ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಕೊಟ್ಟಿದ್ದೇನು?
ಮೈಸೂರು, ಮಾ. 14 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡನೆ ಮಾಡಿದ 1,42, 534 ಕೋಟಿ ರೂ. ಬಜೆಟ್‌ನಲ್ಲಿ ತವರು ಜಿಲ್ಲೆ ಮೈಸೂರಿಗೂ ಆದ್ಯತೆ ನೀಡಿದ್ದಾರೆ. ಜಿಲ್ಲೆಯಲ್ಲಿನ ಹಲವು ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದಾರೆ.
ಕೆ.ಆರ್.ಎಸ್. ಜಲಾಶಯದ ಬೃಂದಾವನ ಉದ್ಯಾನವನವನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದರ್ಜೆಗೆ ಏರಿಸುವುದು, ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವಕ್ಕೆ 50 ಕೋಟಿ ರೂ. ಅನುದಾನ, ಮೈಸೂರು ವಿವಿಯಲ್ಲಿ ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪನೆ ಮಾಡಲು 1 ಕೋಟಿ ಅನುದಾನ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. [ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]

ಸಿಎಂ ಸಿದ್ದರಾಮಯ್ಯ ಮೈಸೂರಿಗೆ ನೀಡಿದ್ದೇನು?
* ಕುಪ್ಪಣ್ಣ ಪಾರ್ಕ್, ಮೈಸೂರು ಸರ್ಕಾರ ಅತಿಥಿಗೃಹ ಉದ್ಯಾನವನಗಳ ಅಭಿವೃದ್ಧಿ
* ಮೈಸೂರು ಭಾನುವಾರದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ
* ಮೈಸೂರು ನಗರದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ [ಬಜೆಟ್ ಮುಖ್ಯಾಂಶಗಳು ಇಲ್ಲಿವೆ]
* ಮೈಸೂರು ಎಪಿಎಂಸಿಯಲ್ಲಿ ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯ
* ಟೀ. ನರಸೀಪುರ ತಾಲೂಕಿನ ಮಾಧವ ಮಂತ್ರಿ ಅಣೆಕಟ್ಟು ಆಧುನೀಕರಣ
* ಕೆ.ಆರ್.ಎಸ್. ಜಲಾಶಯದ ಬೃಂದಾವನ ಉದ್ಯಾನವನವನ್ನು ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದರ್ಜೆಗೆ [ಮಂಡ್ಯ ಜಿಲ್ಲೆ]
* ಮೈಸೂರು ವಿವಿ ಶತಮಾನೋತ್ಸವಕ್ಕೆ 50 ಕೋಟಿ ರೂ.
* ಮೈಸೂರು ವಿವಿಯಲ್ಲಿ ಯು.ಆರ್. ಅನಂತಮೂರ್ತಿ ಅಧ್ಯಯನ ಪೀಠ ಸ್ಥಾಪನೆಗೆ 1 ಕೋಟಿ ಅನುದಾನ
* ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ನಳಂದ ಬೌದ್ಧ ಅಧ್ಯಯನ ಪೀಠ ಸ್ಥಾಪನೆಗೆ 5 ಕೋಟಿ
* ಮೈಸೂರಿನಲ್ಲಿ ಸಾಂಕ್ರಾಮಿಕ ರೋಗ ಪತ್ತೆ ಪ್ರಯೋಗಾಲಯ
* ಮೈಸೂರಿನ ಗಿರಿಜನ ಸಂಶೋಧನಾ ಸಂಸ್ಥೆಯಲ್ಲಿ ಆದಿವಾಸಿ ಅಧ್ಯಯನ ಕೇಂದ್ರ ಸ್ಥಾಪನೆ
* ಮೈಸೂರಿನಲ್ಲಿ ಬಿ.ರಾಚಯ್ಯ ಮತ್ತು ಎನ್.ರಾಚಯ್ಯ ಸ್ಮಾರಕ ನಿರ್ಮಾಣ
* ಪಾರಂಪರಿಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಮೈಸೂರಿನ ಸಮಗ್ರ ಅಭಿವೃದ್ಧಿ
* ಮೈಸೂರಿನಲ್ಲಿ ಕಾವೇರಿ ನದಿಯ ಕುರಿತು ಬಹುಮಾಧ್ಯಮ ಗ್ಯಾಲರಿ ಸ್ಥಾಪನೆಗೆ 3.5 ಕೋಟಿ ರೂ.
* ಮೈಸೂರಿನ ಹಿಮ್ಮಾವು ಗ್ರಾಮದ ಬಳಿ 100 ಎಕರೆ ಸರ್ಕಾರಿ ಜಮೀನಿನಲ್ಲಿ ಚಿತ್ರನಗರಿ ನಿರ್ಮಾಣ












Click it and Unblock the Notifications