ವಿಜಯ್ ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಬರಲಿಲ್ಲವೇಕೆ?

ಮೈಸೂರು, ಮಾರ್ಚ್ 25: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಮೂಲಕ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದ್ದು, ಆರಂಭದಲ್ಲೇ ಒಮ್ಮತ ಮೂಡದಿರುವುದು ಕಂಡುಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮೈಸೂರು -ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿ.ಎಚ್.ವಿಜಯ್ ಶಂಕರ್ ನಾಮಪತ್ರಕ್ಕೆ ಪೂಜೆ ಸಲ್ಲಿಸುವ ವೇಳೆ ಹಾಗೂ ಮೆರವಣಿಗೆಗೆ ಜೆಡಿಎಸ್ ನಾಯಕರು ಗೈರಾಗಿದ್ದಾರೆ. ಹೀಗೆ ಸಮನ್ವಯ ಸಮಿತಿ ಅಧ್ಯಕ್ಷರ ತವರು ಜಿಲ್ಲೆಯಲ್ಲೇ ಸಮನ್ವಯದ ಕೊರತೆ ಉಂಟಾಗಿದ್ದು ಎದ್ದು ಕಾಣುತ್ತಿತ್ತು.

JDS leaders not attended the CH Vijayshankar rally

ಅಲ್ಲದೇ, ಮೈತ್ರಿ ಅಭ್ಯರ್ಥಿ ವಿಜಯಶಂಕರ್ ನಾಮಪತ್ರ ಸಲ್ಲಿಸುವ ವೇಳೆ ಪೂಜೆ, ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೇಗೌಡ ಮೈಸೂರಿನಲ್ಲೇ ಇದ್ದರೂ ಗೈರಾಗಿದ್ದಾರೆ. ಇತ್ತ ರೋಡ್ ಶೋ ತುಂಬೆಲ್ಲಾ ಕಾಂಗ್ರೆಸ್ ಪರ ಘೋಷಣೆಗಳು ಕೂಗಿ ಬಂದವು. ಕಾಂಗ್ರೆಸ್ ಕಾರ್ಯಕರ್ತರು ಅಪಾರ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಆದರೆ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರ ಕಾಣಿಸಲಿಲ್ಲ. ಇದರಿಂದಾಗಿ ಮೈತ್ರಿ ಪಕ್ಷದಲ್ಲೇ ಅಪಸ್ವರ ಎದ್ದು ಕಾಣುತ್ತಿದೆ.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ವಿಜಯಶಂಕರ್ ಕಣಕ್ಕಿಳಿದಿದ್ದು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

JDS leaders not attended the CH Vijayshankar rally

ವಿಜಯಶಂಕರ್ ಗೆ ತನ್ವೀರ್ ಸೇಠ್ ಸಚಿವ ಸಾ. ರಾ ಮಹೇಶ್, ಮಾಜಿ ಸಚಿವ ಮಹಾದೇವಪ್ಪ, ಕೊಡಗು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಆ ಮೆರವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+