ಬನ್ನೂರು ಪುರಸಭೆ ಜೆಡಿಎಸ್ ತೆಕ್ಕೆಗೆ: ಶುಭಕೋರಿದ ಸಂಸದ ಯುದುವೀರ್ ಒಡೆಯರ್

ಮೈಸೂರು, ಸೆಪ್ಟೆಂಬರ್‌ 06: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಪುರಸಭೆಯ ಗದ್ದುಗೆ ಜೆಡಿಎಸ್ ಪಕ್ಷದ ಪಾಲಾಗಿದೆ. ಅಧ್ಯಕ್ಷರಾಗಿ ಜೆಡಿಎಸ್‌ನ ಬಿ.ಎನ್.ಕೃಷ್ಣೆಗೌಡ ಅವಿರೋಧವಾಗಿ ಆಯ್ಕೆಗೊಂಡರೆ, ಬಿಜೆಪಿಯ ನಾಗರತ್ನ ಪ್ರಭಾಕರ ಬನ್ನೂರು ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪುರಸಭೆಯ ಕೊನೆ ಅವಧಿಯ ಅಧ್ಯಕ್ಷ ಸ್ಥಾನ ಬಿಸಿಬಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂಎ ಮೀಸಲಾತಿ ನಿಗದಿಗೊಂಡಿತ್ತು. 23 ಸದಸ್ಯರ ಸಂಖ್ಯಾಬಲ ಹೊಂದಿರುವ ಪುರಸಭೆಯಲ್ಲಿ ಜೆಡಿಎಸ್ 12, ಕಾಂಗ್ರೆಸ್ 7, ಬಿಜೆಪಿ 2 ಮತ್ತು ಪಕ್ಷೇತರ 2 ಬಲಾಬಲವನ್ನು ಹೊಂದಿವೆ. ಶುಕ್ರವಾರ ನಿಗದಿಯಾಗಿದ್ದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡ್ ನ ಬಿ. ಎನ್. ಕೃಷ್ಣೆಗೌಡ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಪ್ರಭಾಕರ್ ಮಾತ್ರ ನಾಮಪತ್ರ ಸಲ್ಲಿಸಿದರು.

JDS Party Won In Bannur Municipal Election Of Narasipura Taluk

ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಇವರಿಬ್ಬರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನಂತರ ಮಾತನಾಡಿ ನೂತನ ಅಧ್ಯಕ್ಷರು, ನನ್ನ ಆಯ್ಕೆಗೆ ನಮ್ಮ ಪಕ್ಷ ಮಾಜಿ ಶಾಸಕರಾದ ಎಂ.ಆಶ್ವಿನ್ ಕುಮಾರ್, ಮೈಸೂರು- ಕೊಡಗು ಸಂಸದರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದರು. ಅಲ್ಲದೇ ಪುರಸಭೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಮಾತನಾಡಿ, ಕುಮಾರಣ್ಣ ಮತ್ತು ಮಾಜಿ ಪ್ರಧಾನಿ ದೇವೇಗೌಡರ ನಿರ್ದೇಶನದ ಮೇರೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎರಡು ಪಕ್ಷದ ಸದಸ್ಯರು ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮಿಸಬೇಕು ಎಂದು ಕರೆ ನೀಡಿದರು.

ಶುಭಕೋರಿದ ಸಂಸದ ಯದುವೀರ್ ಒಡೆಯರ್

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ನಂತರ ಸ್ಥಳಕ್ಕೆ ಆಗಮಿಸಿದ ಮೈಸೂರು -ಕೊಡಗು ಸಂಸದ ಕೃಷ್ಣ ದತ್ತ ಯದುವೀರ್ ಒಡೆಯರ್ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇಬ್ಬರಿಗೂ ಶುಭಕೋರಿದರು. ಇದೇ ವೇಳೆ ಮಾತನಾಡಿದ ಅವರು, 'ರಾಜ್ಯ, ದೇಶದ ಅಭಿವೃದ್ಧಿಗಾಗಿ ಎನ್‌ಡಿಎ ಅಧಿಕಾರಕ್ಕೆ ಬರುವ ಅವಶ್ಯಕತೆಯಿದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಸ್ಥಳೀಯ ಸಂಸ್ಥೆಗಳು ಮತ್ತು ವಿಧಾನಸಭೆ, ಮತ್ತು ಎಲ್ಲ ಹಂತದಲ್ಲೂ ಎನ್‌ಡಿಎಅಧಿಕಾರ ಹಿಡಿಯುವ ಅನಿವಾರ್ಯತೆ ಇದೆ. ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಉತ್ತಮ ಕೆಲಸಗಳನ್ನು ಮಾಡುವ ಮುಖೇನ ಜನರ ವಿಶ್ವಾಸ ಗಳಿಸಿ ಮತ್ತೆ ಅಧಿಕಾರ ಹಿಡಿಯಬೇಕು'ಎಂದರು.

ಈ ವೇಳೆ ಬನ್ನೂರು ಪುರಸಭಾ ಸದಸ್ಯರುಗಳಾದ ಭಾಗ್ಯಶ್ರೀ ಕೃಷ್ಣ, ಎಸ್. ಭಾಗ್ಯ, ಎಂ. ಮಹೇಶ್,ಆನಂದ್, ಎಂ.ಆರ್.ಸೌಮ್ಯರಾಣಿ, ನಂಜುಂಡಸ್ವಾಮಿ, ಬಿ.ಆರ್.ಶ್ರೀನಿವಾಸ್, ಅನಂತಮೂರ್ತಿ, ಶೋಭಾಸತೀಶ್, ದಿವ್ಯಾಪೈ, ಚಂದ್ರು, ಫಿರ್ದೋಸ್, ಫೀರ್ ಖಾನ್, ಬಿ ಎಸ್.ಲೋಕಾಂಬಿಕ ಶಿವಮೂರ್ತಿ, ಪುಷ್ಪವತಿ, ಮೂರ್ತಿ, ಬಿ.ಕೆ.ಶಾಂತರಾಜು, ಶಿವಣ್ಣ, ಚೆಲುವರಾಜು, ಸಿ.ಹೆಚ್.ವಿಜಯಕುಮಾರ್, ಸಿ.ಸಿ.ಸುರೇಶ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೊಟೇಲ್ ರಾಮಸ್ವಾಮಿ,

ಬಿಜೆಪಿ ಜಿಲ್ಲಾಧ್ಯಕ್ಷರ ಎಲ್.ಆರ್.ಮಹದೇವಸ್ವಾಮಿ, ಮಾಜಿ ಜಿಪಂ ಸದಸ್ಯ ಜಯಪಾಲಭರಣಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿನ್ನಸ್ವಾಮಿ, ವಾಸುದೇವ, ಸುರೇಶ, ರಾಮಚಂದ್ರ, ಪ್ರಭಾಕರ್, ಪರಿಸರ ವೇದಿಕೆ ಸಮಿತಿ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ವಕೀಲ ಶಿವಮೂರ್ತಿ, ಅತ್ತಹಳ್ಳಿ ಕುಮಾರ, ಕಟ್ಟೆಪುರ ಸಿದ್ದಪ್ಪ, ಪೈಲ್ವಾನ್ ಚಂದ್ರು, ಬಸವನಹಳ್ಳಿ ರಾಜು, ವೆಂಕಟೇಶ್, ಕಟ್ಟೆಕೊಪ್ಪಲು ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+