ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾಖಲೆ ಇಲ್ಲದ 11.79 ಲಕ್ಷ ರೂ ವಶ
ಮೈಸೂರು, ಏಪ್ರಿಲ್ 07: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 11.79 ಲಕ್ಷ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ರಮ್ಮನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿ ನಗದು ವಶಕ್ಕೆ ಪಡೆಯಲಾಗಿದ್ದು, ಲಕ್ಷಾಂತರ ರೂಪಾಯಿಯ ಹಿಂದಿನ ಮೂಲದ ಬಗ್ಗೆ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾಖಲೆ ಇಲ್ಲದೆ ಹಣವನ್ನು ಸಾಗಿಸುತ್ತಿದ್ದ ವೇಳೆ ತಪಾಸಣೆ ಮಾಡಿರುವ ಚೆಕ್‌ಪೋಸ್ಟ್ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆ ವಶಕ್ಕೆ ಹಸ್ತಾಂತರಿಸಿದ್ದಾರೆ.

ಈವರೆಗೂ ಜಿಲ್ಲೆಯಲ್ಲಿ ಅಧಿಕಾರಿಗಳು ಸುಮಾರು 31,56,300 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದಿದ್ದಾರೆ. ಈ ಪೈಕಿ 11,79,500 ಲಕ್ಷ ರೂ. ರಮ್ಮನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿದೆ. ಅಲ್ಲದೇ, 26,320 ರೂ. ಮೌಲ್ಯದ 40 ಕುಕ್ಕರ್, 20 ತವಾ ಮತ್ತು 41,583 ರೂ. ಮೌಲ್ಯದ 70.69 ಲೀ. ಮದ್ಯ ಹಾಗೂ 25 ಸಾವಿರ ರೂ. ಮೌಲ್ಯದ 1 ಕೆಜಿ ಗಾಂಜಾ ವಶಕ್ಕೆ ಪಡೆದಿದಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸಲಾಗುತ್ತಿದ್ದ ಕೋಟಿ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾಡಳಿತದ ತಪಾಸಣಾ ಅಧಿಕಾರಿಗಳು ಪೊಲೀಸರು ಮತ್ತು ಅರೆಸೇನಾ ಪಡೆಯು ನಗರ ಸೇರಿದಂತೆ ಜಿಲ್ಲೆಯ 51 ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ಕಟ್ಟುನಿಟ್ಟಿನ ತಪಾಸಣೆ ನಡೆಸಿದ್ದಾರೆ.
ಈವರೆಗೆ 1,06,38,060 ರೂ. ಮೌಲ್ಯದ 33,744.66 ಲೀ. ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಪೊಲೀಸರು 1,06,26,821 ರೂ.ಮೌಲ್ಯದ 33,742.05 ಲೀ. ಮತ್ತು ಪೊಲೀಸರು 1,017 ರೂ.ಮೌಲ್ಯದ 2.61 ಲೀ. ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಮತದಾರರಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ!
ಮೈಸೂರು: ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾರರ ಅಂತಿಮ ಪಟ್ಟಿಯೂ ಪ್ರಕಟಗೊಂಡಿದೆ. ಏಪ್ರಿಲ್ 1ರಂದು 18 ವರ್ಷ ತುಂಬುವ ಎಲ್ಲರಿಗೂ ಮತದಾನದ ಹಕ್ಕು ಇದೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಬೇಕೆಂಬುದು ಚುನಾವಣಾ ಆಯೋಗದ ಆಶಯ ಕೂಡ. ಹೀಗಾಗಿ ಮತಪಟ್ಟಿಗೆ ಹೆಸರು ಸೇರಿಸಲು ಇನ್ನೂ 5 ದಿನಗಳ ಕಾಲಾವಕಾಶವಿದೆ.
18 ವರ್ಷ ಪೂರೈಸಿರುವವರು, ಸತತ ಆರು ತಿಂಗಳಿನಿಂದ ಒಂದೇ ಪ್ರದೇಶದಲ್ಲಿ ನೆಲೆಸಿರುವವರು ಮತದಾನ ಮಾಡಲು ಅರ್ಹರು. ಏ. 11ರೊಳಗೆ ತಮ್ಮ ಹೆಸರನ್ನು ಸೇರಿಸಲು ಚುನಾವಣಾ ಆಯೋಗ ಆನ್‌ಲೈನ್ ಹಾಗೂ ಆನ್‌ಲೈನ್ ಎರಡರಲ್ಲೂ ಅವಕಾಶ ಕಲ್ಪಿಸಿದೆ. ಹೀಗಾಗಿ ನೊಂದಣಿ ಮಾಡಿಕೊಳ್ಳಲುವ ಮೂಲಕ ಅರ್ಹರು ಈ ಬಾರಿಯೇ ಮತದಾನ ಮಾಡಬಹುದು.
ಸಾರ್ವಜನಿಕರು ತಮ್ಮ ಹೆಸರು ಮತಪಟ್ಟಿಯಲ್ಲಿ ಇದೆಯೇ ಎಂಬುದನ್ನು 'ವೋಟರ್ ಹೆಲ್ತ್‌ಲೈನ್' ಆ್ಯಪ್ ಮೂಲಕವೂ ಪರಿಶೀಲನೆ ಮಾಡಿಕೊಳ್ಳಬಹುದು. ಅಲ್ಲದೆ, ಈ ಆ್ಯಪ್‌ನಲ್ಲಿ ಹೊಸದಾಗಿ ಹೆಸರು ಸೇರಿಸಬಹುದು. ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ವೋಟರ್ ಐಡಿ ನಂಬರ್ ನಮೂದಿಸಿದರೆ ವೋಟರ್ ಕಾರ್ಡ್ ಮಾಹಿತಿ, ಮತಗಟ್ಟೆ, ಮತ ಹಾಕುವ ಶಾಲೆ ಹೆಸರು ಗೋಚರವಾಗುತ್ತದೆ.
ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೂಲಕ ಮತಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ವೋಟರ್ ಹೆಲ್ತ್‌ಲೈನ್ ಆ್ಯಪ್ ಹಾಗೂ 1950 ಟೋಲ್ ಫ್ರೀ ನಂಬರ್ ಮೂಲಕವೂ ಹೆಸರು ಸೇರಿಸಬಹುದು. ಬೂತ್ ಮಟ್ಟದಲ್ಲಿರುವ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಿದರೆ ಗರುಡ ಆ್ಯಪ್‌ನಲ್ಲೂ ಆನ್‌ಲೈನ್ ಮೂಲಕ ಹೆಸರು ಸೇರ್ಪಡೆ ಮಾಡಿಸಿಕೊಳ್ಳುತ್ತಾರೆ.
ಹೊಸದಾಗಿ ಹೆಸರು ಸೇರಿಸಲು ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಶಾಲಾ-ಕಾಲೇಜಿನಲ್ಲಿ ನೀಡಿರುವ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ವಿಳಾಸದ ಪುರಾವೆಯ ಜೆರಾಕ್ಸ್ (ಬ್ಯಾಂಕ್, ಅಂಚೆ ಪಾಸ್ ಬುಕ್, ಪಡಿತರ ಚೀಟಿ, ಡ್ರೈವಿಂಗ್ ಲೈಸೆನ್ಸ್, ಗ್ಯಾಸ್ ಬಿಲ್.. ಇತ್ಯಾದಿ) ಪ್ರತಿಯನ್ನು ತಮ್ಮ ಭಾವಚಿತ್ರದೊಂದಿಗೆ ಸಲ್ಲಿಸಬೇಕು.
ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ವ್ಯಾಪ್ತಿಯ ಮತದಾರರು ಭರ್ತಿ ಮಾಡಿದ ಅರ್ಜಿಯನ್ನು ನಗರ ಪಾಲಿಕೆ ಕಚೇರಿಯ ಎಲೆಕ್ಷನ್ ಬ್ರಾಂಚ್‌ಗೆ ತಲುಪಿಸಬೇಕು. ಚಾಮುಂಡೇಶ್ವರಿ, ವರುಣ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ, ಎಚ್.ಡಿ.ಕೋಟೆ ಕ್ಷೇತ್ರದ ಮತದಾರರು ತಹಶೀಲ್ದಾರ್ ಕಚೇರಿಗೆ ಅರ್ಜಿ ನೀಡಬೇಕು. 15 ದಿನದೊಳಗೆ ವೋಟರ್ ಐಡಿ ಮನೆ ವಿಳಾಸಕ್ಕೆ ಬರುತ್ತದೆ ಎನ್ನುವ ಮಾಹಿತಿಯನ್ನು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications