• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಬಿಚ್ಚಿಟ್ಟ ಗೆಲುವಿನ ರಹಸ್ಯ..!

|

ಮೈಸೂರು, ಮಾರ್ಚ್.05: ಚುನಾವಣೆ ಬಂದಾಗ ರಾಜಕಾರಣಿಗಳಿಗೆ ತಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಪಡಯುವುದೇ ಒಂದು ದೊಡ್ಡ ಸಾಹಸವಾಗಿದ್ದರೆ, ಇನ್ನು ಟಿಕೆಟ್ ಪಡೆದ ನಂತರ ಮತದಾರರ ಬಳಿಗೆ ಹೋಗಿ ಮತ ಕೇಳುವುದಂತು ದುಸ್ಸಾಹಸವೇ ಸರಿ.

ಇತ್ತೀಚೆಗಿನ ದಿನಗಳಲ್ಲಿ ಚುನಾವಣೆಯನ್ನು ಎದುರಿಸೋದು ಅಭ್ಯರ್ಥಿಗಳಿಗೆ ಸುಲಭವಾಗಿ ಉಳಿದಿಲ್ಲ. ಮತದಾರರು ಯಾವಾಗ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ತಿಳಿಯುವುದೇ ಕಷ್ಟಸಾಧ್ಯವಾಗಿದೆ. ಚುನಾವಣೆಯಲ್ಲಿ ಮತ ಹಾಕುವವನು ಮತದಾರನೇ ಆದರೂ ನಮ್ಮ ಬಹಳಷ್ಟು ಅಭ್ಯರ್ಥಿಗಳು ಅದೃಷ್ಟವನ್ನು ನಂಬುತ್ತಾರೆ. ಜತೆಗೆ ದೇವರಲ್ಲಿ ಮೊರೆಹೋಗುತ್ತಾರೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸಿ ಮುಖ್ಯ ಮಂತ್ರಿ ಮಾಡುವಂತೆ ಎಚ್.ಡಿ.ಕುಮಾರಸ್ವಾಮಿ ಹರಕೆ ಕಟ್ಟಿಕೊಂಡಿದ್ದು ಗುಟ್ಟಾಗಿಯೇನು ಉಳಿದಿಲ್ಲ.

ದೇವರ ದಯೆಯೋ ಕಾಕತಾಳೀಯವೂ ಆಡಳಿತ ನಡೆಸಲು ಮ್ಯಾಜಿಕ್ ಸಂಖ್ಯೆ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಇದನ್ನು ಅದೃಷ್ಟ ಎನ್ನದೆ ಇರಲು ಸಾಧ್ಯವೆ? ಇದನ್ನೇ ನಿದರ್ಶನವಾಗಿಟ್ಟುಕೊಂಡಿರುವ ನಮ್ಮ ಕೆಲವು ರಾಜಕಾರಣಿಗಳು ಇದೀಗ ತಮ್ಮ ಕ್ಷೇತ್ರಕ್ಕೆ ತೆರಳಿ ಮತದಾರರನ್ನು ಭೇಟಿ ಮಾಡುವ ಬದಲಿಗೆ ದೇವಸ್ಥಾನಗಳಿಗೆ ಭೇಟಿಕೊಡತೊಡಗಿದ್ದಾರೆ.

ದೇವೇಗೌಡರ ಕುಟುಂಬ ಪ್ರತಿ ಬಾರಿ ಶೃಂಗೇರಿ ಶಾರದೆಯ ಮೊರೆ ಹೋಗುವುದೇಕೆ?

ವಿವಿಧ ಪೂಜೆ, ಹರಕೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಗೆಲುವಿಗಾಗಿ ದೇವರ ಮೊರೆ ಹೋದವರು, ಹರಕೆ ಕಟ್ಟಿಕೊಂಡವರ ಪೈಕಿ ಕೆಲವರು ಆಗೊಮ್ಮೆ ಈಗೊಮ್ಮೆ ಸಮಯ ಸಂದರ್ಭಕ್ಕನುಸಾರವಾಗಿ ಆ ಗುಟ್ಟನ್ನು ಸಾರ್ವಜನಿಕವಾಗಿ ಬಯಲು ಮಾಡುತ್ತಾರೆ. ಇನ್ನು ಕೆಲವರು ಗೌಪ್ಯವಾಗಿಟ್ಟುಕೊಳ್ಳುತ್ತಾರೆ. ಮುಂದೆ ಓದಿ...

 ಬೋಲೆ ಬಾಲೆ ಶಾವಲಿ ದರ್ಗಾದ ಮಹಿಮೆ

ಬೋಲೆ ಬಾಲೆ ಶಾವಲಿ ದರ್ಗಾದ ಮಹಿಮೆ

ಇದೀಗ ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ.ಮಹದೇವ್ ಅವರು ತಮ್ಮ ಗೆಲುವಿನ ರಹಸ್ಯವೊಂದನ್ನು ಹೊರ ಹಾಕಿದ್ದಾರೆ. ಅವರು ಗೆಲ್ಲಲು ಪಿರಿಯಾಪಟ್ಟಣ ಬಳಿಯ ಕಿರನಲ್ಲಿ ಸಮೀಪದ ಬೋಲೆ ಬಾಲೆ ಶಾವಲಿ ದರ್ಗಾದ ಮಹಿಮೆಯೇ ಕಾರಣವಂತೆ.

ಪಿರಿಯಾಪಟ್ಟಣ ಮಾಜಿ-ಹಾಲಿ ಶಾಸಕರ ಕಿತ್ತಾಟ: ಸಿದ್ದರಾಮಯ್ಯಗೆ ದೂರು

 ದರ್ಗಾದಲ್ಲಿ ಹರಕೆ ಮಾಡಿದ್ದೆ

ದರ್ಗಾದಲ್ಲಿ ಹರಕೆ ಮಾಡಿದ್ದೆ

ದರ್ಗಾದ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಮಹದೇವ್ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಗೆಲುವು ನೀಡುವಂತೆ ದರ್ಗಾದಲ್ಲಿ ಹರಕೆ ಮಾಡಿದ್ದೆ ಅದರಂತೆ ಗೆಲುವು ಸಾಧಿಸಿ ಶಾಸಕನಾಗಿರುವುದಾಗಿ ಹೇಳಿದ್ದಾರೆ.

ಪಿರಿಯಾಪಟ್ಟಣದಲ್ಲಿ ಪೊಲೀಸ್ ಠಾಣೆಯೇರಿದ ಕೈ-ತೆನೆ ಕಿತ್ತಾಟ!

 ಗೆಲುವು ಅಷ್ಟು ಸುಲಭವಾಗಿರಲಿಲ್ಲ

ಗೆಲುವು ಅಷ್ಟು ಸುಲಭವಾಗಿರಲಿಲ್ಲ

ಕಳೆದ ಬಾರಿಯ ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಅವತ್ತು ಶಾಸಕರಾಗಿದ್ದ ಕಾಂಗ್ರೆಸ್‌ನ ಕೆ.ವೆಂಕಟೇಶ್ ಅವರನ್ನು ಸೋಲಿಸುವುದು ಜೆಡಿಎಸ್ ನ ಕೆ.ಮಹದೇವ್ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಇವರಿಬ್ಬರು ರಾಜಕೀಯವಾಗಿ ಕಡು ವೈರಿಗಳಾಗಿದ್ದರು. ಆದರೆ ಈ ಭಾಗದಲ್ಲಿ ಜನ ಜೆಡಿಎಸ್ ನತ್ತ ಒಲವು ತೋರಿದ್ದರಲ್ಲದೆ, ವೆಂಕಟೇಶ್ ಅವರ ವಿರುದ್ಧದ ಅಲೆಯೂ ಕೆಲಸ ಮಾಡತೊಡಗಿತ್ತು. ಆದರೂ ಕೆ.ಮಹದೇವ್ ಅವರಿಗೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ.

 ರಾಜಕೀಯ ತಂತ್ರದೊಂದಿಗೆ ದೇವರಲ್ಲಿ ಹರಕೆ

ರಾಜಕೀಯ ತಂತ್ರದೊಂದಿಗೆ ದೇವರಲ್ಲಿ ಹರಕೆ

ಹೀಗಾಗಿ ಕೆ.ಮಹದೇವ್ ಅವರು ಮತದಾರರ ಮೇಲೆ ನಂಬಿಕೆಯಿಡುವುದರೊಂದಿಗೆ ಬೋಲೆ ಬಾಲೆ ಶಾವಲಿ ದರ್ಗಾದ ಮೊರೆ ಹೋಗಿದ್ದರು. ಈಗ ಅದು ಫಲಿಸಿದೆ ಎಂದು ಅವರೇ ಹೇಳಿದ್ದಾರೆ. ಈಗಾಗಲೇ ಅನಿತಾಕುಮಾರಸ್ವಾಮಿ ಅವರು ತನ್ನ ಪುತ್ರ ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯಕ್ಕಾಗಿ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿಗೆ ಹರಕೆ ಕಟ್ಟಿದ್ದಾರೆ. ಒಟ್ಟಾರೆ ಮುಂದಿನ ಚುನಾವಣೆ ವೇಳೆಗೆ ರಾಜಕಾರಣಿಗಳು ಗೆಲುವಿಗಾಗಿ ರಾಜಕೀಯ ತಂತ್ರದೊಂದಿಗೆ ದೇವರಲ್ಲಿ ಹರಕೆ ಕಟ್ಟಿಕೊಳ್ಳುವುದು, ವಿಶೇಷ ಪೂಜೆ, ಹೋಮ, ಹವನಗಳಲ್ಲಿ ನಿರತರಾಗುವುದರಲ್ಲಿ ಎರಡು ಮಾತಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS MLA K. Mahadev of Piriyapatna told the secret of his victory.His victory secret is Bole Bhale Shavali Darga, Its near by Kiranalli, Periyapatna. Here's a detailed news about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more