸಸಿಂಹ ಡಾ.ವಿಷ್ಣು ವರ್ಧನ್ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಸಮಸ್ಯೆ ನಿವಾರಣೆಯಾಗಿದ್ದು, ಕೆಳ ನ್ಯಾಯಾಲಯ ಸ್ಮಾರಕ ನಿರ್ಮಾಣದ ಭೂ ಒಡೆತನಕ್ಕೆ ಸಂಬಂಧಿಸಿದಂತೆ ನೀಡಿದ್ದ ತಾತ್ಕಾಲಿಕ ಪ್ರತಿಬಂಧಕಾಜ್ಞೆ (ಸಿವಿಲ್ ಇಂಜೆಕ್ಷನ್) ಯನ್ನು ತೆರವುಗೊಳಿಸಿ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಮೈಸೂರು ತಾಲೂಕಿನ ಉದ್ಬೂರು ಹತ್ತಿರವಿರುವ ಮಾನಂದವಾಡಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಕಸಬಾ ಹೋಬಳಿ ಹಾಲಾಳು ಗ್ರಾಮದ ಸರ್ವೆ ನಂ.8ರಲ್ಲಿ 6 ಎಕರೆ 5 ಗುಂಟೆ ಸರ್ಕಾರಿ ಭೂಮಿಯಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿಯನ್ನು ಜಿಲ್ಲಾಡಳಿತ ಮಂಜೂರು ಮಾಡಿತ್ತು.

ಡಾ.ವಿಷ್ಣು ಸ್ಮಾರಕ ವಿವಾದ ಬಗೆಹರಿಸಲು ಸುದೀಪ್ ನೀಡಿದ 4 ಸಲಹೆಗಳು

ಆದರೆ ಆ ಭೂಮಿ ನಮಗೆ ಮಂಜೂರಾಗಿದ್ದು, ಅದರ ಒಡೆತನ ನಮ್ಮದು ಎಂದಿದ್ದರು. ಇದನ್ನು ವಿಚಾರಣೆ ಮಾಡಿದ ಮೈಸೂರಿನ ಸಿವಿಲ್​​ ಕೋರ್ಟ್ ಸ್ಮಾರಕ ನಿರ್ಮಾಣಕ್ಕೆ ತಡೆಯೊಡ್ಡಿತ್ತು. ಇದನ್ನು ಪ್ರಶ್ನಿಸಿದ ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಅರ್ಜಿಸಲ್ಲಿಸಿತ್ತು. ಇದೀಗ ಹೈಕೋರ್ಟ್ ಆದೇಶದಂತೆ ವಿಷ್ಣು ಸ್ಮಾರಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅಂತಿಮ ವಿಚಾರಣೆ ಮಾತ್ರ ಬಾಕಿ ಇದೆ.

ಮಂಡ್ಯ ಪ್ರಚಾರದಲ್ಲಿ 'ವಿಷ್ಣು ಸ್ಮಾರಕ' ವಿಷ್ಯ ಬೇಕಿತ್ತಾ? ಅಭಿಮಾನಿಗಳು ಗರಂ

ಆದರೆ ಇತ್ತ ವಿಷ್ಣುವರ್ಧನ್​ ಅವರು ಲೀನವಾಗಿರುವ ಅಭಿಮಾನ್​ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕೆಂಬುದು ಅಭಿಮಾನಿಗಳ ಕನಸಾಗಿದೆ. ಆದರೆ, ಇಲ್ಲಿಯೂ ಕೂಡ ವಿವಾದ ಕೋರ್ಟ್​ ಮೆಟ್ಟಿಲೇರಿರುವುದು ಕನಸಿಗೆ ಹಿನ್ನಡೆಯಾಗಿದೆ. ಈ ಬಗ್ಗೆ ವಿಷ್ಣು ಸೇನಾ ಸಮಿತಿ ನೇತೃತ್ವದಲ್ಲಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದವು. ಆದರೆ ಇದುವರೆಗೂ ಸ್ಮಾರಕ ನಿರ್ಮಾಣ ಆಗುವ ಕನಸು ಸಾಕಾರವಾಗಿಲ್ಲವೆಂಬುದು ಹತಾಶೆಯ ಸಂಗತಿ.

English summary
Dr. Vishnuvardhan memorial will build in Mysuru district. High court give the green signal to Vishnuvardhan Memorial issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X